ಲಿಂಗಸೂಗೂರು: ತಾಲೂಕಿನ ಈಚನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕಡಿಮೆ ಮೊತ್ತ ಕೂಲಿ ಪಾವತಿ ಮಾಡಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಲಿಂಗಸುಗೂರು ತಾಲೂಕಾ ಸಮಿತಿ ವತಿಯಿಂದ ದಿನಾಂಕ 28-01-2022 ರಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಕೂಲಿಕಾರರಿಗೆ ಕೂಲಿ ಮೊತ್ತ ಪಾವತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಿದಿದ್ದರೆ ದಿನಾಂಕ 04-02-2022 ರಂದು ತಾಪಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಈಚನಾಳ ಗ್ರಾಮ ಪಂಚಾಯತಿಗೆ ನರೇಗಾ ಸಹಾಯಕ ನಿರ್ದೇಶಕರಾದ ಸೋಮನಗೌಡ ಪಾಟೀಲ್ ರವರು ಬೇಟಿ ನೀಡಿ ನರೇಗಾ ಕೂಲಿಕಾರರಿಗೆ ಕೂಲಿ ಮೊತ್ತ ಪಾವತಿಯಲ್ಲಿ ಆಗಿರುವ ತೊಂದರೆ ಕುರಿತು ಪರಿಶೀಲಿಸಿದರು. ಕೂಲಿಕಾರರಿಗೆ ಕೂಲಿ ಮೊತ್ತ ಪಾವತಿಯಲ್ಲಿ ಆಗಿರುವ ತೊಂದರೆ ಸರಿಪಡಿಸುವ ಭರವಸೆ ನೀಡಿದರು. ಅಲ್ಲದೆ ಕೂಲಿಕಾರರು ಕೆಲಸ ಮಾಡಿದ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ಪಿಡಿಒ ಖಾಜಾ ಬೇಗಂ, ಜೆಇ ಹರ್ಷವರ್ಧನ್, ಗ್ರಾಮಸ್ಥರಾದ ಕುಪ್ಪಣ್ಣ ಚಿಗರಿ, ಗದ್ದೆಪ್ಪ, ಸಿದ್ದಲಿಂಗಪ್ಪ, ಮಲ್ಲರೆಡ್ಡಪ್ಪ, ನಾಗರಾಜ್ ಹನುಮೇಶ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಮಲ್ಲಣ್ಣ ನೀರಲಕೇರಿ, ಸುರೇಶ್ ಉಪಸ್ಥಿತರಿದ್ದರು.