• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

    ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

    ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

    ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

    ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

    ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

    ಅಕ್ಕಪಡೆ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ: ಎಸ್ ಪಿ ಲಕ್ಷ್ಮಣ

    ಅಕ್ಕಪಡೆ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ: ಎಸ್ ಪಿ ಲಕ್ಷ್ಮಣ

    ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರು-ಸಂತೋಷ ಬಂಡೆ

    ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರು-ಸಂತೋಷ ಬಂಡೆ

    ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ ಪುಣೆಕರ್: ಡಾ ಎಂ ಬಿ ಪಾಟೀಲ

    ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ ಪುಣೆಕರ್: ಡಾ ಎಂ ಬಿ ಪಾಟೀಲ

    ಜ.17ರಂದು ದಿಶಾ ಪ್ರಗತಿ ಪರಿಶೀಲನಾ ಸಭೆ

    ಜ.17ರಂದು ದಿಶಾ ಪ್ರಗತಿ ಪರಿಶೀಲನಾ ಸಭೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

      ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

      ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

      ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

      ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

      ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

      ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

      ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

      ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

      ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

      ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

      ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

      ಅಕ್ಕಪಡೆ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ: ಎಸ್ ಪಿ ಲಕ್ಷ್ಮಣ

      ಅಕ್ಕಪಡೆ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ: ಎಸ್ ಪಿ ಲಕ್ಷ್ಮಣ

      ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರು-ಸಂತೋಷ ಬಂಡೆ

      ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರು-ಸಂತೋಷ ಬಂಡೆ

      ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ ಪುಣೆಕರ್: ಡಾ ಎಂ ಬಿ ಪಾಟೀಲ

      ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ ಪುಣೆಕರ್: ಡಾ ಎಂ ಬಿ ಪಾಟೀಲ

      ಜ.17ರಂದು ದಿಶಾ ಪ್ರಗತಿ ಪರಿಶೀಲನಾ ಸಭೆ

      ಜ.17ರಂದು ದಿಶಾ ಪ್ರಗತಿ ಪರಿಶೀಲನಾ ಸಭೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸಂಪಾದಕೀಯ

      ಭೀಮಾತೀರ: ಭೀಮೆಯ ನೀರಿನ ಮೂಲ ಜನ್ಮ ರಹಸ್ಯ..! ಅಬ್ಬಬ್ಬಾ ಈ ರೋಚಕಥೆ ಗೊತ್ತಾ..?

      ನನಗೆ ನೀವೇ ತಾನೇ ಮಕ್ಕಳು.!

      April 2, 2025
      0
      ಭೀಮಾತೀರ: ಭೀಮೆಯ ನೀರಿನ ಮೂಲ ಜನ್ಮ ರಹಸ್ಯ..! ಅಬ್ಬಬ್ಬಾ ಈ ರೋಚಕಥೆ ಗೊತ್ತಾ..?
      0
      SHARES
      637
      VIEWS
      Share on FacebookShare on TwitterShare on whatsappShare on telegramShare on Mail

      Special Story Written By Kori

      ಭೀಮಾತೀರದ ಭೀಮೆಯ ಒಂದು ಮಾತು..! ಮುಂದುವರಿದ ಇನ್ನೊಂದು ಭಾಗದ ಆತ್ಮಕಥೆ 

       

      ಮೊದಲಿಗೆ ನಾನು ಉಲ್ಕಾ ಶಿಲೆಯೊಳಗಿನ ಗರ್ಭದೊಳಗಡೆಗಿದ್ದೆ, ಜೀವ ಜಲವಾಗಿ ಬಂದು ಈ ಭೂಮಿಯ ಮೇಲೆ ಜನಿಸಿದೆ .!

       

      ನಾನು ಈ ಧರಣಿಯ ಮೇಲೆ ಜೀವ ಜಲವಾಗಿ ಹುಟ್ಟಿ ಹರಿಯುವ ಮುನ್ನ, ಕೋಟ್ಯಾಂತರ ವರ್ಷಗಳ ಹಿಂದೆ ಆಗಿ ಹೋದ ನನ್ನ ಗತಕಾಲದ ಇತಿಹಾಸದ ಕಥೆ ಬಹಳಷ್ಟು ರೋಮಾಂಚನಕಾರಿಯಾಗಿದೆ. ಮತ್ತು ಅಷ್ಟೇ ಸಂಘರ್ಷಮಯವಾದ ಸಂಗತಿಯಿಂದ ಕೂಡಿದೆ.ನನ್ನ
      ಜನ್ಮ ರಹಸ್ಯದ ಪೌರಾಣಿಕ ಕತೆಯನ್ನು ನೀವು ಕೇಳಿದ್ದೀರಿ.ಈಗ ಅದನ್ನು ಹೊರತು ಪಡಿಸಿ ವೈಜ್ಞಾನಿಕವಾದ ದೃಷ್ಠಿಕೋನದಿಂದ ಹೇಳಬೇಕಾದರೇ, ನನ್ನ ಜನ್ಮ ರಹಸ್ಯ ತುಂಬಾ ಜಟಿಲತೆಯಿಂದ ಹಾಗೂ ನಿಗೂಢತೆಯಿಂದ ಕೂಡಿದೆ.ನನ್ನ ವಿಷಯ ಚಿತ್ರ-ವಿಚಿತ್ರ-ವೈಚಿತ್ರಗಳ ಸಂಗಮವಾಗಿದೆ.!

      ಜಗತ್ತಿನ ಹತ್ತು ಹಲವಾರು ರಾಷ್ಟ್ರದ ಅತ್ಯುನ್ನತ ಶ್ರೇಣಿಯ ಖಗೋಳ ಶಾಸ್ತ್ರಜ್ಞರು ವರ್ಷಾನುಗಟ್ಟಲೇ,ನನ್ನ ಬಗ್ಗೆ ಅಂದರೇ ನೀರು ಹೇಗೆ ಈ ಧರೆಗೆ ಬಂದಿತು ಹೇಗೆ ಉಗಮವಾಯಿತು ಎನ್ನುವದರ ಕುರಿತು ಹಗಲಿರುಳು ತಮ್ಮ ತಲೆ ಕೆರೆದುಕೊಂಡು ನನ್ನ ಕುರಿತು ಅತ್ಯಂತ ಕ್ಲಿಷ್ಟಕರ ಸಂಗತಿಗಳನ್ನು ತಮ್ಮ ಒಂದಿಷ್ಟು ಸಂಶೋಧನೆ ಮೂಲಕ ಕಂಡು ಹಿಡಿದಿದ್ದಾರೆ. ಅವರು ಅಧ್ಯಯನ ಮಾಡಿ ಕಂಡು ಹಿಡಿದ ಸಂಶೋಧನೆ ಪೈಕಿ ವಿಭಿನ್ನವಾಗಿರುವ ಒಂದು‌ ಸಂಶೋಧನೆಯನ್ನು ಮಾತ್ರ ಈ ಸಂದರ್ಭದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುವೆ.ಈ ಭೂಮಿಯ ಮೇಲೆ ನಾವು ನಂಬುವ ದೇವರು ಹೇಗೆ ಸರ್ವಂತರಯಾಮಿಯಾಗಿ ಈ ಲೋಕದಲ್ಲಿ ಅಸ್ತಿತ್ವದಲ್ಲಿದ್ದಾನೋ,ನಾನು ಕೂಡ ಹಾಗೆ ನೀರಾಗಿ ಜೀವ ಜಲವಾಗಿ ಈ ಭೂಮಂಡಲವನ್ನು ಸುತ್ತುವರಿದಿದ್ದೇನೆ.ನಾನು ಕೂಡಾ ಕೆರೆ-ಬಾವಿ ಹೊಳೆ-ಹಳ್ಳ-ಕೊಳ್ಳ ನದಿ ಸರೋವರ, ಸಮುದ್ರ-ಸಾಗರ ರೂಪದಲ್ಲಿರುವೆ.ಆದರೆ ಈ ರೀತಿ ಎಲ್ಲಾ ಕಡೆಗೂ ಇರುವ ನನ್ನ ಮೂಲ ನೀರು ಮೊದಲ ಎಲ್ಲಿತ್ತು.? ಮತ್ತು ಅದು ಎಲ್ಲಿಂದ ಈ ಭೂಮಿಗೆ ಹೇಗೆ ಬಂತು.?ಇದನ್ನು ತಿಳಿದುಕೊಳ್ಳುತ್ತಾ ಹೋದಂತೆ ಇದು ಖಂಡಿತ ನಮಗೆ ವಿಸ್ಮಯಗಳ ಆಗರವಾಗಿದೆ ಎನಿಸುತ್ತದೆ. ಖಗೋಳ ಶಾಸ್ತ್ರಜ್ಞರ ಪ್ರಕಾರ ಮತ್ತು ಅವರು ಕಂಡು ಹಿಡಿದ ಸಂಶೋಧನೆ ಜೊತೆಗೆ ನಾನು ಕೂಡ ನನ್ನ ಅಚೇತನದಲ್ಲಿರುವ ಹಲವಾರು ಜನ್ಮದ ಸ್ಮೃತಿಗಳಲ್ಲಿ ಜನ್ಮಾಂತರದಿಂದ ಬಂದು ಸಂಗ್ರಹಿತವಾಗಿರುವ ನನ್ನ ನೆನಪಿನ ಸುರುಳಿಯ ಬಾಗಿಲನ್ನು ತೆರೆದು ನಿಮ್ಮ ಮುಂದೆ ಎಲ್ಲವನ್ನು ಬಿಚ್ಚಿ ಹೇಳುತ್ತೇನೆ.!

       

      ಭೂಮಿಯೊಂದು ಅಗ್ನಿ ಕುಂಡವಾಗಿತ್ತು

      ಇವತ್ತು ನಾವು ನೀವು ವಾಸಿಸುವ ಈ ಭೂಮಿ ಕೋಟ್ಯಾಂತರ ವರ್ಷಗಳ ಹಿಂದೆ ಮೊದಲಿಗೆ ಕೊತ ಕೊತ ಕುದಿಯುವ ಲಾವಾದಿಂದ ಕೂಡಿತ್ತು.ಅದು ನಿಗಿ ನಿಗಿ ಕೆಂಡದುಂಡೆಯಾಗಿ ಕಾಣತಿತ್ತು.ಅದರ ಉಷ್ಣಾಂಶ ಸಾವಿರಾರು ಪ್ಯಾರನ್ ಹಿಟ್ ನಿಂದ ಕೂಡಿ ಸಂಪೂರ್ಣ ಉಷ್ಣದ ಬೆಂಕಿಯ ಚೆಂಡಾಗಿತ್ತು.ಇಂತಹ ಧಗ ಧಗಿಸುವ ದಳ್ಳುರಿಯಿಂದ ಕೂಡಿಕೊಂಡು ಭೂಮಿ ಅಗ್ನಿಯ ಉಂಡೆಯಾಗಿದ್ದ ಸಂದರ್ಭದಲ್ಲಿ ನಾನು ಎಲ್ಲಿಯೂ ಆಗಿನ ಯಾವ ಹಂತದಲ್ಲಿಯೂ ಪತ್ತೆಯಾಗಿರಲಿಲ್ಲ.! ಆಗ ಈ ಭೂಮಿಯ ಮೇಲೆ ನೀರಿನ ಯಾವೊಂದು ಲಕ್ಷಣಗಳು ಅದರ ಕುರುಹುಗಳು ಈ ಭೂಮಿ ಮೇಲೆ ಎಲ್ಲಿಯೂ ಕಂಡು ಬಂದಿರಲಿಲ್ಲ.ಮೊದಲಿಗೆ ಬೆಂಕಿಯ ಚೆಂಡಾಗಿದ್ದ ಭೂಮಿಯೂ ಈ ಪ್ರಕ್ರಿಯೆಯಲ್ಲಿ ಸುಮಾರು ಕೋಟ್ಯಾಂತರ ವರ್ಷಗಳ ಕಾಲದ ಸಮಯ ತೆಗೆದುಕೊಂಡು ತನ್ನ ಅತ್ಯುಗ್ರಹ ಉಷ್ಣದೊಂದಿಗೆ ಹಾಗೆ ಸಾಗಿತ್ತು.ಇಲ್ಲಿ ಯಾವ ಜೀವ ಜಲ,ಜೀವ ಸಂಪತ್ತು,ಸಸ್ಯ ಸಂಪತ್ತು ಕಂಡು ಬಂದಿರಲ್ಲಿ.! ಏಕೆಂದರೆ ಅಂದು ಭೂಮಿಯೂ ಅಗ್ನಿಯ ಕುಂಡವಾಗಿತ್ತು.ಹೀಗೆ ಧಗ ಧಗಿಸುವ ಅಗ್ನಿಯ ಕುಂಡದಲ್ಲಿ ಏನಾದರೂ ಹುಟ್ಟಲು ಸಾಧ್ಯವೇ.?ಏನಾದರೂ ಎಂದಾದರೂ ಜೀವಿ ಉಗಮವಾಗಲು ಸಾಧ್ಯವೇ.?ಎಲ್ಲವೂ ಅಸಾಧ್ಯವಾದ ಮಾತಾಗಿತ್ತು.!

      ಹಲವಾರು ಕೋಟಿ-ಕೋಟಿ ವರ್ಷಗಳ ನಂತರ ಬಹು ದೂರದ ಕ್ಷೀರಪಥದಲಿ ಅಥವಾ ಆಕಾಶ ಗಂಗೆಯಲ್ಲಿ (ಗ್ಯಾಲಕ್ಸಿ)ಯಲ್ಲಿ ನಂಬಲು ಅಸಾಧ್ಯವಾಗದ ರೀತಿಯಲ್ಲಿ ನಕ್ಷತ್ರ ಪುಂಜಗಳ ಅಭೇದ್ಯ ಕೋಟೆಯಿಂದ ಆಶ್ಚರ್ಯಕರ ಸಂಗತಿ ಜರುಗಲು ಸಜ್ಜಾಯಿತು.ಅನಂತ ಆಕಾಶದಿಂದ ಅಸಂಖ್ಯಾತ ಉಲ್ಕಾ ಶಿಲೆಗಳು ಭೂಮಿಯ ಮೇಲೆ ದಾಳಿ ಮಾಡಲು ತಯಾರಾಗಿದ್ದವು. ಹಾಗಂತ ಇದು ಒಮ್ಮೆಗೆ ಶುರುವಾದಂತಹದಲ್ಲ. ಆಗಾಗ ನಕ್ಷತ್ರ ಮಂಡಲದಲ್ಲಿಂದ
      ಧೂಮಕೇತುಗಳ ದಾಳಿ, ಕ್ಷಿತಿಜಗಳಿಂದ ನಕ್ಷತ್ರಗಳ ಪತನವಾಗುವಿಕೆ ಇದೆಲ್ಲ ಜರಗುವಿಕೆ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆವಾಗಿದೆ. ಆದರೆ ಪ್ರಥ್ವಿಯ ಮೇಲೆ ಉಲ್ಕಾ ಶಿಲೆಗೆ ದಾಳಿಗೆ ಸಿದ್ದವಾದಾಗ ಅವು ನೀರಿನಿಂದ ಆವೃತ್ತವಾಗಿದ್ದವು.

      ಉಲ್ಕಾ ಶಿಲೆಯೊಳಗೆ ವಿಸ್ಮಯಕಾರಿಯಾಗಿ ನೀರನ್ನು ಬಚ್ಚಿಟ್ಟವರಾರು.? ಮುಚ್ಚಿಟ್ಟವರಾರು.? ಹಿಡಿದಿಟ್ಟವರಾರು? ಕೂಡಿಟ್ಟವರಾರು.? ನಾನು ನೀವು ಮಾತ್ರ ಲೀಲೆ ಎನ್ನಬಹುದು.!

      ಆದರೆ ಈ ವಿಷಯದ ಕುರಿತು ವಿಜ್ಞಾನಿಗಳ ಪ್ರಕಾರ ಬ್ರಹ್ಮಾಂಡದಲ್ಲಿನ ಮಾಹಾ ಸ್ಪೋಟದ ಪರಿಣಾಮ ದಿಶೆ ದಿಶೆಯಲ್ಲಿ ಆಕಾಶ ಕಾಯಗಳಲ್ಲಿ ಬದಲಾವಣೆಯ ಪರ್ವ ಶುರುವಾಗಿತ್ತು.ಈ ಹೀಗೆ ನಿಗೂಢವಾಗಿ ಚಲನೆಯ ಪ್ರಾರಂಭ ಪಡೆದ ಉಲ್ಕಾ ಶಿಲೆಗಳು ನಿರಂತರವಾಗಿ ಕೊತ ಕೊತ ಕುದಿಯುವ ಈ ಭೂಮಿಯ ಮೇಲೆ ಸತತವಾಗಿ ಹಲವಾರು ವರ್ಷಗಳ ಕಾಲ ಅಂದರೆ ಕೋಟಿ ಕೋಟಿ ವರ್ಷಗಳ ಕಾಲ ಎಡಬಿಡದೇ,ಸತತವಾಗಿ ದಾಳಿ ನಡೆಸುತ್ತ ಈ ಭೂಮಿಗೆ ಅಪ್ಪಳಿಸಿದವು.ಆಶ್ಚರ್ಯಕರ ಸಂಗತಿ ಎಂದರೇ,ಹಾಗೆ ಅಪ್ಪಳಿಸುವ ಉಲ್ಕಾ ಶಿಲೆಯಗರ್ಭದೊಳಗಡಗಿದ್ದ ನನ್ನ ಪರಿಸ್ಥಿತಿ ಎಷ್ಟೊಂದು ಭೀಕರವಾಗಿರಬೇಕು; ಎಷ್ಟೊಂದು ಘನ ಘೋರವಾಗಿರಬೇಕಲ್ಲವೇ ನೀವೇ ಹೇಳಿ.?

      ಆಗಿನ ಕಾಲದಲ್ಲಿ ನಾನು ಕುದಿಯುತ್ತಿರುವ ಅತ್ಯಂತ ಭೀಕರ ಕೆಂಡದುಂಡೆಯಾಗಿದ್ದ ಈ ಭೂಮಿಗೆ ಅನವರತ ಉಲ್ಕಾ ಶಿಲೆಗಳ ಮೂಲಕ ಭೂಲೋಕಕ್ಕೆ ಪ್ರತಿನಿತ್ಯ ಎರಗಲು ಯುದ್ದೋನ್ಮಾದಿಂದ ಸಮರಕ್ಕೆ ಸಜ್ಜಾಗಿ ಹೊರಡುತ್ತಿದ್ದೆ.ನನ್ನ ನಿತ್ಯದ ಹೋರಾಟ ಬೆಂಕಿಯ ಜೊತೆ ಸೆಣಸಾಟದಿಂದ ಕೂಡಿತ್ತು.ಅದು ಒಮ್ಮೊಮ್ಮೆ ಸಾವಿನ ಕರೆ ಗಂಟೆಯಾಗಿ ಕೇಳುತ್ತಿತ್ತು.ಇದೇ ನೋಡಿ ನಾನು ನನ್ನ ಬದುಕಿನಲ್ಲಿ ಹುಟ್ಟಿ ಬರುವ ಮುನ್ನ ಉಲ್ಕಾ ಶಿಲೆಯ ಗರ್ಭದೊಳಗಡಗಿದ್ದ ನನ್ನ ಅತೀ ಸಂಘರ್ಷಮಯವಾದ ರಣ ರೋಚಕವಾದ ವಿಜ್ಞಾನದ ಹಿನ್ನಲೆಯಿಂದ ಕೂಡಿದ ಹುಟ್ಟು ಹೋರಾಟದ ಕತೆ.ಹಾಗೆ ಇದು ಸಾಕಷ್ಟು ಯಾತನಾಮಯವಾಗಿತ್ತು. ಬಹು ವರ್ಷಗಳ ನಂತರ ದೂರದ ತಾರಾಮಂಡಲದಲ್ಲಿದ್ದ‌ಉಲ್ಕಾ ಶಿಲೆಗಳ ಹೊತ್ತು ತಂದ ನೀರಿನ ದಾಳಿಯ ಅವ್ಯಾಹತ ಪರಿಣಾಮದಿಂದ ಹಾಗೂ ವಾತಾವರಣದಲ್ಲಿನ ಪ್ರಕೃತಿಯ ಸಹಜ ಬದಲಾವಣೆಯಿಂದ ಇಲ್ಲಿನ ಉಷ್ಣದ ಉಂಡೆಯಾಗಿದ್ದ ಭೂಮಿ ಕಡೆಗೂ ಸೋಲಬೇಕಾಯಿತು; ಸೋತು ಶರಣಾಗಬೇಕಾಯಿತು.! ಕ್ರಮೇಣ ಲಾವಾ ದುಂಡೆಯಾಗಿದ್ದ ಈ ಭೂಮಿ ನಿಧಾನವಾಗಿ ತಣ್ಣಗಾಗುತ್ತಾ ಬಂದಿತ್ತು.ಆಗ ಈ ಭೂಮಿಯ ಮೇಲೆ ನಾನು ಅಂದರೇ ನೀರಿನ ನನ್ನ ಮೂಲ ಅಸ್ತಿತ್ವ ಸಮುದ್ರ- ಸಾಗರಗಳಲ್ಲಿ ಕಾಣುವದರೊಂದಿಗೆ ನನ್ನ ಗೆಲುವಾಯಿತು.! ‘ಆಕಾಶ’ ದಿಂದ ಗಂಗೆಯನ್ನು ಭಗೀರಥ ಭೂಮಿಗೆ ತಂದ ಕತೆ ಇದಕ್ಕೆ ಪೂರಕವಾಗಿರಬೇಕಲ್ಲವೆ.?ಜೀವ ಜಲದ ಇನ್ನೂಂದು ರೀತಿ ವೈಜ್ಞಾನಿಕ ಸಂಶೋಧನೆಯಲ್ಲಿ ಭೂಮಿಯ ಮೇಲೆ ನೀರು ಅದು ಇಲ್ಲಿಂದಲೇ ರಾಸಾಯನಿಕ ಬದಲಾವಣೆಯಾಗಿ ಅವೆಲ್ಲವುಗಳ ಕೂಡಿ ಕೊಳ್ಳುವಿಕೆಯಿಂದ ನೀರು ಎನ್ನುವ ಸಂಪನ್ಮೂಲ ಇಲ್ಲೇ,ಹುಟ್ಟಿದೆ ಎನ್ನುವ ಅಭಿಪ್ರಾಯವಿದೆ.!
      ಸಂಶೋಧನೆ ಎನ್ನುವದು ಅದೊಂದು ಅಭಿಪ್ರಾಯ.!ಹಾಗಂತ ಅದು ನಿಂತ ನೀರಲ್ಲ.! ನಿರಂತರವಾಗಿ ಹರಿಯುವ ನೀರಿದ್ದಂತೆ. ಸಂಶೋಧನೆಗಳೆಲ್ಲವು ಅವು ಕಾಲದಿಂದ ಕಾಲಕ್ಕೆ ಹರಿಯುತ್ತ ಬದಲಾಗುವಂತಹದು. ಹಾಗಾಗಿ ಪ್ರಕೃತಿಗಿಂತ ಬ್ರಹ್ಮಾಂಡಕ್ಕಿಂತ ನೀವು ಎಂದಿಗೂ ಜಾಣರಲ್ಲ! ಮಿಗಿಲಾಗಿಲ್ಲ.!ಪ್ರಕೃತಿಯ ಮೂಲ ಗುಣ ಅದು ತನ್ನ ಗುಪ್ತವಾದ’ಬೀಗದೆಸಳ’ನ್ನು ಎಂದಿಗೂ ಯಾವ ಮೇಧಾವಿಯ ಕೈಗೂ ಕೊಡುವುದಿಲ್ಲ.! ಕೊಟ್ಟರೇ ಮುಂದೆ
      ಗತಿ ಏನೆಂಬುದು ಅದಕ್ಕೆ ಚನ್ನಾಗಿ ಗೊತ್ತಿದೆ.! ಇದೇ ಅಲ್ಲವೇ ಪರಮಾತ್ಮನೆಂಬ ಪ್ರಕೃತಿಯ ಮಾಯಾ ಜಾಲಾದ ವಿಸ್ಮಯ; ಅದನ್ನು ನೀವು ಇಲೆಕ್ಟ್ರಾನ್ ಪ್ರೊಟಾನ್ ನ್ಯೂಟ್ರಾನ್ ಎನ್ನಿ ಅಥವಾ ಯೋಗದ ಭಾಷೆಯಲ್ಲಿ ರಜೋಗುಣ ತಮೋಗುಣ ಸತೋ ಗುಣ ಎನ್ನಿ ಅಥವಾ ಆಧ್ಯಾತ್ಮಿಕ ಭಾಷೆಯಲ್ಲಿ ಬ್ರಹ್ಮ’ವಿಷ್ಟು’ಮಹೇಶ್ವರ.!ಎನ್ನಿ ಅಥವಾ ಸೃಷ್ಠಿ ಪಾಲನೆ ವಿನಾಶ-ಪ್ರಳಯ ಎನ್ನಿ |ಅದು ಎಂದಿಗೂ ಅನಂತ,ಅಬಾಧಿತ ಅವಿಶ್ವಸನೀಯವಾಗಿದೆ.

      ಭಾಮಾ,ಇಂದ್ರಾಣಿ,ಗೋಧಾ ಬಂದರು.!
      ಅಮರಜ, ಬೆಣ್ಣೆತೊರೆ ಕಾಗಿನಾ,ಸೇರಿದರು.!

      ನಾನು ಈಗೀನ ಭೀಮಾಶಂಕರ ವನ್ಯ ಜೀವಿ ಅಭಯಾರಣ್ಯದಲ್ಲಿ ಚಲಿಸುತ್ತ ಬಯಲು ಬೆಂಗಾಡಿನಲ್ಲಿ ವೈವಿಧ್ಯಮಯ ಪ್ರದೇಶಗಳಲ್ಲಿ ಹರಿಯಬೇಕು.ನನಗೆ ಅದು ಯಾವ ಗಳಿಗೆ ಯಾವ ಸಮಯದ ಲೆಕ್ಕಾಚಾರವಿಲ್ಲ.! ಅದು ಬ್ರಾಹ್ಮಿ ಸಮಯವಾಗಿರಲಿ ಅಥವಾ ಹಾಗೆ ಅದು ಪ್ರಾಂತಃ ಕಾಲದ ವೇಳೆಯಾಗಿರಲಿ ಪ್ರಾಂಜಲ ಮನಸಿಂದ ಬಂಗಾರದಲೆಯಾಗಿ ಮುನ್ನಡೆಯಬೇಕು. ಒಟ್ಟಾರೆ ನಾನು ಹರಿಯಬೇಕು ಹರಿಯುತ್ತ ನಾನಿರುವ ನಾಡು ಬೆಳಗಬೇಕು.ಅಲ್ಲಿನ ನಾಗರೀಕತೆಗೆ ಪುಷ್ಠಿ ನೀಡಿ ಅದನ್ನು ಬೆಳೆಸಿ, ನಾಡ ಗುಡಿ ಕಟ್ಟಲು ಸಜ್ಜಾಗಿ ಹೊರಡಬೇಕು! ಹೊತ್ತಲ್ಲದ ಹೊತ್ತಿನಲ್ಲಿ ನಾನು ಸಾಗಬೇಕು.ಒಮ್ಮೊಮ್ಮೆ
      ಮಟ ಮಟ ಮಧ್ಯಾಹ್ನವಾಗಲಿ ರಣಗುಡುವ ಬಿಸಿಲಿನಲ್ಲಿ ನಾನು ಸಾಗುತ ಸೂರ್ಯನಡು ನೆತ್ತಿಯ ಮೇಲಿದ್ದಾಗಲೂ ಅದು ಸರಿದು ಗೋಧೋಳಿಯ ಸಮಯದಲ್ಲೂ ಸಾಗುತಿರುವೆ! ಹೀಗೆ ಅವಿಶ್ರಾಂತವಾಗಿ ಬೆಳದಿಂಗಳ ಬೆಳಕಿನಲಿ ಕಾರಿರುಳಿನಲ್ಲಾಗಲಿ ನನ್ನ ಮನದಾಸಿಯೊಂದಿಗೆ ಹಿರಿದಾಸೆ ಹೊತ್ತು ಈ ಲೋಕವನ್ನು ನನ್ನ ಬಲದಿಂದ ಬೆಳಗಬೇಕು,ನನ್ನ ಜೀವನದ ಉದ್ದಕ್ಕೂ ಪರಮ ಶಾಂತಿ ಸಮಾಧಾನ,ಸಮೃದಿಯ ಹೊತ್ತು ಜೀವ ಸಂಕುಲದೊಂದಿಗೆ ಸಹಬಾಳ್ವೆಯಿಂದ ಬದುಕುತ್ತ ನನ್ನ ಗಮ್ಯ ತಲುಪಬೇಕು ಎಂದು ಸಂಕಲ್ಪ ತೊಟ್ಟಿದ್ದೆ.! ಅದಕ್ಕಾಗಿಯೇ ಕಂಕಣ ಬದ್ಧಳಾಗಿ ಪ್ರಜಾ ಹಿತವನ್ನು ಕಾಪಾಡುತ್ತ ಲೋಕದ ಹಿತವನ್ನು ಬಯಸುತ್ತ ಇವುಗಳನ್ನು. ದೇವ ಕಾರ್ಯವೆಂದು ತಿಳಿದು,ಎಲ್ಲವನ್ನು ಕಾಯಬೇಕು ಕಾಪಾಡಬೇಕು ಎಂದು ಕಂಕೖರ್ಯ ತೊಟ್ಟು ಸಂಸ್ಕೃತಿ ಸಂಸ್ಕಾರದ ಸೆಲೆಯನ್ನು ನನ್ನ ನಡು ನೆತ್ತಿಯ ಮೇಲೆ ಹೊತ್ತು ಬದುಕಿನಲ್ಲಿ ಯಾವ ಫಲಾಫಲಗಳ ಆಪೇಕ್ಷೆಯಿಲ್ಲದೇ ಸಾಗುತ್ತಿದ್ದೆನು.ಹೀಗೆ ನಾನು ಸ್ವಚ್ಚಂದವಾಗಿ ಹರಿಯುವಾಗ ಆಕಾಶದ ಅಗಣಿತ ತಾರೆಗಳು ಬಾನಿನ ಚಂದಿರ ದಾರಿ ತೋರುತ್ತ ಆಕಾಶ ದೇವತೆಗಳು ನನ್ನ ನಿಸ್ವಾರ್ಥ ಸೇವೆಯ ಬಾಳು ಕಂಡು ಆಶೀರ್ವಾದ ಮಾಡಿ ಹಾಡಿ ಹಾರೈಸಲು ತುದಿಗಾಲು ಮೇಲೆ ನಿಂತಿದ್ದರು.ಈ ಅತುಲ್ಯವಾದ ಮತ್ತು ಮೌಲ್ಯತೀತವಾದ ನನ್ನ ಬದುಕಿನ ಸುವರ್ಣಿಯ ದಿನಗಳನ್ನು ಕಂಡ ನನ್ನ ಹೆತ್ತ ತಂದೆ ಭೀಮಾ ಶಂಕರ ಪ್ರಸನ್ನ ಚಿತ್ತನಾಗಿ ಸಾರ್ಥಕ ಭಾವದೊಂದಿಗೆ ತಥಾಸ್ತು ಹೇಳಿದನು.

      ನಾನು ಸಾಗುವ ದಾರಿಯಲ್ಲಿಯೇ ಪುಣೆ ಜಿಲ್ಲೆಯ ಬೀಬಿ ಗ್ರಾಮದಲ್ಲಿ ಮೊಟ್ಟ ಮೊದಲು ನನಗೆ ಅಡ್ಡಲಾಗಿ ಚಸ್ಕಮನ್ ಡ್ಯಾಮ್ ನ್ನು ಕಟ್ಟಲಾಗಿದೆ. ಇಲ್ಲಿ ನಾನು ತಡೆಹಿಡಿದು ನಿಂತು ಹೋಗುವಾಗ ಸಹಬಾಳ್ವೆ-ಸದ್ಭಾವನೆಗಳ ಗುಣಗಳಿಂದ ಗರಿಗೆದರುತ್ತ ಬಲಗಡೆಯಿಂದ ನನ್ನ ತಂಗಿ ‘ಭಾಮಾ’ಎನ್ನವ ನದಿ ದೇವತೆ ಬಳಕುತ್ತಾ ಬಂದು ನನ್ನನ್ನು ಸೇರಿವಳು.ನಮ್ಮಿಬ್ಬರ ಮಿಲನ ಮೇಳೖಸಿ ಸಂಭ್ರಮ ಮುಗಿಲು ಮುಟ್ಟುವ ಮುನ್ನ ಇಂದ್ರನ ಪಟ್ಟ ಧರಿಸಿಯ ಪ್ರತಿರೂಪದಂತೆ ಜಗಮಗಿಸುವ ಬ್ರಹ್ಮಚಾರಿಣಿ ದೇವತೆಯನ್ನು ಹೋಲುವ ‘ಇಂದ್ರಾಣಿ’ಹೆಸರಿನ ಉಪ ನದಿ ನನ್ನೊಂದಿಗೆ ಕೈ ಕುಲಕಿ ಆಲಂಗಿಸಿಕೊಂಡಳು ಆಗ ನನ್ನ ಹರುಷ ಮುಗಿಲು ಮುಟ್ಟಿತ್ತು.

      ಇನ್ನೂ ಅತೀ ಸುಂದರವಾದ ಎರಡು ಝರಿಗಳಿಂದ ಉದ್ಬವಳಾದ ‘ಮೂಲಾ-ಮೂತಾ’ ವನದೇವತೆ ಪುರದೇವತೆಯ ಎರಕ ಹೊಯ್ದಂತೆ ನಸು ನಗುವಿನೊಂದಿಗೆ ಕಲಕಲ ಕಲರವದೊಂದಿಗೆ ಕಿಲಕಿಲ ಮಾತನಾಡುತ್ತ ಅದೇ ನಗುವಿನಲ್ಲಿ ನನ್ನೊಡಲು ಬಂದು ಸೇರಿದಳು

      ನನ್ನ ಎಡಭಾಗದಿಂದ ಕೂಕಡಿ ಹಂಗಾ ನದಿಗಳು ಗೋಧಾ ನದಿಗೆ ಉಪನದಿಯಾಗಿ ಸೇರಿ ಈ ಮೂರು ನದಿಗಳು ನನ್ನೊಂದಿಗೆ ತಾಯಿಯ ಮಡಿಲನ್ನು ಎಳೇ ಕಂದಮ್ಮಗಳು ಸೇರಿದಂತೆ ಸೇರಿದರು.ಹೀಗೆ ನನ್ನೊಂದಿಗಾಡಲು ಬಂದ ಮೀರಾಳಂತೆ ಕಾಣುವ ‘ನೀರಾ’ ಮಂಗಂಗ,ಶಿನಾ ನದಿಗಳು ಜೊತೆ ಜೊತೆಯಾಗಿ ಸಿರನಂದಗಿ,ಬೋರ, ಸಪ್ನಾಳ, ಹನಗಾ, ನದಿಗಳು ನನ್ನ ಉಪನದಿಯಾಗಿ ಸೇರಿ ನನ್ನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು.ಇವೆಲ್ಲ ಸಹೋದರಿಯಾಗಿರುವ ಉಪನದಿಗಳಿಂದ ನನ್ನ ಅಗಲ ವಿಸ್ತೀರ್ಣ ಖಂಡಿತ ಬಹಳಷ್ಟು ದೊಡ್ಡದಾಯಿತು.ಆ ದಿನಗಳಲ್ಲಿ ನಾನು ವರ್ಷದ ಹನ್ನೆರಡು ತಿಂಗಳುಗಳ ಕಾಲ ದಡದಿಂದ ದಡಕ್ಕೆ ತುಂಬಿ ಸೋಸಿ ಹರಿಯಲು ಶುರುಮಾಡಿದೆ.ನಾನು ಪರಿಚಯಿಸಿದ ನನ್ನ ಎಲ್ಲ ಉಪನದಿಗಳು ಪುಣೆ ಜಿಲ್ಲೆಯ ಆಸುಪಾಸಿನಲ್ಲಿ ಉಗಮವಾಗಿವೆ. ಇವುಗಳು ನನ್ನನ್ನು ಸೇರುವ ಪೂರ್ವದಲ್ಲಿ ಅವುಗಳಿಗೆ ಅಲ್ಲಲ್ಲಿ ಸುಮಾರು ಒಟ್ಟು 22 ಡ್ಯಾಮ್ ಗಳನ್ನು ಕಟ್ಟಲಾಗಿದೆ. ನಾನು ಒಟ್ಟು 861 (535 ಮೈಲು) ಎಂಟನೂರಾ ಅರವತ್ತೊಂದು ಚದರ ಕಿ ಮೀ ಉದ್ದವಾಗಿ ಹರಿದಿರುವೆ.ಅದರಲ್ಲಿ ಮಹಾರಾಷ್ಟದಲ್ಲಿ 450 ಚದರ ಕಿ. ಮೀ ಇದ್ದು ಕರ್ನಾಟಕದಲ್ಲಿ 298 ಚದರ ಕಿ.ಮೀ ಚಲಿಸುತ್ತ ಸಾಗುವೆ ಇನ್ನೂ ನನ್ನ ಜಲಾನಯನದ ಒಟ್ಟು ಪ್ರದೇಶ 70,614 ಕಿ ಮೀ (27,264 ಚದರ ಮೈಲು) 75% ಮಹಾರಾಷ್ಟ್ರದಲ್ಲಿ ಸಾಗಿದ್ದೇನೆ.

      ಇನ್ನೂ ಈ ಎಲ್ಲ ಲೆಕ್ಕಚಾರದೊಂದಿಗೆ ರೈತಾಪಿ ಜನ ಜಾನುವಾರು ಹೊಲ ಗದ್ದೆಗಳಿಗೆ ಸಹಾಯಕಳಾಗಿ ಹರಿಯುತ್ತ ಕರುನಾಡಿನ ಕಲಬುರ್ಗಿ ಜಿಲ್ಲೆಯಲ್ಲಿ ಕೊರಳಿಯಲ್ಲಿ ಹುಟ್ಟಿದ ಅಮರಜ ನದಿ,ಹಾಗೆ ಕಾಗಿನಿ ಅದರಂತೆ ಮುಲ್ಲ ಮಾರಿ ನದಿ, ಬೆಣ್ಣೆತೋರಾ ಎನ್ನವ ದೊಡ್ಡದಾದ ಹಳ್ಳದೊಂದಿಗೆ ಬಂದು ನನ್ನನ್ನು ಸೇರಿದವು. ನನ್ನ ಸಹೋದರಿಯರಾಗಿ ಹೀಗೆ ಬಂದು ಸೇರಿದವರು ಇವರೆಲ್ಲರು ತಮ್ಮೊಂದಿಗೆ ಜೌಗು ಮಣ್ಣು , ಮೆಕ್ಕಲು ಮಣ್ಣು ಹೂಳೂ ಮಣ್ಣು , ಕಪ್ಪು ಮಣ್ಣು ಕೆಂಪು ಮಣ್ಣಿನ ಘಮಲಿನೊಂದಿಗೆ ಬಂದು ಸೇರಿ ನನ್ನ ಸಂತಸವನ್ನು ಇಮ್ಮಡಿ ಗೊಳಿಸಿದರು.

      ಇವೆಲ್ಲ ಒಂದು ಕಡೇಯಾದರೆ ಮತ್ತೊಂದು ಕಡೇ ಹಲವಾರು
      ಹಳ್ಳಿ ಹಳ್ಳಿಗಳಿಂದ ಪುರ ಪಟ್ಟಣಗಳಿಂದ ಒಂದೊಂದು ಹಳ್ಳಗಳು,ತೊರೆಗಳು ಒಂದೊಂದು ವಿಶೇಷ ಗುಣಗಳೊಂದಿಗೆ ಬಂದು ನನ್ನನ್ನು ಸೇರಿ ಇನ್ನಷ್ಟು ಬಲಾಡ್ಯಗೊಳಿಸಿ ಮತ್ತಷ್ಟು ಭೊರ್ಗೆರೆಯುವಂತೆ ಮಾಡಿದವು.

      ಆದರೆ ಈ ಸತ್ಯ ಶತ ಶತಮಾನಗಳ ಕಾಲದಿಂದ ಹಾಗೆ ಉಳಿದಿತ್ತು.! ಆಗ ನಾನು ಇಳೆಯ ಮೇಲೆ ತುಂಬಾ ಗಟ್ಟಿಯಾಗಿ ಹೆಜ್ಜೆಯಿಟ್ಟಿದ್ದೆ.! ನಾನು ಅಷ್ಟೇ ಬಲವಾಗಿ ಮೂರು ರಾಜ್ಯಗಳಲ್ಲಿ ನನ್ನ ಛಾಪು ಮೂಡಿಸಿದ್ದೆ.ಈಗ ಎಲ್ಲವೂ ಹಾಗಿಲ್ಲ ಯಾವದು ಮೊದಲಿನಂತಿಲ್ಲ.!ಇಲ್ಲಿನ ಆಸೆ ಬುರುಕ ಮನುಜರಿಂದ ಎಲ್ಲವು ಗತಿಗೆಟ್ಟು ಹಾಳಾಗುತ್ತಿದೆ.ಇದರಿಂದ ನೀವು ಎತ್ತ ಸಾಗುತ್ತಿದ್ದಿರಿ.!ಎಂಬುವುದು ನನಗೊಂದು ತಿಳಿಯದಾಗಿದೆ.ಇದರಿಂದ ನಿಮ್ಮ ಕುರಿತಿರುವ ನನ್ನ ಸದ್ಭಾವದಲ್ಲಿ ಈಗ ವಿಷಾದ ಛಾಯೆ ಮೂಡುತ್ತಿದೆ. ಅದು ನನ್ನ ಹೃದಯವನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ.!

      ತಲೆ ತಲಾಂತರದಿಂದ ಕೀರ್ತಿಯ ಕುಂಭ ಹೊತ್ತು ನಿಂತಿರುವೆ, ಕುಂಭದಲ್ಲಿ ಕಳಂಕದ ಮಣ್ಣು ತಂದು ಹಾಕಬೇಡಿ .!

      ಮನುಷ್ಯ ತನ್ನ ನೂರಾರು ಕುಕೃತ್ಯಗಳಿಂದ ಬೆಳಕಿರದ ದಾರಿಯಲಿ ಲಾಂದ್ರ ಹಿಡಿದುಕೊಂಡು ತನ್ನ ತಪ್ಪುಗಳಿಗೆ
      ಈಗ ನೆಪ ಮಾತ್ರಕ್ಕೆ ತೇಪೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾನೆ. ಏಕೆಂದರೆ ಆತ ನನ್ನೊಂದಿಗೆ ಮಾಡಿದ ತಪ್ಪುಗಳು ಒಂದೇ ಎರಡೇ ಸಾವಿರಾರು. ಮನುಷ್ಯನಾದವನು
      ದುರಾಸೆಯ ಎಂಬ ಬಗಲ ಕೆಂಡ ಕಟ್ಟಿಕೊಂಡ ಹೊರಟಿದ್ದಾನೆ! ಇತ್ತೀಚಿಗೆ ಆತ ಒತ್ತುವರಿ ಎಂಬ ಹೆಸರಿನ ಹರಿತವಾದ ಚೂರಿ ಹಿಡಿದು ನೂರಾರು ಹಳ್ಳಗಳಿಗೆ ಕಂಟಕ ಪ್ರಾಯನಾಗಿದ್ದಾನೆ.!ಅವುಗಳನ್ನು ಹೇಳ ಹೆಸರಿಲ್ಲದಂತೆ ನುಂಗಿ ನೀರ್ಕುಡಿದಿದ್ದಾನೆ. ಇದ್ದ ಬಿದ್ದ ಮರಗಿಡಗಳನ್ನು ಕಡಿದು ಹಾಕಿ ಅವುಗಳ ಪಾಲಿಗೆ ಮಾರಣಾಂತಿಕನಾಗಿ ಮರಣ ಮೃದಂಗ ಬಾರಿಸುತಿದ್ದಾನೆ.!
      ನನ್ನೊಂದಿಗೆ ಆತನ ದುರ್ವ್ಯವಹಾರ ಮಾಡಿದ ಅನಾಚಾರ ಸಾಕಷ್ಟು ನನ್ನಲ್ಲಿ ಸಾಕಷ್ಟು ಆಘಾತಗಳನ್ನು ತಂದೊಡ್ಡಿದೆ.! ವಿಪರ್ಯಾಸದ ಸಂಗತಿ ಎಂದರೇ ಇವುಗಳ ಲೆಕ್ಕವಿಟ್ಟವರಿಗೂ ಲೆಕ್ಕ ಇಲ್ಲಿಯವರೆಗೂ ಸಿಕ್ಕಿಲ್ಲ.!ನೀವು ಮಾಡಿದ, ಮಾಡುತ್ತಿರುವ ಹಲವಾರು ಕಂಟಕಗಳಿಂದ ನಾನು ಭವಿತವ್ಯವನ್ನು ನೋಡಿ ಇಂದು ನನ್ನದೇ ಝಲ್ಲೆನ್ನುತ್ತಿದೆ.! ಹೃದಯ ಢವ್! ಢವ್! ಹೊಡೆದುಕೊಳ್ಳುತ್ತಿದೆ.ಮೊದಲಿಗೆ ನನ್ನನ್ನು ಬಂದು ಸೇರುವ ನೂರಾರು ಹಳ್ಳಗಳನ್ನು ಕಶ್ಮಲಗೊಳಿಸಿದೀರಿ. ಸಾಲದಕ್ಕೆ ಅವು ಹರಿಯುವದನ್ನು ಬಿಟ್ಟುಈಗ ಕೊಳೆತು ನಾರುವಂತೆ ದುಸ್ಸಾಹಸ ಮಾಡಿದ್ದೀರಿ!ಇವೆಲ್ಲವುಗಳಿಂದು ನಿಮ್ಮ ಅಂಗಳದ ಕುಡಿಯುವ ನೀರಿನ ಅಸಂಖ್ಯಾತ ಬಾವಿಗಳಲ್ಲಿ ನೀರಿಲ್ಲ ಬತ್ತಿ ಹೋದ ಹಳ್ಳಗಳಿಂದ ದೇವಸ್ಥಾನ ದೇವರ ಮೂರ್ತಿಗೆ ಪರಿಶುದ್ಧವಾದ ಪವಿತ್ರ ನೀರಿಲ್ಲದಂತಾಗಿದೆ.!ಹಾಗೆ ಕೆರೆಗಳಿಗೂ ಕೂಡಾ ಇಂದು ನೀರಿಲ್ಲದೇ ಬತ್ತಿ ಹೋಗಿ ಭಣಗುಟ್ಟುತ್ತಿವೆ.!

       

      ನಾನು ನಿಮ್ಮ ಕುಲ ದೇವತೆ
      ನನ್ನ ಅಪೂರ್ವ ಇತಿಹಾಸದ
      ಕೀರ್ತಿ ಕಲಶದ ಕುಂಭವನ್ನು
      ತಲೆ ತಲಾಂತರದಿಂದ ಭೀಮಾ ತೀರದಲ್ಲಿ ತಲೆಯ ಮೇಲೆ ಹೊತ್ತು ನಿಂತಿರುವೆ.!

      ಆ ಹೆಸರಿಗೆ ಆ ಕುಂಭಕ್ಕೆ ಕಳಂಕದ ಮಣ್ಣು ತಂದು
      ಕಲ್ಲು ರಾಡಿಯ ಕೆಸರು ತುಂಬಬೇಡಿ; ನನ್ನ ಪರಿಶುದ್ಧವಾದ ಮೈ ಮನಗಳಿಗೆ ಅದನ್ನು ಸಿಡಿಸಬೇಡಿ.!ಇವೆಲ್ಲವನ್ನೂ ನಗಣ್ಯವಾಗಿ ತಿಳಿದುಕೊಂಡು ನನ್ನನ್ನು ನೀವು ಕಣ್ಣಿರಿನಲ್ಲಿ ಕ್ಕೆ ತೊಳೆಯುವಂತೆ ಮಾಡಬೇಡಿ.! ಈಗ ನನ್ನ ದುಃಖದ ಕಟ್ಟೆಯೊಡದಿದೆ.!ನಿಮ್ಮಲ್ಲಿ ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ.!ಈ ಬಾಳಿನ ಏರು ಪೇರಿನ ಪಯಣದಲಿ ಕಲ್ಲಿರಲಿ ಮುಳ್ಳಿರಲ್ಲಿ ನಾನು ಸಾಗಬೇಕು.! ನನ್ನ ಗಾಯವಾಗಲಿ ಅದು ಮಾಯವಾಗಲಿ ಎಷ್ಟೇ ನೋವಿರಲಿ ಸಮಪ೯ಣಾ ಭಾವದಿಂದ ನಾನು ಸಾಗುತ್ತ ಹರಿಯಬೇಕಲ್ಲವೆ.?
      ನನ್ನ ಧಾರಣತೆಯ ದುಗುಡತೆಯ ಬೇಗುದಿಯ ಕಥೆಯ ವ್ಯಥೆ ಯಾರ ಮುಂದೆ ಹೇಳಲಿ! ನನಗೆ ನೀವೇ ತಾನೇ ಮಕ್ಕಳು.!ನನಗೆ ನೀವೇ ಗತಿಯಲ್ಲವೆ.? ನೀವಿಲ್ಲದೇ ನಾನು ಬದಕುವದಾದರೇ ಹೇಗೆ.? ನಿಮ್ಮನ್ನು ಬೆಳೆಸುತ್ತ ಉಳಿಸುತ್ತ ಯಾವ ಆಶೆ-ಆಕಾಂಕ್ಷೆಗಳಿಲ್ಲದೇ ಯುಗ ಯುಗಗಳಿಂದ ಸಾಗುತ್ತಿದ್ದೇನೆ; ಎಂದು ಶಾಂತಿ-ವಿಶ್ರಾಂತಿ ದೊರಕುವದೆಂದು ನಿಮ್ಮ ತಾಯಿ! ನಿಮ್ಮ ಅವ್ವ.! ಭೀಮವ್ವ.!

      ಭಾಗ -3 ಮುಂದುವರಿಯವುದು

      ✍️ ದಶರಥ ಕೋರಿ ಶಿಕ್ಷಕರು ಇಂಡಿ🙏

      ಆಕರಗಳು:
      ವಿಕಿಪೀಡಿಯಾ/ಗೂಗಲ್🙏
      ಪ್ರೇರಣೆ-ಪ್ರೋತ್ಸಾಹ:🤝
      ಶ್ರೀ ಕಿಶೋರ ಕಾಸಾರ ಸಾಹಿತಿಗಳು ಮಣೂರ
      ಶ್ರೀ ಯಲಗೊಂಡ ಬೇನೂರ ಉದಯವಾಣಿ ವರದಿಗಾರರು ಇಂಡಿ
      ಶ್ರೀ ಗೀತಯೋಗಿ ಸಾಹಿತಿ ಶಿಕ್ಷಕರು ಇಂಡಿ(ಸಾಲೋಟಗಿ.) ಪ್ರೋಮೋ ಸಹಕಾರ: ಮಲ್ಲು ಅಳ್ಳಗಿ ಇಂಡಿ.
      ಸಂತೋಷ ಹಿರೇಮಠ ದಿಗ್ವಿಜಯ ನ್ಯೂಸ್
      ಸಂಕಲನಕಾರರು ಹಿರೇಬೇವನೂರ.

      Tags: #bhimateer#indi / vijayapur#State News#Voice Of Janata#VOICE OF JANATA (VOJ-VOJ)#Voiceofjanata.in#ಭೀಮಾತೀರ ಭೀಮೆಯ ಒಂದು ಮಾತು
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಬಾರ್ ಲೈಸನ್ಸ್ ನೀಡಿಕೆಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸಚಿವ ಆರ್ ಬಿ ತಿಮ್ಮಾಪುರ ರವರ ಪಾತ್ರ ಕಿಂಚಿತ್ತೂ ಇಲ್ಲ..!

      ಬಾರ್ ಲೈಸನ್ಸ್ ನೀಡಿಕೆಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸಚಿವ ಆರ್ ಬಿ ತಿಮ್ಮಾಪುರ ರವರ ಪಾತ್ರ ಕಿಂಚಿತ್ತೂ ಇಲ್ಲ..!

      January 22, 2026
      ಜ.25ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಸ್ಪರ್ಧಾತ್ಮಕ ಪರೀಕ್ಷೆ

      ಜ.25ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಸ್ಪರ್ಧಾತ್ಮಕ ಪರೀಕ್ಷೆ

      January 22, 2026
      ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

      ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

      January 22, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.