ಮುದ್ದೇಬಿಹಾಳ ; ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಹೋರಾಟ ಮಾಡಬೇಕಾ? 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಶೋಷಿತ ವರ್ಗದ ಜನರ ಉದ್ದಾರಕ್ಕೆ ಸಂವಿಧಾನ ರಚನೆ ಮಾಡಿದ್ದರು. ಆ ಕಾಲಘಟ್ಟದಲ್ಲಿ ಅನುಭವ ಮಂಟಪವೆಂಬ ಪಾರ್ಲಿಮೆಂಟ್ ರಚಸಿ ಅದರಲ್ಲಿ ಎಲ್ಲಾ ವರ್ಗದ ದಿಗ್ಗಜ ಶರಣ ಶರಣೆಯರನ್ನು ಸದಸ್ಯರನ್ನಾಗಿಸಿದ್ದರು ಎಂದು ಮಾಜಿ ಸಚಿವ ಹಣಮಂತಪ್ಪ ಆಲ್ಕೋಡ ಹೇಳಿದರು ಅವರು ಗುರುವಾರ ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ತಾಲೂಕ ಘಟಕ ಪದಾಧಿಕಾರಿಗಳ ಪದಗ್ರಹಣ ಹಾಗೂ ಜನ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು 12 ಶತಮಾನದಲ್ಲಿ ನಾವುಗಳು ಮಹಾನ್ ಶರಣ ಆದರ್ಶ ತತ್ವಗಳನ್ನು ಪಾಲಿಸಿಕೊಂಡು ಅರಿವು ಮೂಡಿಸಿಕೂಂಡಿದ್ದರೆ ನಮಗೆ ಈ ಸಂವಿಧಾನ ಬೇಕಿರಲಿಲ್ಲಾ ಬಸವಣ್ಣನವರ ಅದೇ ಸಂವಿಧಾನ ಸಾಕಿತ್ತು ಅದೇ ಚೆನ್ನಾಗಿತ್ತು ಈ ಸಂವಿಧಾನದಲ್ಲಿ ತಾರತಮ್ಯ ಇರಬಹುದು ಬಸವಣ್ಣನವರ ಸಂವಿಧಾನದಲ್ಲಿ ತಾರತಮ್ಯ ಇರಲಿಲ್ಲ ಸೂಳೆ ಸಂಕವ್ವ ಸೇರಿದಂತೆ ಎಲ್ಲಾ ಶೋಷಿತ ವರ್ಗದವರು ಬಸವಣ್ಣನವರ ಕ್ಯಾಬಿನೆಟ್ ನಲ್ಲಿ ಇದ್ದರು ಬಸವಣ್ಣನವರು ಅಪ್ಪ ಮಾದರ ಚೆನ್ನಯ್ಯಾರೆಂದರು ಎಂದ ಅವರು ಇಂದು ಎಲ್ಲಾ ವರ್ಗದ ಜನರಿಗೆ ಕಾನೂನು ಅರಿವು ಇರದ ಕಾರಣ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆಂದರು.
ಇಂದು ಸರಕಾರ ಮಹಿಳೆಯರ ಮತಕ್ಕಾಗಿ ಗೃಹಲಕ್ಷ್ಮೀ ಹೆಸರಿನಲ್ಲಿ 2 ಸಾವಿರ ರೂ ನೀಡುತ್ತಿದೆ ಹೆಗಡೆಯವರು ಜಿಪಂ ತಾಪಂ ತಂದರು ದೇವೆಗೌಡರು ಗಂಗಾಕಲ್ಯಾಣ ಯೋಜನೆ ತಂದರು ಅವರ‌್ಯಾರೋ ಮತಕ್ಕಾಗಿ ಯೋಜನೆ ಮಾಡಲಿಲ್ಲ ಜನರ ಬದುಕಿಗಾಗಿ ಮಾಡಿದರು ಹಣಕ್ಕಾಗಿ ನಿಮ್ಮ ಮತಗಳನ್ನು ಮಾರಿಕೂಳ್ಳಬೇಡಿ ಎಂದರು.
ಬಾಕ್ಸ; ಅಂಬೇಡ್ಕರ್ ಅವರು ದಲಿತ ವರ್ಗಗಾಗಿ ಬಹುದೊಡ್ಡ ತ್ಯಾಗ ಮಾಡಿದ್ದಾರೆ ಅವರು ಯಾವುದೇ ಸೌಲಭ್ಯ ಮೀಸಲಾತಿ ಪಡೆಯಲಿಲ್ಲ ಗೌರವ ಪಡೆಯಲಿಲ್ಲಾ ಅವರು ಮೃತಪಟ್ಟಾಗ ಜಗಜೀವನ್ ರಾಂ ಇರದೆ ಇದ್ದರೆ ಅವರ ಪಾರ್ಥಿವ ಶರೀರ ಮುಂಬಯಿ ಗೆ ಬರುತ್ತಿರಲಿಲ್ಲ ಅಂದಿನ ಸರಕಾರ ಅವರನ್ನು ಹೇಗೆ ನಡೆಸಿಕೊಂಡಿತ್ತೆಂದು ಮರೆಯಬಾರದು ; ಹಣಮಂತ ಆಲ್ಕೋಡ ಮಾಜಿ ಸಚಿವ
ಹುಬ್ಬಳ್ಳಿ ಧಾರವಾಡದ ಮಾಜಿ ಶಾಸಕ ಹಾಲರವಿ ವೀರಭದ್ರಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಯಾರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂತು ನಮ್ಮ ಸಮಾಜಕ್ಕೆ ನೀಡಿದ ಭಾಷೆ ಮರೆತಿದೆ ನಮ್ಮ ಋಣಭಾರವನ್ನು ಕಾಂಗ್ರೆಸ್ ಪಕ್ಷ ತೀರಿಸಬೇಕಿದೆ ಎಂದರು .
ಈ ವೇಳೆ ಜಿಲ್ಲಾಧ್ಯಕ್ಷ್ಯ ಎಂ ಆರ್ ದೂಡಮನಿ, ಹರೀಶ ನಾಟಿಕಾರ, ಹನಮಂತಗೌಡ ಬಿರಾದಾರ ಮಾತನಾಡಿದರು ,ರಾಜಾಧ್ಯಕ್ಷ್ಯ ಪರಶುರಾಮ ರೋಣಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೋಮನಗೌಡ ಪಾಟೀಲ ನಡಹಳ್ಳಿ, ಡಿ.ಬಿ ಮುದೂರ, ಹಣಮಂತ ನಾಯಕಮಕ್ಕಳ, ಶಂಕರಗೌಡ ಶಿವಣಗಿ , ರವಿ ನಾಯಕ,ಸೋಮನಗೌಡ ಬಿರಾದಾರ, ಸುಭಾಸ ಕಟ್ಟಿಮನಿ, ಅಶೋಕ ಇರಕಲ್, ಪರಶುರಾಮ ನಾಲತವಾಡ, ರೇವಣೆಪ್ಪ ಅಜಮನಿ, ಭಗವಂತ ಕಬಾಡೆ, ಬಸವರಾಜ ಸಿದ್ದಾಪುರ ( ಪೂಜಾರಿ ) ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಸವರಾಜ ಸಿದ್ದಾಪುರ ( ಪೂಜಾರಿ ) ಸ್ವಾಗತಿಸಿದರು, ಪರಶುರಾಮ ಕಪನೂರ ನಿರೂಪಿಸಿ ವಂದಿಸಿದರು.
ಒಂದು ಕಾಲದಲ್ಲಿ ನಿಮ್ಮನ್ನು ನಂಬಿ ನಾವು ಬದುಕಿದವರು ನಿಮ್ಮ ಹೂಲ, ನಿಮ್ಮ ಜಾನುವಾರು ನಮ್ಮವು ಎಂದು ನಿಮ್ಮನ್ನು ಅಪ್ಪ ಅವ್ವ ಎಂದವರು ನಾವು ಅಂದು ನೀವು ನಮ್ಮನ್ನು ಸ್ವಲ್ಪ ಎತ್ತಿ ಹಿಡಿದ್ದಿದ್ದರೆ ನಿಮ್ಮ ಪರಿಸ್ಥಿತಿ ಇಂದು ಹೀಗೆ ಇರುತಿರಲಿಲ್ಲವೆಂದು ಮೇಲ್ವರ್ಗದ ಜನರ ಮೀಸಲಾತಿ ಹೋರಾಟ ಮಾಡುತ್ತಿರುವ ಕುರಿತು ಮಾರ್ಮಿಕವಾಗಿ ಮಾಜಿ ಸಚಿವ ಆಲ್ಕೂಡ ಹೇಳಿದರು.