ಇಂಡಿ: ಛತ್ರಪತಿ ಶಿವಾಜಿ ಮೂರ್ತಿ ಹಾಗೂ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅಪಮಾನ ಮಾಡಿರುವ ಎಂಇಎಸ್ ಕ್ರಮವನ್ನು ಖಂಡಿಸಿ ಕರ್ನಾಟಕ ಮರಾಠಾ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ವತಿಯಿಂದ ಇಂಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಶಿವಾಜಿ ವೃತದಿಂದ ಪ್ರತಿಭಟನೆ ಪ್ರಾರಂಭಿಸಿ ಮಹಾವೀರ ವೃತ,ಅಂಬೇಡ್ಕರ್ ವೃತ್ ಮತ್ತು ಬಸವೇಶ್ವರದಲ್ಲಿ ಶಿವಸೇನಾ ಸಂಘಟನೆಯ ವಿರುದ್ಧವಾಗಿ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ತದನಂತರ ತಾಲೂಕು ಆಡಳಿತ ಸೌದಕ್ಕೆ ತೆರಳಿ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಮಾತಾನಾಡಿ ಕನ್ನಡದ ಹೆಸರಲ್ಲಿ ಕೆಲ ಸಂಘಟನೆಗಳು ರೊಲಕಾಲ್ ಮಾಡುತ್ತವೆ.ನೆಲ ಜಲ ಕನ್ನಡ ಭಾಷೆ ಅಭಿಮಾನ ನಮಗೂ ಇದೆ ಎಂದರು.
ಬೆಳಗಾವಿ ಮತ್ತು ಬೆಂಗಳೂರಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಸಿ ಬಳಿದು ಅವಮಾನ ಮಾಡಿದ್ದು ಖಂಡನೀಯ ಇದರಲ್ಲಿ ರಾಜಕೀಯ ಪಿತೂರಿ ಅಡಗಿದೆ. ರಾಜಕೀಯ ಲಾಭಕ್ಕಾಗಿ ದುಡ್ಡಿನ ಚಟಕೊಸ್ಕರ ಭಾರತಾಂಬೆಯ ಮಕ್ಕಳನ್ನು ಅವಮಾನಿಸಿದ್ದವರನ್ನ ಕೂಡಲೇ ಬಂಧಿಸಬೇಕು.ಹಿಂದುಗಳ ನಡೆವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದ್ದು,ಭಾರತಾಂಬೆಯ ಮಕ್ಕಳನ್ನು ಮುಂದಿಟ್ಟುಕೊಂಡು ಮರ್ಯಾದೆ ತೆಗೆಯುತ್ತಿದ್ದಾರೆ.ಇಂತಹ ದೇಶದ್ರೋಹಿ ಸಂಘಟನೆಗಳನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಮನವಿ ಮಾಡಿದರು. ಆನಂದ ಪವಾರ ತಾಲೂಕು ಮರಾಠ ಸಮಾಜದ ಅಧ್ಯಕ್ಷ, ಸಂಜು ಪವಾರ,ರವಿ ಗವಳಿ,ವಸಂತ ಚವ್ಹಾಣ,ಹುಚ್ಚಪ್ಪ ತಳವಾರ, ವಿನೋದ ಸೂರ್ಯವಂಶಿ,ಶಿವಾಜಿ ಶಿಂದೆ,ಅಪ್ಪು ಪವಾರ,ಅಪ್ಪು ಮಾನೆ,ಗಿರೀಶ ಮಿಸಾಳೆ,ರಾಜಗುರು ದೇವರ,ವಿಲಾಸ ಮಹೇಂದ್ರಕರ ಸುನೀಲ ಗೌಳಿ ಉಪಸ್ಥಿತರು.