ಮುದ್ದೇಬಿಹಾಳ :ತಾಲೂಕಿನ ನಾಗರಬೆಟ್ಟ ಗ್ರಾಮದ ಗುಡ್ಡದ ಹತ್ತಿರ ಬರುವ ಆಕ್ಸ್‌ಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ ಯ ಕನ್ನಡ ಮತ್ತು ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಫೆ 9 ರಂದು ಆಕ್ಸ್‌ಫರ್ಡ್ ಪಾಟೀಲ್ಸ್ ಜ್ಯೂನಿಯರ್ ಜೀನಿಯಸ್ ಅವಾರ್ಡ್ 2025 ಸ್ಕಾಲರ್ಶಿಪ್ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ ಸಿಬಿಎಸ್ಇ ಐಸಿಎಸ್ಇ ರಾಜ್ಯ ಪಠ್ಯಕ್ರಮದಲ್ಲಿ ಕನ್ನಡ ಆಂಗ್ಲ ಮಾಧ್ಯಮ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು .
ಪರೀಕ್ಷೆ ಮೊದಲ 5 ರ‌್ಯಾಂಕ್ ಬಂದ ವಿದ್ಯಾರ್ಥಿಗಳಿಗೆ 90 ಸಾವಿರ ರೂ , 6_10 ರ‌್ಯಾಂಕ್ ಬಂದ ವಿದ್ಯಾರ್ಥಿಗಳಿಗೆ 60 ಸಾವಿರ ರೂ ಸ್ಕಾಲರ್ಶಿಪ್ ಗೆ ಆಯ್ಕೆಯಾಗುತ್ತಾರೆ .
5 ,6 ,7 ತರಗತಿಯ ವರೆಗೆ 2 ವರ್ಷ ಹಾಗೂ 7,8,9 ಮತ್ತು 10 ನೇ ತರಗತಿಯ ವರಗೆ ಮೂರು ವರ್ಷ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತ ಅಧಿಕಾರಿ ಅಮಿತಗೌಡ ಪಾಟೀಲ ತಿಳಿಸಿದ್ದಾರೆ.
ಪರೀಕ್ಷೆಯು ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಗ್ರಾಮರ್ ವಿಷಯಗಳನ್ನೊಳಗೊಂಡ 60 ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳಿದ್ದು ಉತ್ತರಿಸಲು ಒಂದು ಗಂಟೆ ಕಾಲಾವಕಾಶವಿದೆ. ಪರೀಕ್ಷಾರ್ಥಿಗಳು ತಮ್ಮ ಆಧಾರ ಕಾರ್ಡ್, ಶಾಲೆಯ ಐಡಿ ಕಾರ್ಡ್ ಕಡ್ಡಾಯವಾಗಿ ತರಬೇಕು. ಹೆಸರು ನೋಂದಾಯಿಸಲು ವಿದ್ಯಾರ್ಥಿಯ ಹೆಸರು, ವರ್ಗ, ಶಾಲೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮಾದರಿಯಲ್ಲಿ ಸಂದೇಶ ಟೈಪ್ ಮಾಡಿ ಮೊ: 7483930372ಗೆ ಎಸ್‌ಎಂಎಸ್ ಅಥವಾ ವಾಟ್ಸ್ ಅಪ್ ಸಂದೇಶ ಕಳಿಸಬೇಕು. ಪರೀಕ್ಷೆ ದಿನದಂದೂ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಮೊ: 8971769144 (ಅಧ್ಯಕ್ಷರು) ಅಥವಾ ಮೊ: 8970507159, 7996679906 ಸಂಖ್ಯೆ ಸಂಪರ್ಕಿಸಬಹುದೆಂದು ಎಂದು ಅವರು ತಿಳಿಸಿದ್ದಾರೆ.