ಸಾವಯವ ಕೃಷಿ ರಾಷ್ಟ್ರ, ಅಂತರಾಷ್ಟ್ರೀಯದಲ್ಲಿ ಪ್ರಾಮುಖ್ಯತೆ
ಇಂಡಿ: ಸಾವಯವ ಕೃಷಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಳೆದ ಒಂದು ದಶಕದಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಈಗಿನ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಹೊಂದುವ ಅವಶ್ಯಕತೆ ಇದ್ದು, ರೈತರು ಪ್ರತಿಯೊಂದು ಹಂತದಲ್ಲಿ ಉತ್ಪಾದನಾ ಖರ್ಚನ್ನು ಕಡಿಮೆಮಾಡಿ ಪರಿಸರವನ್ನು ಸಂರಕ್ಷಿಸಿ ಉತ್ತಮ ಗುಣಮಟ್ಟದ ಆಹಾರವನ್ನು ಉತ್ಪಾದಿಸಬೇಕಾಗಿದೆ ಎಂದು ಕೆವಿಕೆ ವಿಜ್ಞಾನಿ (ಬೇಸಾಯಶಾಸ್ತç) ಡಾ. ಪ್ರಕಾಶ ಜಿ. ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಎಸ್.ಎಸಿ. ಎಸ್.ಪಿ. ಯೋಜನೆ ಅಡಿಯಲ್ಲಿ ಸಾವಯವ ಕೃಷಿ ಕುರಿತು ನವೆಂಬರ್ ೧೪ ರಿಂದ ೧೬ ರವರೆಗೆ ಮೂರು ದಿನಗಳ ಕಾಲ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾವಯವ ಕೃಷಿಯು ಒಂದು ಹೊಸ ಆಶಾಕಿರಣವಾಗಿ ಅಭಿವೃದ್ದಿ ಹೊಂದುತ್ತಿದೆ. ರೈತರು ಸಾವಯುವ ಕೃಷಿಯತ್ತ ಹೆಜ್ಜೆ ಹಾಕುತ್ತಿರುವುದು ನಿಜಕ್ಕೂ ಅತೀ ಸಂತಸ ತರುತ್ತಿದೆ. ಈಗಿನ ರಾಸಾಯನಿಕ ಕೃಷಿಯಲ್ಲಿ ಭೂಮಿ ಹಾಳಾಗುವುದಲ್ಲದೆ, ರಾಸಾಯನಿಕ ಸಿಂಪರಣೆಯ ಆಹಾರ ಸೇವನೆಯಿಂದ ಮನುಷ್ಯನಿಗೆ ವಿವಿಧ ಬಗೆಯ ರೋಗಗಳು ಬರುತ್ತಿವೆ ಮತ್ತು ಆಯುಷ್ಯ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಉದ್ಘಾಟಕರಾಗಿ ಆಗಮಿಸಿದ್ದ ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ವಿಜಯಪುರದ ಡಾ. ಆರ್.ಬಿ. ಬೆಳ್ಳಿ, ಮಾತನಾಡಿ, ಭಾರತದಲ್ಲಿ ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ರಾಸಾಯನಿಕ ಗೊಬ್ಬರಗಳ ಹಾಗೂ ಪೀಡೆನಾಶಕಗಳ ವಿವೇಚನೆರಹಿತ ಬಳಕೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ ಮತ್ತು ಪ್ರಾಣ ಸಂಕುಲಗಳು ಮಲೀನಗೊಳ್ಳುತ್ತಲಿವೆ. ಆಧುನಿಕ ಕೃಷಿ ಪದ್ಧತಿಯಿಂದ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣ ಸುವುದಲ್ಲದೆ ಮಣ ್ಣನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊAಡಿದೆ ಎಂದರು.
ಸಾವಯವ ಕೃಷಿಗೆ ಪ್ರಸ್ತುತದಲ್ಲಿ ವಿಶೇಷ ಸ್ಥಾನ ಕೊಡಲಾಗಿದೆ, ಏಕೆಂದರೆ ಭೂಮಿಯ ಉತ್ಪಾದಕತೆ ಸಾಮರ್ಥ್ಯವು ಕುಂಠಿತವಾಗುತ್ತಿರುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತಿ ಹೆಚ್ಚಿನ ಖರ್ಚಿನಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ ಮಣ ್ಣನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಅತಿ ಅವಶ್ಯಕವಾಗಿದೆ. ಪರಿಸರದ ಸಂರಕ್ಷಣೆಗಾಗಿ ಭೂಮಿ, ನೀರು ಮತ್ತು ಗಾಳಿ ಇವುಗಳ ಮಾಲಿನ್ಯವನ್ನು ತಡೆಗಟ್ಟುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ. ತೋಟಗಾರಿಕೆ ಅಧಿಕಾರಿ ಹೆಚ್. ಎಸ್. ಪಾಟೀಲ್, ಮಾತನಾಡಿ, ಸಾವಯವ ಕೃಷಿಗೆ ಸರ್ಕಾರದಿಂದ ಲಭ್ಯವಿರುವ ಯೋಜನೆಗಳು ಸಾವಯವ ಕೃಷಿಯ ಉತ್ಪನ್ನಗಳ ಮಾರುಕಟ್ಟೆಗಳ ಅವಕಾಶ ಹಾಗೂ ಸಾವಯವ ರೈತರಿಗೆ ಸಾವಯವ ಪ್ರಮಾಣ Ãಕರಣ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಇಂಡಿಯ ವಿಜ್ಞಾನಿಗಳಾದ ಡಾ. ವೀಣಾ ಚಂದಾವರಿ, ಡಾ. ಪ್ರೇಮ್‌ಚಂದ್ ಯು, ಡಾ. ಬಾಲಾಜಿ ನಾಯಕ, ವಿಜ್ಞಾನಿ ಮಜೀದ ಜಿ, ಸೇರಿದಂತೆ ಇಂಗಳಗಿ, ಸಾಲೋಟಗಿ, ಆಲಮೇಲ, ಭತಗುಣಕಿ ಮತ್ತು ಇಂಡಿ ಗ್ರಾಮದ ಸುಮಾರು ೩೫ ಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.
ಡಾ. ಹೀನಾ ಎಂ.ಎಸ್. ವಿಜ್ಞಾನಿ (ತೋಟಗಾರಿಕೆ), ಕೃಷಿ ವಿಜ್ಞಾನ ಕೇಂದ್ರ, ಇಂಡಿ ವಂದಿಸಿದರು. ಡಾ. ಪ್ರಸಾದ ಎಂ.ಜಿ. ವಿಜ್ಞಾನಿ (ಪಶು ವಿಜ್ಞಾನ), ಕೆ.ವಿ.ಕೆ. ಇಂಡಿ. ಸ್ವಾಗತಿಸಿದರು.
ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ ನಡೆಯಿತು.