ವಿಜಯಪುರ : ಕಳ್ಳರು ವ್ಯಕ್ತಿಯ ಗಮನ ಬೇರಡೆ ಸೆಳೆದು 10 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಬಿಎಲ್ಡಿಇ ರಸ್ತೆಯಲ್ಲಿನ ಎಕ್ಸಿಸ್ ಬ್ಯಾಂಕ್ ಬಳಿ ನಡೆದಿದೆ. ನಿಂಗರಾಜ್ ನಾಶಿ ಹಣ ಕಳೆದುಕೊಂಡವರು.
ಇನ್ನೂ ಎಕ್ಸಿಸ್ ಬ್ಯಾಂಕ್ ನಿಂದ ಹತ್ತು ಲಕ್ಷ ರೂಪಾಯಿ ಹಣ ಡ್ರಾ ಮಾಡಿ ಕಾರಿನಲ್ಲಿಟ್ಟುಕೊಂಡು ಹೋಗುವ ವೇಳೆಯಲ್ಲಿ ಕಾರಿನ ಇಂಜೀನ್ ನಲ್ಲಿ ಆಯಿಲ್ ಸೋರುತ್ತಿದೆ ಎಂದು ಕಳ್ಳರು ಗಮನ ಸೆಳೆದಿದ್ದಾರೆ. ಈ ವೇಳೆ ಕಾರಿನ ಸೀಟ್ ನಲ್ಲಿಟ್ಟಿದ್ದ ಹತ್ತು ಲಕ್ಷ ರೂಪಾಯಿ ಎಗರಿಸಿ ಕದೀಮರು ಪರಾರಿಯಾಗಿದ್ದಾರೆ. ಇನ್ನು ಹನುಂತ ಚಿಂಚಲಿ ಎಂಬ ಗುತ್ತಿಗೆದಾರ ಬಳಿ ಮ್ಯಾನೇಜರ್ ಆಗಿರೋ ಲಿಂಗರಾಜ ನಾಶಿ ಕೆಲಸ ಮಾಡುತ್ತಿದ್ದರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.