ಇಂದಿನ ಯುವ ಪೀಳಿಗೆಗೆ ಶಿಕ್ಷಣ ಅತೀ ಅವಶ್ಯಕ : ಎನ್.ಎಂ.ಬಿರಾದಾರ
ಇಂಡಿ: ಮಾನವನ ಬದುಕು ಸುಂದರವಾಗಿ ಬೆಳಗಬೇಕಾದರೆ ಇಂದಿನ ಯುವ ಪೀಳಿಗೆಗೆ ಶಿಕ್ಷಣ ಅತೀ ಅವಶ್ಯಕವಾಗಿದೆ ಎಂದು ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಅವರು ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವರ ಚಟ್ಟಿ ಜಾತ್ರಾ ಮಹೋತ್ಸವ ಹಾಗೂ ಭ್ರಮರಾಂಬಾ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರಹಣ ಕಾರ್ಯಕ್ರಮದ ನಿಮಿತ್ಯವಾಗಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ “ಆಧ್ಯಾತ್ಮಿಕತೆ ಮತ್ತು ಶಿಕ್ಷಣ” ಈ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.
ನಮ್ಮ ಬದುಕು ಸುಂದರವಾಗಲು ನಮಗೆ ಮನೆ, ಮನ ಹಾಗೂ ಹಣ ಈ ಮೂರು ಅಂಶಗಳು ಅತೀ ಅವಶ್ಯವಾಗಿವೆ. ಮೊದಲನೆಯದಾಗಿ ಮನೆಯಲ್ಲಿ ಒಳ್ಳೆಯ ವಾತಾವರಣವಿದ್ದು, ಗುರು ಹಿರಿಯರ ಜೊತೆ ಅನ್ಯೋನ್ನತೆಯಿಂದಿರುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಬೇಕು. ಗಂಡ ಹೆಂಡತಿ ಮಧ್ಯ ಹೊಂದಾಣ ಕೆ ಇರಬೇಕು. ಎರಡನೇದಾಗಿ ಮನಸ್ಸು ಸರಿಯಾಗಿ ಕೆಲಸ ಮಾಡಬೇಕಾದರೆ ನಾವು ಹೊಂದಾಣ ಕೆಯಿಂದ ಇರುವುದನ್ನು ಕಲಿಯಬೇಕು. ಮದುವೆಯಾದ ಬಳಿಕ ವಿಚ್ಛೇದನದ ಮಾತು ಬೇಡವೇ ಬೇಡ. ನಮ್ಮಲ್ಲಿ ಒಳ್ಳೆಯ ವಿಚಾರಗಳಿದ್ದರೆ ಸಂಬAಧ ಚೆನ್ನಾಗಿರುತ್ತದೆ. ಮನಸ್ಸು ಯಾವತ್ತೂ ಒಳ್ಳೆಯದನ್ನು ವಿಚಾರ ಮಾಡುತ್ತಾ, ಆಧ್ಯಾತ್ಮದ ಕಡೆ ಒಲವು ತೋರಿ, ದೈವತ್ವದಲ್ಲಿ ನಂಬಿಕೆ ಇಡುವುದನ್ನು ಕಲಿಯಬೇಕು ಯಾವತ್ತೂ ಸಣ್ಣ ತಪ್ಪನ್ನು ದೊಡ್ಡದಾಗಿ ಬಿಂಬಿಸಬಾರದು. ನಮ್ಮ ಬದುಕು ನಕಲಿಯಾಗಿದ್ದರೆ ಜೀವನವು ನಕಲಿಯಾಗುತ್ತಲೆ ಮುನ್ನಡೆಯುತ್ತದೆ. ಅದು ಅಸಲಿಯಾಗಲು ಪ್ರಯತ್ನಿಸಿದರೆ ಅಸಲಿಯಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಿದರು.
ಮೂರನೇದಾಗಿ ಹಣ ನಾವು ಚೆನ್ನಾಗಿ ದುಡಿದು ಹಣ ಗಳಿಸಬೇಕು. ಆದಾಯದಲ್ಲಿ ಅರ್ಧ ಹಣವನ್ನು ದಾನ ಮಾಡುವುದನ್ನು ರೂಡಿಸಿಕೊಳ್ಳಬೇಕು. ನಿಷ್ಠೆಯಿಂದ ದುಡಿಮೆ ಮಾಡಿ, ಕೆಲಸ ಮಾಡುವ ಸಂಸ್ಕೃತಿಯನ್ನು ನಾವು ಬೆಳೆಸಿಕೊಳ್ಳಬೇಕಾದರೆ ನಮ್ಮ ಮಕ್ಕಳಿಗೆ ಶಿಕ್ಷಣ ಅತೀ ಅವಶ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿದಿನ ಪ್ರವಚನ ನೀಡುತ್ತಿರುವ ಹಾಗೂ ಸಾನಿಧ್ಯ ವಹಿಸಿರುವ ಕಲಬುರ್ಗಿಯ ಸಿದ್ಧಾರೂಢ ಮಠದ ಮಾತೊ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವರ ಚಟ್ಟಿ ಜಾತ್ರಾ ಮಹೋತ್ಸವ ಹಾಗೂ ಭ್ರಮರಾಂಬಾ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರಹಣ ಕಾರ್ಯಕ್ರಮದ ನಿಮಿತ್ಯವಾಗಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ “ಆಧ್ಯಾತ್ಮಿಕತೆ ಮತ್ತು ಶಿಕ್ಷಣ” ಈ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು. Ãಶ್ರೀ ವಿದ್ಯಾತಾಯಿಯವರು ಆಶೀರ್ವಚನ ನೀಡಿದರು. ದೇವಸ್ಥಾನದ ಅರ್ಚಕರಾದ ಗುರುಪಾದಯ್ಯ ಮಠಪತಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತು ತಾಲೂಕಾಧ್ಯಕ್ಷ ಆರ್.ವಿ.ಪಾಟೀಲ, ದೇವಸ್ಥಾನದ ಸಮಿತಿ ಅಧ್ಯಕ್ಷ ನಾಗನಗೌಡ ಬಿರಾದಾರ, ಕಾರ್ಯದರ್ಶಿ ಸಂಗಪ್ಪ ಉಪ್ಪಿನ, ಅಣ್ಣಾರಾಯ ಬಮಹಳ್ಳಿ, ಆರ್.ಡಿ.ಪಾಟೀಲ, ಟಿ.ವಿ.ಪಾಟೀಲ, ಮಂಜು ಪ್ಯಾಟಿ, ವಿಜಯಕುಮಾರ ಬಿರಾದಾರ, ಸೋಮು ಪಾತಾಳಿ, ಗ್ರಾಪಂ ಸದಸ್ಯರಾದ ರವೀಂದ್ರ ನಾರಾಯಣಪುರ ಹಾಗೂ ಅರವಿಂದ ಮೈದರಗಿ ಉಪಸ್ಥಿತರಿದ್ದರು.
ಇಂಡಿ: ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವರ ಚಟ್ಟಿ ಜಾತ್ರಾ ಮಹೋತ್ಸವ ಹಾಗೂ ಭ್ರಮರಾಂಬಾ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರಹಣ ಕಾರ್ಯಕ್ರಮದ ನಿಮಿತ್ಯವಾಗಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ “ಆಧ್ಯಾತ್ಮಿಕತೆ ಮತ್ತು ಶಿಕ್ಷಣ” ಈ ವಿಷಯದ ಕುರಿತು ಎನ್.ಎಂ.ಬಿರಾದಾರ ಉಪನ್ಯಾಸ ನೀಡಿದರು.