ಭೀಮಾರಥಿ ( ಭೀಮಾತೀರಕ್ಕೆ) ಹಿಂಗ್ಯಾಕ ನೋಡ್ತಾರಪ್ಪ..!
ಮಾ – 27 ಕ್ಕೆ ವಿಶೇಷ ಲೇಖನಿ ಭಾಗ -1 ಬಿಡುಗಡೆ
ಇಂಡಿ : ಭೀಮಾರಥಿ (ಭೀಮಾತೀರಕ್ಕೆ) ಹಿಂಗ್ಯಾಕ್ ನೋಡ್ತಾರಪ್ಪ..! ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಪೆಷಿಯಲ್ ಸ್ಟೋರಿ ಮಾ-27 ರಂದು ವೈಸ್ ಆಫ್ ಜನತಾ ಆನಲೈನ್ ವಾಹಿನಿಯಲ್ಲಿ ಪ್ರಸಾರಗೊಳಿಸಲಾಗುವುದು.
ಈ ವಿಶೇಷ ಲೇಖನಿ ಸಾಹಿತಿ ಶಿಕ್ಷಕ ದಶರಥ ಕೋರಿ ಅವರ ವಿಶೇಷ ಹಸ್ತಾಕ್ಷರದ ಬರವಣಿಗೆಯಲ್ಲಿ ಭೀಮಾತೀರದ ಕುರಿತು ಸುದೀರ್ಘವಾಗಿ ಮೂಡಿ ಬರಲಿದ್ದು, ಅದನ್ನು ಓದುಗ ಅಭಿಮಾನಿಗಳು ವೈಸ್ ಆಫ್ ಜನತಾ ವಾಹಿನಿಯಲ್ಲಿ ಮಾರ್ಚ್-27 ರಂದು ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.