ಜಿಲ್ಲಾಸ್ಪತ್ರೆಯಲ್ಲಿ 1ವರ್ಷದ ಕಂದಮ್ಮನನ್ನು ಅಪರಿಚಿತ ವ್ಯಕ್ತಿ ಕದ್ದೊಯ್ದ..! ಎಲ್ಲಿ ಗೊತ್ತಾ..?
ವಿಜಯಪುರ : ಜಿಲ್ಲಾಸ್ಪತ್ರೆಯಲ್ಲಿ 1ವರ್ಷದ ಕಂದಮ್ಮನನ್ನು ಅಪರಿಚಿತ ವ್ಯಕ್ತಿ ಕದ್ದೊಯ್ದ ಘಟನೆ ನಡೆದಿದ್ದು, ಕಂದಮ್ಮನಿಗಾಗಿ ತಾಯಿ ಕಣ್ಣೀರು ಹಾಕಿ ಗೋಳಿಟ್ಟಿದ್ದಾಳೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮಗಳು ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಇಬ್ಬರು ಮಕ್ಕಳೊಂದಿಗೆ ನೋಡಿಕೊಳ್ಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಹಾಡಹಗಲೇ 1ವರ್ಷದ ಸಂದೀಪ್ ನನ್ನು ಕದ್ದುಕೊಂಡು ಹೋಗಿದ್ದಾನೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಇಬ್ಬರು ಮಕ್ಕಳೊಂದಿಗೆ,ತಾಯಿ ಪದ್ಮಾ ಪವಾರ್ ಜೊತೆಗೆ ವಿಜಯಪುರಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಾರೆ.ಈ ವೇಳೆ ತಾಯಿ ಪದ್ಮಾ ಪವಾರ್ ಆರೋಗ್ಯ ಕೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ. ನವ್ಹೆಂಬರ್ 23ರ ಬೆಳಿಗ್ಗೆ 10-30ರಿಂದ 11ಗಂಟೆಯೊಳಗೆ ರಾಮೇಶ್ವರಿ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ತಾಯಿ ಬಳಿ 1ವರ್ಷದ ಮಗು ಸಂದೀಪ್ ನನ್ನು ಬಿಟ್ಟು ಹೋಗಿದ್ದಾಳೆ.ಈ ವೇಳೆ ಸಂದೀಪ್ ಎದ್ದು ಅಳಲಿಕ್ಕೆ ಶುರು ಮಾಡಿದಾಗ ಮತ್ತೋರ್ವ ಪರಿಚಿತ 10ವರ್ಷದ ಸಂದೀಪ್ 1ವರ್ಷದ ಮಗುವನ್ನು ಎತ್ತಿಕೊಂಡು ಆಟವಾಡಿಸಿದ್ದಾನೆ. ಇದನ್ನೇ ಗಮನಿಸಿದ ಅಪರಿಚಿತ ವ್ಯಕ್ತಿ ವಾರ್ಡ್ ನೊಳಗೆ ಬಂದು ಮಗು ಎತ್ತಾಡಿಸಿದ್ದಾನೆ. ಆ ಬಳಿಕ ಸಂದೀಪ್ ಮಗುವನ್ನು ಹೊರಗೆ ತೆಗೆದುಕೊಂಡು ಹೋದಾಗ ಅಪರಿಚಿತ ವ್ಯಕ್ತಿ ಮಗುವನ್ನು ಕದ್ದುಕೊಂಡು ಹೋಗಿದ್ದಾನೆ. ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿರೋದು ತಿಳಿದು ಬಂದಿದೆ. ಇನ್ನು ಅಪರಿಚಿತ ವ್ಯಕ್ತಿ ಇದೇ ವಾರ್ಡ್ ಹೊರಗಡೆ ರಾತ್ರಿ ಮಲಗಿಕೊಂಡಿದ್ನಂತೆ. ಯಾರೋ ರೋಗಿ ಸಂಬಂಧಿ ಇರಬೇಕು ಅಂತ ಅಂದುಕೊಂಡಿದ್ದಾರೆ. ಬೆಳಿಗ್ಗೆ ತಾಯಿಯ ಕಫದ ಪರೀಕ್ಷೆಗೆ ಕಲ್ಚರ್ ಕೊಡಲು ಮಗಳು ರಾಮೇಶ್ವರಿ ತೆರಳಿದ ಬಳಿಕ ಅಪರಿಚಿತ ವ್ಯಕ್ತಿ ಮಗು ಕದ್ದೊಯಿದ್ದಾನೆ. ವಾಪಸ್ ಬಂದು ನೋಡಿದಾಗ 1ವರ್ಷದ ಪುಟ್ಟ ಕಂದಮ್ಮ ಕಾಣದಿದ್ದಾಗ ತಾಯಿ ಹಂಬಲಿಸಿ ಹುಡುಕಾಡಿದ್ದಾಳೆ ಬಳಿಕ ಜಿಲ್ಲಾಸ್ಪತ್ರೆಯಲ್ಲಿರೋ ಪೊಲೀಸ್ ಠಾಣೆಗೆ ಹಾಗೂ ವೈದ್ಯರ ಗಮನಕ್ಕೆ ತಂದಿದ್ದಾಳೆ. ಈ ವೇಳೆ ಪೊಲೀಸರು ಜಿಲ್ಲಾಸ್ಪತ್ರೆ ಆವರಣ ಜೊತೆಗೆ ಸಿಸಿಟಿವಿ ಪರಿಶೀಲನೆ ನಡೆಸಿದ್ರು. ಗಾಂಧಿ ಚೌಕ್ ಪೊಲೀಸ್ ಠಾಣೆಗೆ ತೆರಳಿ ರಾಮೇಶ್ವರಿ ದೂರು ನೀಡಿದ್ದು, ಪೊಲೀಸರು ಮಗು ಕಳ್ಳತನವಾಗಿರೋ ಮಾಹಿತಿ ರವಾನಿಸಿ ಮಗು ಪತ್ತೆಗಾಗಿ ಬಲೆ ಬೀಸಿದ್ದಾರೆ. ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿ ಮಗುವನ್ನು ಕದ್ದೊಯ್ದಿದ್ದಾನಾ ಅಥವಾ ಮಗುವನ್ನು ಕಳ್ಳತನ ಮಾಡುವ ಉದ್ದೇಶದಿಂದಲೇ ಕೃತ್ಯ ನಡೆಸಿದ್ದಾ ಅಥವಾ ಈಚೆಗೆ ರಾಮೇಶ್ವರಿ ಹಾಗೂ ಆಕೆಯ ಗಂಡ ರತನ್ ಸಾಳುಂಕೆ ಮಧ್ಯೆ ಜಗಳವಾಗಿದೆ ಅಂತೆ ಈ ಹಿನ್ನೆಲೆಯಲ್ಲಿ ಮಗು ಕಳ್ಳತನವಾಗಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. 1ವರ್ಷದ ಪುಟ್ಟ ಕಂದಮ್ಮ ತಾಯಿ ಹಾಲುಂಡಿರಬೇಕಾದವ ಯಾರೋ ಅಪರಿಚಿತ ವ್ಯಕ್ತಿ ಕದ್ದುಕೊಂಡು ಹೋಗಿರೋದು ಹೆತ್ತ ತಾಯಿ ಮಗುವಿಗಾಗಿ ಹಂಬಲಿಸಿ ಕಣ್ಣೀರಿಟ್ಟಿದ್ದು ಕಂಡು ರೋಗಿಗಳ ಸಂಬಂಧಿಕರು ಮಮ್ಮಲ ಮರುಗಿದ್ರು. ಆದಷ್ಟು ಬೇಗ ಮಗು ಪತ್ತೆ ಮಾಡಿ ಕೊಡಬೇಕು ಅಂತ ತಾಯಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ.