ಮುದ್ದೇಬಿಹಾಳ:ತಾಲ್ಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಹೊಕ್ರಾಣಿ,ಜಕ್ಕೆರಾಳ ,ಇಣಚಲ್ ಗ್ರಾಮದಲ್ಲಿ ಶುಕ್ರವಾರ ಶಾಸಕರು ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್ ನಾಡಗೌಡ (ಅಪ್ಪಾಜಿ) ಅವರು ಜನ ಸಂಪರ್ಕ ಸಭೆ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಜಕ್ಕೆರಾಳ ಗ್ರಾಮದ ಗ್ರಾಮಸ್ಥರು ತಮ್ಮ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ತಗ್ಗುಪ್ರದೇಶದಲ್ಲಿ ಟ್ಯಾಂಕರ್ ನಿರ್ಮಾಣ ಮಾಡಿದ್ದು ಆ ಟ್ಯಾಕಂರ್ ಗೆ ನೀರು ಏರುವುದಿಲ್ಲ ಟ್ಯಾಂಕ್ ರ ನಿರ್ಮಾಣ ಮಾಡುವಾಗ ಈ ಬಗ್ಗೆ ಗಮನಕ್ಕೆ ತಂದರು ಗುತ್ತಿಗೆದಾರರು ಬರುತ್ತವೆ ಎಂದು ನಿರ್ಮಾಣ ಮಾಡಿದ್ದಾರೆ ಮತ್ತು ನಮ್ಮ ಊರಿನಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು ಶಾಸಕರು ಕುಡಿಯುವ ನೀರು ಸರಬರಾಜು ಎಇಇ ಆರ್ ಎಸ್ ಹಿರೇಗೌಡರ ಅವರಿಗೆ ಕಾಮಗಾರಿ ಮಾಡಿದ ಗುತ್ತಿಗೆದಾರ ಯಾರು ಕರೆಯಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ತಗ್ಗು ಪ್ರದೇಶಗಳಲ್ಲಿ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ ಲೆವಲ್ ತೆಗೆಯುವುದು ಮರೆತಿದ್ದಾರ? ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸುತ್ತಿರ? ಎಂದು ಪ್ರಶ್ನಿಸಿದರು ಈ ವೇಳೆ ನಿರ್ಮಾಣ ಮಾಡಿದ ಟ್ಯಾಂಕ್ ರಗೆ ನೀರಿನ ಕನೆಕ್ಷನ್ ನೀಡಿಲ್ಲ ಬಿಲ್ ಮಾಡಲಾಗಿದೆ ಎಂಬ ವಿಷಯ ತಿಳಿದು ಕೆಂಡಾಮಂಡಲರಾದ ಶಾಸಕರು ಈ ಕಾಮಗಾರಿ ಮಾಡುವಾಗ ಯಾರು ಪಿಡಿಒ ಇದ್ದರು ಅವರ ಮೇಲೆ ಕ್ರಮಕೈಗೂಳ್ಳಿ ಅಂದಿನ ಗ್ರಾಪಂ ಅದ್ಯಕ್ಷ ಕಾಮಗಾರಿ ಪೂರ್ಣವಾಗದೆ ಇದ್ದರು ಬಿಲ್ ಡ್ರಾಗೆ ಎನ್ಓಸಿ ಹ್ಯಾಗೆ ನೀಡಿದರು ಇಲ್ಲಿನ ಗ್ರಾಪಂ ಸದಸ್ಯರು ವಿರೋಧಿಸಲಿಲ್ಲವೇಕೆ? ಎಂದು ಗರಂ ಆದರು ಅಂದು ಜೆಪಿ ಶೆಟ್ಟಿ ಅಧಿಕಾರಿಯಾಗಿದ್ದರು ಸದ್ಯ ಜಕ್ಕೆರಾಳ ಗ್ರಾಮಸ್ಥರಿಗೆ ಪಂಚಾಯತಿ ಇಂದು ಕುಂಟೋಜಿಯಿಂದ ಟ್ಯಾಂಕರ ಮೂಲಕ ಪಿಲ್ಟರ್ ನೀರು ಪ್ರತಿ ನಿತ್ಯ 3 ಟ್ಯಾಂಕ್ ನೀರು ಪೂರೈಕೆ ಮಾಡಲು ಸೂಚಿದರು ಜೆಜೆಎಂ 10ಕೆಜಿ ಪೈಪ್ ಒಡೆದವರ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದರು.
ಈ ವೇಳೆ ಗ್ರಾಮದಲ್ಲಿ ರೇಷನ್ ವಿತರಣೆಯಲ್ಲಿ 2 ಕೆಜಿ ಅಕ್ಕಿ ಕಡಿಮೆ ನೀಡುತ್ತಾರೆ ಮತ್ತು ಚೀಟಿಗೆ 10 ರೂ ಇಸಿದುಕೂಳ್ಳುತ್ತಾರೆಂದು ಗಂಭೀರ ಆರೋಪವನ್ನು ಮಾಡಿದಾಗ ಅಕ್ಕಿ ಹಂಚಿಕೆ ಮಾಡುವ ವ್ಯಕ್ತಿಗೆ ನೋಟಿಸ್ ನೀಡಬೇಕು ಎಂದು ಆಹಾರ ಶಿರಸ್ತೆದಾರ ಶಶಿಧರಗೆ ಶಾಸಕರು ಸೂಚಿಸಿದಾಗ ರೇಷನ ವಿತರಿಸುವ ವ್ಯಕ್ತಿಯ ಮೊಮ್ಮಗ ಮುದ್ದೇಬಿಹಾಳ ಗೌಡಾನ್ ನಿಂದಲೇ ಐದಾರೂ ಚೀಲ ಅಕ್ಕಿ ಕಡಿಮೆ ನೀಡುತ್ತಾರೆ ಅದಕ್ಕೆ ನಾವು 2 ಕೆಜಿ ಕಡಿಮೆ ನೀಡುತ್ತೇವೆ ಎಂದರು ಶಾಸಕರು ಆಹಾರ ಇಲಾಖೆ ಜಿಲ್ಲಾಧಿಕಾರಿ ಗೆ ವಿನಯ್ ಪಾಟೀಲ ಗೆ ಪೂನ್ ಮಾಡಿ ಗೋದಾಮಿನಿಂದ ಐದಾರೂ ಚೀಲ ಅಕ್ಕಿ ಕಡಿಮೆ ನೀಡುತ್ತಿರುವ ಬಗ್ಗೆ ಗಮನಕ್ಕೆ ತಂದು ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದರು.
ಎನ್ ಆರ್ ಜಿ ಯೋಜನೆಯಲ್ಲಿ ಮಾಡಿದ ಕಾಮಗಾರಿಯ ಬಿಲ್ ಇಲ್ಲಿಯವರೆಗೆ ನೀಡಿಲ್ಲ ನಾವು ಬಡ್ಡಿ ಕಟ್ಟಿ ಹಣ ತಂದಿದ್ದೇವೆ ಈ ಕುರಿತು ತಾಪಂಇಒ, ಎಡಿ ಅವರಿಗೆ ಪಿಡಿಒ ಅವರ ಗಮನಕ್ಕೆ ತಂದರು ಮಾಡಿಲ್ಲ ನಾವು ಗ್ರಾಪಂ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು ನಮಗೆ ಬಿಲ್ ಮಾಡುತ್ತಿಲ್ಲವೆಂದು ಜನ ಸಂಪರ್ಕ ಸಭೆಯಲ್ಲಿ ಕುಂಟೋಜಿ ಗ್ರಾಪಂ ಅಧ್ಯಕ್ಷ ಜಗದೀಶ್ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ಹೊಕ್ರಾಣಿ ಗ್ರಾಮದಲ್ಲಿ ಪಶುವೈದ್ಯರು ಕರೆ ಮಾಡಿದರೆ ಬರುವುದಿಲ್ಲ ಮತ್ತು ಚಿಕಿತ್ಸೆ ಗೆ ಹಣವನ್ನು ಸ್ವಿಕರಿಸುತ್ತಾರೆ ಎಂದರು ತಾಲೂಕಿನಲ್ಲಿ ಪಶು ಚಿಕಿತ್ಸೆಯ ಅಂಬ್ಯುಲೆನ್ಸ ಒಂದೇ ಇರುವುದನ್ನು ಅಧಿಕಾರಿಗಳಿಂದ ಅರಿತು ಇನ್ನೂಂದು ಅಂಬ್ಯುಲೆನ್ಸ ಒದಗಿಸುವ ಭರವಸೆ ನೀಡಿದರು ಜಕ್ಕೆರಾಳ ಗ್ರಾಮದಲ್ಲಿ ಕರೆಂಟ್ ಲೈನ್ ಸಮಸ್ಯೆ ಗೆ ಲೈನ್ ಮನ್ ಗಳು ಬೇರೆಯವರನ್ನು ಕರೆತಂದು ಕೆಲಸ ಮಾಡಿಸಿ ಅವರಿಗೆ ಜನರಿಂದ ಐದನೂರು ಸಾವಿರ ರೂ ಕೂಡಿಸುತ್ತಾರೆಂದು ಗಮನಕ್ಕೆ ತಂದರು
ಹೋಕ್ರಾಣಿ, ಇಣಚಗಲ್ ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ, ರೇಷನ್ ವಿತರಣೆ, ಗ್ರಂಥಾಲಯ ಬೇಡಿಕೆ,
ಮನೆ ಹಂಚಿಕೆ ತಾರತಮ್ಯ,ಸಶ್ಮಾನಕ್ಕೆ ಜಾಗೆ , ಅಂಗನವಾಡಿ ಶಾಲಾ ಕೊಠಡಿ ನಿರ್ಮಾಣ , ಮಹಿಳೆಯರ ಶೌಚಾಲಾಯ, ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಒದಗಿಸುವ ಕುರಿತು ಶಾಸಕರ ಗಮನಕ್ಕೆ ತಂದರು.
ಶಾಸಕರ ಜನ ಸಂಪರ್ಕ ಸಭೆಯಲ್ಲಿ ತಹಶಿಲ್ದಾರ ಬಲರಾಮ ಕಟ್ಟಮನಿ, ತಾಪಂ ಇಒ ನಿಂಗಪ್ಪ ಮಸಳಿ, ಕುಂಟೋಜಿ ಗ್ರಾಪಂ ಅಧ್ಯಕ್ಷ ಜಗದೀಶ್ ನಾಯಕ, ಪಿಡಿಒ ಪರಶುರಾಮ ನಾಯ್ಕೂಡಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಡಾ ಸತೀಶ್ ತಿವಾರಿ,ಎಸ್ ಡಿ ಬಾವಿಕಟ್ಟಿ,ಶಿವಮೂರ್ತಿ ಕುಂಬಾರ, ಎಂ ಎಂ ಬೆಲಗಲ್ಲ್,ಬಸಂತಿ ಮಠ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು,ಗ್ರಾಪಂ ಸದಸ್ಯರು, ಗ್ರಾಮಸ್ಥರು. ಭಾಗವಹಿಸಿದ್ದರು.