ಅಭ್ಯುದಯ ಶಾಲೆ ಆವರಣದಲ್ಲಿ ನಡೆದ ಕಲೋತ್ಸವದಲ್ಲಿ ವಿದ್ಯಾರ್ಥಿಗಳ ಮಾದರಿಗಳನ್ನು ಎಂ.ಎನ್.ಮದರಿ ಅವರು ಪರಿಶೀಲಿಸಿ ವಿದ್ಯಾರ್ಥಿಗಳ ವಿವರಣಾ ಪ್ರತಿಭೆ ಶ್ಲಾಘಿಸಿದರು
9 ಸ್ಟಾಲ್‌ಗಳಲ್ಲಿ 700ಕ್ಕೂ ಹೆಚ್ಚು ಮಾದರಿ ಪ್ರದರ್ಶನ:
ಅಭ್ಯುದಯ ಶಾಲೆಯಲ್ಲಿ ಕಲೋತ್ಸವಕ್ಕೆ ಜನಸಾಗರ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರ ಹಿಂಭಾಗ ಹೋಳ್ಕರ್ ಕಾಲೋನಿಯಲ್ಲಿರುವ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಲೋತ್ಸವದಲ್ಲಿ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್‌ನ ಇಂಗ್ಲೀಷ್ ಮಾಧ್ಯಮದ ಮಕ್ಕಳು ವಿವಿಧ ವಿಷಯಗಳ ಮೇಲೆ ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು. ಕಲೋತ್ಸವದಲ್ಲಿನ ವಸ್ತು ಪ್ರದರ್ಶನ ನೋಡಲು ಜನಸಾಗರವೇ ಹರಿದು ಬಂದಿತ್ತು.
ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಕುರುಬರ ಸಂಘದ ಅಧ್ಯಕ್ಷ, ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್.ಮದರಿ ಅವರು ಮಕ್ಕಳಲ್ಲಿ ಅಪಾರ ಪ್ರತಿಭೆ ಹುದುಗಿರುತ್ತದೆ. ಇದನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯ ಅವಶ್ಯಕತೆ ಇರುತ್ತದೆ. ನಮ್ಮ ಸಂಸ್ಥೆಯಿAದ ಇಂಥ ಪ್ರತಿಭೆ ಹೊರತರಲು ವೇದಿಕೆ ಕಲ್ಪಿಸಿಕೊಡುವ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ವಿದ್ಯಾರ್ಥಿಗಳು ಸಾಕಷ್ಟು ಮಾದರಿಗಳನ್ನು ತಯಾರಿಸಿ ಅವುಗಳನ್ನು ಪ್ರೇಕ್ಷಕರಿಗೆ ಇಂಗ್ಲೀಷಿನಲ್ಲೇ ವಿವರಿಸುವ ಮೂಲಕ ತಮ್ಮ ಪಾಂಡಿತ್ಯ ಅನಾವರಣಗೊಳಿಸಿದ್ದು ಶ್ಲಾಘನೀಯ. ಇವರನ್ನು ತಯಾರು ಮಾಡಲು ಮಾರ್ಗದರ್ಶನ ನೀಡಿದ ನಮ್ಮ ಶಾಲೆಗಳ ಶಿಕ್ಷಕರು ಕಾರ್ಯ ಮೆಚ್ಚುವಂಥದ್ದು ಎಂದರು.
ಎಲ್‌ಕೆಜಿ, ಯುಕೆಜಿ, ೧-೧೦ನೇ ತರಗತಿಯ ೭೦೦ಕ್ಕೂ ಹೆಚ್ಚು ಮಕ್ಕಳು ೯ ಸ್ಟಾಲ್‌ಗಳಲ್ಲಿ ತಮ್ಮ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಮಕ್ಕಳು ಪಾಲಕರು ಮಾತ್ರವಲ್ಲದೆ ಸಾರ್ವಜನಿಕರೂ ಕುತೂಹಲದಿಂದ ಆಗಮಿಸಿ ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು. ಗಣ ತದಲ್ಲಿ ೩೯, ಸಮಾಜ ವಿಜ್ಞಾನದಲ್ಲಿ ೨೦, ವಿಜ್ಞಾನದಲ್ಲಿ ೪೮, ಇಂಗ್ಲೀಷಿನಲ್ಲಿ ೨೫, ಕನ್ನಡದಲ್ಲಿ ೪೫, ಹಿಂದಿಯಲ್ಲಿ ೧೪, ಎಲ್‌ಕೆಜಿ ವಿಭಾಗದಲ್ಲಿ ೧೨, ಯುಕೆಜಿ ವಿಭಾಗದಲ್ಲಿ ೧೫ ಮಾದರಿಗಳನ್ನು ಪ್ರದರ್ಶಿಸಲಾಯಿತು. ವಿಜ್ಞಾನ ವಸ್ತುಪ್ರದರ್ಶನ ಹೆಚ್ಚು ಗಮನ ಸೆಳೆದು ಸಾರ್ವಜನಿಕರಿಂದ ಶ್ಲಾಘಿಸಲ್ಪಟ್ಟಿತು.
ಶಿಕ್ಷಕರಾದ ತೇಜಶ್ವಿನಿ ಪತ್ತಾರ, ಸುಮಾ ಬಿದರಕುಂದಿ, ಎಚ್.ಎಲ್.ಬಾಗವಾನ, ಕವಿತಾ ರಾಠೋಡ, ಯಾಸಿನ್ ಬಾಗವಾನ, ಎಚ್.ಎಚ್.ಮೂಲಿಮನಿ, ಬಿ.ಎಚ್.ಜಾವಡಗಿ, ಸವಿತಾ ಪಲ್ಲೇದ, ನೇತ್ರಾ ಪಲ್ಲೇದ, ನೀಲಾ ಮನಗೂಳಿ, ಮರ‍್ರೆ, ಜ್ಯೋತಿ ಸಜ್ಜನ, ಪಿ.ಎಸ್.ಕಲ್ಯಾಣಮಠ, ಪ್ರಿಯಾ ಹುರಕಡ್ಲಿ, ಪರಮ್ಮ ಗಣಾಚಾರಿ, ಸಾಗರ ಜಾಧವ, ರಾಜೇಶ, ಸುಚಿತ್ರಾ ಹಿಪ್ಪರಗಿ, ಎ.ಬಿ.ಬಳಬಟ್ಟಿ, ಸುನೀಲ ಚನ್ನಾಪುರ ಮಾರ್ಗದರ್ಶಕರಾಗಿ ಆಯಾ ಸ್ಟಾಲ್‌ಗಳ ಉಸ್ತುವಾರಿ ನೋಡಿಕೊಂಡರು.
ಸಂಸ್ಥೆಯ ನಿರ್ದೇಶಕ ಕಿರಣ್ ಮದರಿ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ, ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ನಿವೃತ್ತ ತೆರಿಗೆ ಅಧಿಕಾರಿ ಬಸವರಾಜ ಬಿಜ್ಜೂರ, ಅಭ್ಯುದಯ ಸೈನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲರು, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಸೇರಿ ಹಲವರು ಪಾಲ್ಗೊಂಡಿದ್ದರು.