ಪೊಲೀಸ್ ಇಲಾಖೆ ತವರು ಮನೆ ಇದ್ದ ಹಾಗೆ..! ಏಕೆ ಗೊತ್ತಾ..? ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದರಿ
ವಿಜಯಪುರ : ಮಹಿಳೆಯರು ಮೌಡ್ಯದಿಂದ ಹೊರಬಂದು ಶಿಕ್ಷಣವಂತರಾಗಬೇಕು, ಕಾನೂನು ಅರಿಯಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದರಿ ಮಹಿಳೆಯರಿಗೆ ಕರೆ ನೀಡಿದರು.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸ್ಪೂರ್ತಿ ಸಿಂದಗಿ ತಾಲೂಕು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಆರಂಭದಿಂದ ಅನಿಷ್ಠ ಪದ್ಧತಿ ವಿರುದ್ಧ ಹೋರಾಡುತ್ತಾ ಬಂದಿದ್ದೇವೆ. ಇಂದು ಮೌಡ್ಯತೆಯಿಂದ ನಾವು ಹೊರಬರಲು ಶಿಕ್ಷಣವಂತರಾಗಬೇಕು. ಮೌಡ್ಯತೆಗೆ ಬಲಿಯಾಗಿ ಗುಲಾಮರಾಗುವುದು. ನಮಗೆ ತೊಂದರೆಯಾದಲ್ಲಿ ನೇರವಾಗಿ ಪೊಲೀಸರಿಗೆ ಭೇಟಿ ಮಾಡಿ. ಪೊಲೀಸ್ ಇಲಾಖೆ ನಮಗೆ ತವರು ಮನೆ ಇದ್ದಹಾಗೆ. ನಮ್ಮ ಕಷ್ಟಗಳನ್ನು ಆಲಿಸಿ ನಮಗೆ ಸೂಕ್ತ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿ ಪಡೆಯುವ ಕೆಲಸ ಮಹಿಳೆಯರು ಮಾಡಬೇಕು. ತಮಗೆ ಏನೇ ತೊಂದರೆ ಬಂದರೂ ಅಲ್ಲಿಯೂ ಭೇಟಿ ನೀಡಿ ಎಂದು ಹೇಳಿದರು.
ನಾವೆಲ್ಲ ಅಭಿವೃದ್ಧಿ ಬಯಸೋಣ. ನಮ್ಮ ಅಭಿವೃದ್ಧಿ ಬಯಸಿದಲ್ಲಿ ನಮ್ಮ ಮತವನ್ನು ಯಾವತ್ತು ಮಾಡಿಕೊಳ್ಳಬಾರದು. ಅಭಿವೃದ್ಧಿಗಾಗಿ ಯಾರು ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ರಾಜಕೀಯ ಸಾಮಾಜಿಕ ಜವಾಬ್ದಾರಿ ನಮ್ಮ ಬದುಕನ್ನು ಬದಲಾಯಿಸುತ್ತದೆ. ಆದ್ದರಿಂದ ಪ್ರತಿ ಮಹಿಳೆ ನಾಯಕತ್ವ ಗುಣ ಹೊಂದಬೇಕು ಎಂದು ಹೇಳಿದರು.
ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷೆಕ್ಷೆ ನಾಗರತ್ನ ಮನಗೂಳಿ ಮಾತನಾಡಿ, ವರ್ಷವಿಡಿ ಮಹಿಳಾ ದಿನಾಚರಣೆ ಮಾಡಬೇಕು. ಎಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಅಲ್ಲಿ ನ್ಯಾಯ ಒದಗಿಸುವ ಕಾರ್ಯವಾಗಬೇಕು. ಸಾಧನೆ ಮಾಡಿದ ಮಹಿಳೆಯರಿಗೆ ಪ್ರೋತ್ಸಾಹಿಸಬೇಕು. ಸ್ಥಳೀಯ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಮಹಿಳೆಯರಿಗೆ ಸ್ಪೂರ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ ಎಂದು ಹೇಳಿದರು.
ಸಂಗಮ ಸಂಸ್ಥೆಯ ನಿರ್ದೇಶಕರಾದ ಸಿಂತಿಯ ಡಿ ಮೆಲ್ಲೋ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳೆ ಹಕ್ಕುಗಳ ಜಾಗೃತಿ ಕುರಿತು ಮಾತನಾಡಿದರು.
ಗ್ರೇಡ್ -2 ತಾಸಿಲ್ದಾರ ಇಂದಿರಾಬಾಯಿ ಬಳಗಾನೂರ, ವಿಜಯಪುರದ ಜೆಜ್ವಟ್ ಮುಖ್ಯಸ್ಥ ಫ್ಯಾನ್ಸಿಸ್ ಮಿನಜಸ್ ಎಸ್. ಜಿ, ಸಂಗಮ ಸಂಸ್ಥೆಯ ನಿರ್ದೇಶಕರಾದ ಸಂತೋಷ, ಕರ್ನಾಟಕ ಮಹಿಳಾ ಹಕ್ಕುಗಳ ಕಾರ್ಯಕರ್ತ ಗಮನ ಮಹಿಳಾ ಸಮೂಹದ ಮಮತಾ ಯಜಮಾನ, ಎನ್ ಆರ್ ಎಂ ಎಲ್ ಯೋಜನೆ ಮೇಲ್ವಿಚಾರಕಿ ಲಕ್ಷ್ಮಿ ಪೊಲೀಸ ಪಾಟೀಲ, ಮಹಿಳಾ ಮೇಲ್ವಿಚಾರಕಿ ಸುನಿತ ಕಪ್ಪೆ ನವರ,ಡಾ. ಏನ್ ಎಂ ಮೊಘಲಾಯಿ, ಸಿಂಧೂ ತಾಯಿ ಮಾಜಿ ದೇವದಾಸಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಸರೀತ ಹರಿಜನ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ರಾಜಶೇಖರ ಕೋಚ್ಬಾಳ, ಸಿಂದಗಿಯ ಮಹಿಳಾ ಸಾಂತ್ವಾನ ಕೇಂದ್ರ ನಿರ್ದೇಶಕಿ ಸುಜಾತ ಕಲಬುರ್ಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆಕೆ ಚೌಹಾಣ್, ಮಹಾನಂದ್ ಬೊಮ್ಮಣ್ಣಿ ವೇದಿಕೆಯಲ್ಲಿದ್ದರು.
ತಾಲೂಕಿನ ವಿವಿಧ ಗ್ರಾಮಗಳ ಮಹಿಳಾ ಸ್ವಸಹಾಯ ಗುಂಪುಗಳ ಸಂಸ್ಥೆಯವರು ಭಾಗವಹಿಸಿದ್ದರು. ಮಹಿಳೆಯರು ಸಿದ್ಧಪಡಿಸಿದ ಸಿದ್ಧ ವಸ್ತುಗಳನ್ನು ಪ್ರದರ್ಶಿಸಲಾಯಿತು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಚೌಡೇಶ್ವರಿ ಕಲ್ಯಾಣ ಮಂಟಪದವರೆಗೆ ಮಹಿಳಾ ಜಾಗೃತಿ ಜಾತ ಜರುಗಿತು. ಜಾತ ಉದ್ದಕ್ಕೂ ಮಹಿಳೆ ಜಾಗೃತಿ ಕುರಿತು ಘೋಷಣೆ ಕೂಗಲಾಯಿತು.