ತಿರುವನಂತಪುರಂ: ಬಹು ಬಾಷಾ ನಟ ಮೋಹನ್ ಲಾಲ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಆರಾಟ್ ಫೆಬ್ರವರಿ 18 ರಂದು ಬಿಡುಗಡೆಯಾಗಲಿದೆ. ವಿಶ್ವದಾದ್ಯಂತ ಸಿನೆಮಾಮಂದಿರಗಳಲ್ಲಿ ಅಂದು ತೆರೆ ಕಾಣಲಿದೆ. ನಟ ಮೋಹನ್ ಲಾಲ್ ಸಾಮಾಜಿಕ ಜಾಲ ತಾಣಗಳಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಆರಾಟ್ ಅಂದರೆ ದೇವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆಯ ಐದನೇ ದಿನ ನಡೆಯುವ ತೆಪ್ಪೋತ್ಸವ. ಸಾಮಾನ್ಯವಾಗಿ ಕೇರಳದ ದೇವಸ್ಥಾನಗಳಲ್ಲಿ ಕೆರೆ ಅಥವಾ ನದಿಗಳಲ್ಲಿ ದೇವರ ವಿಗ್ರಹಗಳಿಗೆ ಪುಣ್ಯ ಸ್ನಾನ ಮಾಡಿಸಲಾಗುತ್ತಿದೆ. ಈ ಸಿನೆಮಾದ ಕಥಾ ಹಂದರದ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಸಿನೆಮಾ ಪೋಸ್ಟ್ ಗಳಲ್ಲಿ ಮೋಹನ್ ಲಾಲ್ ಹಿಂದೆ ದೇವಸ್ಥಾನವೊಂದರ ಚಿತ್ರ ಇದೆ.