ಇಂಡಿ : ಅನುಮಾಸ್ಪದ ರೀತಿಯಲ್ಲಿ ವಾರ್ಡನ್ ಶವವೊಂದು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದಿದೆ. ಅಗರಖೇಡ ಗ್ರಾಮದ ಸಿದ್ದು ತೋಳನೂರ ಅಸುನೀಗಿದ ವ್ಯಕ್ತಿ, ಇವರು ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಸತಿಯ ನಿಲಯದಲ್ಲಿ ವಾರ್ಡನಾಗಿದ್ದರು.ಇನ್ನು ಸಿದ್ದು ಬಾಯಿಗೆ ಬಟ್ಟೆ ಕಟ್ಟಿ ಕೊಲೆಗೈದು ಆತ್ಮಹತ್ಯೆಯಂತೆ ಬಿಂಬಿಸುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.