ಇಂಡಿಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವ ಪಣ..! ನೂತನ ಅಧ್ಯಕ್ಷ ಬೂದಿಹಾಳ
ಇಂಡಿ: ಇತ್ತೀಚೆಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವರಾಜ ರಾವೂರ ಹಾಗೂ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಣ್ಣ ಬೂದಿಹಾಳ ಅವರನ್ನು ಶನಿವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಸರ್ಕಾರಿ ನೌಕರರು ನನ್ನನ್ನು ನಂಬಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಅವರ ಅರುಣ ತೀರಿಸಲು ಬದ್ಧನಿದ್ದೇನೆ. ಅದರಂತೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಾಲೂಕಿನ ರೈತರ ಪರವಾಗಿ ಪ್ರಾಮಾಣ ಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದ ಅವರು ಅಕ್ಕಮಹಾದೇವಿ ಸೌಹಾರ್ದ ಸಂಘದವರು ಸದಾ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ, ಒಳ್ಳೆಯದನ್ನು ಮಾಡುವ ಜನರನ್ನು ಗುರುತಿಸಿ ಸತ್ಕರಿಸುವ ಸತ್ಕಾರ್ಯ ಮಾಡುತ್ತಿರುವುದು, ಇನ್ನಷ್ಟು ಒಳ್ಳೆಯದನ್ನು ಮಾಡಲು ಅವರಿಗೆ ಪ್ರೇರೇಪಿಸುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಮಾತನಾಡಿ, ಇಂಡಿ ಪಟ್ಟಣದಲ್ಲಿ ನನ್ನ ಅವಧಿಯಲ್ಲಿಯೇ ಜಿಲ್ಲಾ ನ್ಯಾಯಾಲಯವನ್ನು ಕಟ್ಟಿಸಿ ಉದ್ಘಾಟ್ಟಿಸುವ ಕನಸು ಕಂಡಿದ್ದೇನೆ ಅದಕ್ಕೆ ಎಲ್ಲರ ಸಹಕಾರ ಅವಶ್ಯವಾಗಿದೆ. ಎಲ್ಲ ವಕೀಲರು ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧ ಆಯ್ಕೆ ಮಾಡಿದ್ದಕ್ಕೆ ಅವರೆಲ್ಲರಿಗೂ ಕೃಜಜ್ಞನಾಗಿರುವೆ ಎಂದ ಅವರು ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಕೆಲವೇ ವರ್ಷದ ಅವಧಿಯಲ್ಲಿ ಉತ್ತಮ ವಹಿವಾಟು ನಡೆಸಿ ಜನಮನ್ನಣೆ ಗಳಿಸಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣ ಕ ಕರ್ತವ್ಯದಿಂದ ಸಂಘ ಉನ್ನತವಾಗಿ ಬೆಳೆಯುತ್ತಿದೆ ಎಂದು ಶ್ಲಾಘಿಸಿದ ಅವರು ಇರುವಷ್ಟು ದಿನ ಎಲ್ಲರೊಂದಿಗೂ ಅನ್ಯೋನ್ಯವಾಗಿ ಒಳ್ಳೆಯವರ ಬೆನ್ನೆಲುಬಾಗಿ ಇರೋಣ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ಗೌರವಾಧ್ಯಕ್ಷ ಮಂಜುನಾಥ ಕಾಮಗೊಂಡ, ರಮೇಶ ಹತ್ತಿ, ಶಿವಾನಂದ ಮಠಪತಿ, ಶ್ರೀಶೈಲ ಪಟ್ಟಣ, ಬಸವರಾಜ ದಶವಂತ, ಮಲ್ಲಿಕಾರ್ಜುನ ಹಾವಿನಾಳಮಠ, ರಾಮ ಬರಗಿ, ಶಂಕರ ಜಮಾದಾರ, ನ್ಯಾಯವಾದಿಗಳಾದ ವೀರೇಂದ್ರ ಪಾಟೀಲ, ಎಸ್.ಬಿ. ಕೆಂಬೋಗಿ, ಸೇರಿದಂತೆ ಸಿಬ್ಬಂದಿಗಳಾದ ಅಶೋಕ ಬಳಬಟ್ಟಿ, ಶ್ರೀಕಾಂತ ಗಡಗಲಿ, ಸಚಿನ್ ಮೇಡೇದಾರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಇತ್ತೀಚೆಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವರಾಜ ರಾವೂರ ಹಾಗೂ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಣ್ಣ ಬೂದಿಹಾಳ ಅವರನ್ನು ಶನಿವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.