ಏಡ್ಸ ನಿಯಂತ್ರಣಕ್ಕೆ ಕೈ ಜೋಡಿಸಿ
ಇಂಡಿ : ಅಸುರಕ್ಷಿತ ಲೈಂಗಿಕತೆ ಜೀವಕ್ಕೆ ಅಪಾಯ. ಅದರಲ್ಲೂ ಮಹಾಮಾರಿ ಎಚ್.ಐ ವಿ ಮತ್ತು ಏಡ್ಸ ಸೋಂಕಿತದ ಬಗ್ಗೆ ಯುವ ಜನಾಂಗ ಬಹಳಷ್ಟು ಎಚ್ಚರಿಕೆ ಮತ್ತು ಸುರಕ್ಷಾ ಕ್ರಮ ಅನುಸರಿಸಲು ಹಿರಿಯ ಶ್ರೇಣ ನ್ಯಾಯಾಧೀಶ ಕೊಟೆಪ್ಪ ಕಾಂಬಳೆ ಮಾತನಾಡಿದರು. ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಏಡ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿರಿಯ ಶ್ರೇಣ ನ್ಯಾಯಾಧೀಶ ಸುನೀಲಕುಮಾರ ಮಾತನಾಡಿ ಏಡ್ಸ ಎಂದು ಯಾರು ಭಯ ಪಡುವ ಅಗತ್ಯವಿಲ್ಲ. ಅದಕ್ಕಾಗಿ ಸರಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಏಡ್ಸ ಹೋಗಲಾಡಿಸಲು ಪ್ರಯತ್ನ ನಡೆದಿದೆ ಎಂದರು.
ಡಾ|| ರಾಜೇಶ ಕೋಳೆಕರ ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಉಚಿತ ಊಟ, ಔಷದ ರಕ್ತ ಪರೀಕ್ಷೆ ವೈದ್ಯರ ಸಲಹೆ ನೀಡಲಾಗುತ್ತದೆ ಎಂದರು.
ಪ್ರಾಚಾರ್ಯ ಚಂದ್ರಶೇಖರ ದಶವಂತ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಅಂಬಲಗಿ, ಕೆ.ಜಿ.ಶೀಲವಂತ, ವಿಜಯಕುಮಾರ ಶಿಂಧೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ, ನ್ಯಾಯವಾದಿ ಅಶೋಕ ಗಜಾಕೋಶ, ಅಜೀತ ಧನಶೆಟ್ಟಿ, ವೈದ್ಯರಾದ ಡಾ||ಪ್ರವೀಣ ಗಜಾಕೋಶ, ಎನ್.ಕೆ. ನಾಡಪುರೋಹಿತ, ಹರೀಶ ಪತ್ತಾರ,ವೀರೇಶ ಹಿರೇಮಠ , ವಿನೋದ ಚಿಕ್ಕಮಠ, ಸರಕಾರಿ ಅಭಿಯೋಜಕ ಆಯ್.ಕೆ.ಗಚ್ಚಿನಮಹಲ, ಮಲ್ಲೆಶ ಎಂಬತನಾಳ ಮತ್ತಿತರಿದ್ದರು.
ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಏಡ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣ ನ್ಯಾಯಾಧೀಶ ಕೊಟೆಪ್ಪ ಕಾಂಬಳೆ ಮಾತನಾಡಿದರು.