ಮುದ್ದೇಬಿಹಾಳ: ನೆರೆ ಮನೆಯ ವ್ಯಕ್ತಿ ಉಪವಾಸ ಇದ್ದು, ನೀನು ಮೃಷ್ಠಾನ್ನ ಬೋಜನೆ ಮಾಡುವದು ತಪ್ಪು ನಿನ್ನಲ್ಲಿರುವ ಸ್ವಲ್ಪರಲ್ಲಿಯೇ ಎಲ್ಲರೊಂದಿಗೆ ಹಂಚಿಕೊಂಡು ತಿನ್ನಬೇಕು ಎಂದು ಎಲ್ಲಾ ಧರ್ಮಗ್ರಂಥಗಳು ಹೇಳಿವೆ, ಇದನ್ನರಿತು ಬಡ ಕುಟುಂಬದ ಜನರಿಗೆ ನಮ್ಮಿಂದಾದ ಸಹಾಯವನ್ನು ಮಾಡಬೇಕು ಎಂದು ತಿಳಿದು ರಮಜಾನ ಹಬ್ಬದ ನಿಮಿತ್ಯವಾಗಿ ಆಹಾರ ಕಿಟಗಳನ್ನು ನೀಡುತ್ತಿದ್ದೇವೆ ಎಂದು ಬಾಗವಾನ ಕೋ ಆಪರೇಟಿವ್ ಬ್ಯಾಂಕ ಅಧ್ಯಕ್ಷರಾದ ಪಿಂಟು ಸಾಲಿಮನಿ ಹೇಳಿದರು.
ಪಟ್ಟಣದಲ್ಲಿರುವ ಕೋ ಆಪರೇಟವ್ ಬ್ಯಾಂಕನ ಸಭಾಂಗಣದಲ್ಲಿ ಬಡವರಿಗೆ ನೀಡಲು ತಯಾರಾಗಿದ್ದ ರಮಜಾನ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಮಜಾನ ತಿಂಗಳು ಮುಸ್ಲಿಂ ಸಮುದಾಯಕ್ಕೆ ಶ್ರೇಷ್ಠವಾದ ತಿಂಗಳು ಈ ಮಾಸದಲ್ಲಿ ಬಡವರಿಗೆ, ನಿರ್ಗತಿಕರಿಗೆ ದಾನವನ್ನು ಮಾಡಬೇಕು, ಇದರಲ್ಲಿ ಧರ್ಮ ಯಾವುದೇ ಇರಲಿ ಎಲ್ಲರಿಗೂ ಕಿಟಗಳನ್ನು ನೀಡುತ್ತೇವೆ, ಮಾನವಿಯತೆಗಿಂತ ಮಿಗಿಲಾದ ಧರ್ಮ ಯಾವುದು ಇಲ್ಲಾ ಎಂದು ತಿಳಿಸಿದರು.
ನಂತರ ಬಾಗವಾನ ಜಮಾತನ ಅಧ್ಯಕ್ಷ ಸುಲೇಮಾನ ಮಮದಾಪೂರ ಮಾತನಾಡಿ ಕಷ್ಟದಲ್ಲಿರುವ ಯಾವುದೇ ಧರ್ಮದವರನ್ನು ಗೌರವದಿಂದ ಕಾಣಬೇಕು, ನಮ್ಮಿಂದಾಗುವ ಸಹಾಯವನ್ನು ಮಾಡಬೇಕು, ವಿಶೇಷವಾಗಿ ರಮಜಾನ ತಿಂಗಳಲ್ಲಿ ಬಡವರು ಯಾರೋಬ್ಬರು ಹಬ್ಬವನ್ನು ಆಚರಿಸದೆ ಇರಬಾರದು ಎಂದು ಮನಗಂಡು ನಮ್ಮ ಕೈಲಾದ ಸಹಾಯವನ್ನು ಮಾಡುವ ಉದ್ದೇಶದಿಂದ ಕಿಟ್ ಗಳನ್ನು ಹಂಚುತ್ತಿದ್ದೇವೆ, ಪ್ರತಿ ವರ್ಷವು ನಮ್ಮ ಕಾರ್ಯ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.
ಇದೇ ವೇಳೆಯಲ್ಲಿ ಅನೇಕರಿಗೆ ರಮಜಾನ ಹಬ್ಬದ ಕಿಟಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ ಮಕ್ತೆದಾರ್, ಡಿ ಡಿ ಬಾಗವಾನ, ಅಬ್ದುಲ್ ರೆಹಮಾನ್ ಹಳ್ಳೂರ, ಉಸ್ಮಾನ್ ಬಾಗವಾನ, ಡಾ, ಯಾಸೀನ್ ಸಣ್ಣಕ್ಕಿ, ನೈಹಿಮ್ ಹಳ್ಳೂರ, ನಜೀರ್ ಅಹ್ಮದ್ ಮಮದಾಪುರ, ಮೌಲಾನ ಹುಸೇನ್ ಚೌದರಿ, ಕಲಾದಗಿ ಸರ್, ಅಬ್ದುಲ್ ಮಜಿದ್ ಬಾಗವಾನ, ಅಲ್ಲಾಭಕ್ಷ ಹುಣಶ್ಯಾಳ, ಡಿ ಎಂ ಚೌದರಿ, ಜಾಫರ ಬಾಗವಾನ ಇನ್ನೀತರರು ಇದ್ದರು.