ಮಹಿಳಾ ಪ್ರೀಮಿಯರ್ ಲೀಗ್ : ಹ್ಯಾಟ್ರಿಕ್ ಗೆಲುವಿನ ತವಕದಲ್ಲಿ ಆರ್‌ಸಿಬಿ
ಸೃತಿ ಪಡೆಗೆ ಇಂದು ಮುಂಬಯಿ ಸವಾಲು
Voiceofjanata DESK SPORTS NEWS
ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಯೂಪಿಎಲ್ ತನ್ನ ಮೂರನೇ ಪಂದ್ಯದಲ್ಲಿ ಶುಕ್ರವಾರ ಬಲಿಷ್ಠ ಮುಂಬಯಿ ಇಂಡಿಯನ್ಸ್ ತಂಡದ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದು, ಪ್ಯಾಟ್ರಿಕ್ ಗೆಲುವಿನ ತನಕದಲ್ಲಿದೆ.
ಹಿಂದಿನ ಎರಡು ಪಂದ್ಯಗಳಲ್ಲಿ ಗುಜರಾತ್ ಜಯಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಲ್‌ರೌಂಡ್ ಲಯವನ್ನು ಮುಂದುವರಿಸುವ ಗುರಿಯೆಲ್ಲಿದೆ. ಐದು ತಂಡಗಳ ಅಂಕಪಟ್ಟಿಯಲ್ಲಿ ಉತ್ತಮ ರೇಟ್ ಹೊಂದಿರುವ ಆರ್‌ಸಿದ 4 ಅಂಕಗಳೊಂದಿಗೆ ಸದ್ಯ ಮೊದಲ ಸ್ಥಾನದಲ್ಲಿದೆ.
ಹಾಲಿ ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಆರ್‌ಸಿಬಿ, ಮನೆಯಂಗಳ ಚಿನ್ನಸ್ವಾಮಿ ಕ್ರೀಡಾಂಗಣದ ಎಲ್ಲಾ ಲಾಭವನ್ನು ಪಡೆಯಲು ಎದುರು ನೋಡುತ್ತಿದೆ.
ಹಿಂದಿನ ಪಂದ್ಯದಲ್ಲಿ ಡಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 47 ಎಸೆತಗಳಲ್ಲಿ 1 ಸಿಡಿಸಿದ ಮಂಧಾನ, ಮತ್ತೊಮ್ಮೆ ಅದೇ ಲಯವನ್ನು ಮುಂದುವರಿಸಿದ್ದರೆ, 2024ರ ಐ ದುಹಿಳಾ ಒಡಿಐ ಕ್ರಿಕೆಟ್ ಪ್ರಶಸ್ತಿ ಗೆಲ್ಲುವ ಜೊತೆಗೆ ಐಸಿಸಿ ಮಹಿಳಾ T-20 ತಂಡದಲ್ಲಿ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಉಪನಾಯಕಿ ಮಂಧಾನ, ಬ್ಯಾಟಿಂಗ್ ನಲ್ಲಿ ಸ್ಥಿರತೆ ಕಾಯ್ದುಕೊಂಡರೆ, ಆರ್ ಸಿಬಿಗೆ ಸತತ ಮೂರನೇ ಜಯದ ತವಕ ಇದಾಗಿದೆ.
ಮುಂಬಯಿ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್. ಆತಿಥೇಯ ತಂಡವನ್ನು ಕಟ್ಟಿಹಾಕಲು ಹೇಗೆ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.