ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಾಲ : ಎಮ್ ಜಿ ಪಾಟೀಲ
ಇಂಡಿ: ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಾಲ ನೀಡುವ ಮೂಲಕ ವಿಜಯಪೂರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯವಾಗಿ ರೈತರ ಶ್ರೇಯೋಭಿವೃಧ್ಧಿಗಾಗಿ ಶ್ರಮಿಸುತ್ತಿದೆ. ರೈತರ ಪ್ರೋತ್ಸಾಹಕ್ಕೆ ನಿಂತಿದೆ ಎಂದು ಬ್ಯಾಂಕಿನ ಅಭಿವೃದ್ಧಿ ಅಧಿಕಾರಿ ಎಮ್.ಜಿ. ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ವಿಜಯಪೂರ ರಸ್ತೆಯಲ್ಲಿನ ವಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಇಂಡಿ ಶಾಖೆಯಿಂದ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದರು.
ಈಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ಉದ್ದೇಶ, ಬೆಳವಣ ಗೆ ಹಾಗೂ ಪ್ರಗತಿ ಕುರಿತಂತೆ ವಿವರವಾಗಿ ತಿಳಿಸಿದರು. ಬ್ಯಾಂಕು ಈಲಾಗಲೇ ೨೪೯೬೮೪ ರೈತರಿಗೆ ಒಟ್ಟು ರೂ.೧೮.೬೩ ಕೋಟಿ ಕೃಷಿ ಸಾಲವನ್ನು ಸರಕಾರದ ಬಡ್ಡಿ ಸಹಾಯಧನ ಯೋಜನೆಯಡಿ ನೀಡಿದೆ. ಇದರೊಂದಿಗೆ ಬ್ಯಾಂಕಿನ ಗ್ರಾಹಕರಿಗೆ ವಿವಿಧ ಕೃಷಿಯೇತರ ಉದ್ದೇಶಗಳಿಗಾಗಿ ಒಟ್ಟು ರೂ.೧೨೪೭ ಕೋಟಿ ಸಾಲ ನೀಡಿದೆ ಎಂದು ತಿಳಿಸಿದರು.
ಬ್ಯಾಂಕಿನ ಗ್ರಾಹಕರೊಂದಿಗೆ ಸಮಾಲೋಚಿಸಿ ಹೆಚ್ಚಿನ ಪ್ರವಾಣದಲ್ಲಿ ಕೃಷಿಯೇತರ ಸಾಲಗಳನ್ನು ನೀಡುವ ಉದ್ದೇಶದಿಂದ ಶಾಖಾ ಮಟ್ಟದಲ್ಲಿ ಗ್ರಾಹಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಹಕರಿಂದ ಬಂದ ಬೇಡಿಕೆಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಿ ಸಾಲ ವಿತರಣೆಯಲ್ಲಿ ಸರಳತೆ ತರಲು ಬ್ಯಾಂಕಿನ ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ ಕ್ರಮವಿಡಲಾಗುವುದೆಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ನಿರ್ದೇಶಕ ಕಲ್ಲನಗೌಡ ಬ. ಪಾಟೀಲ ಮಾತನಾಡಿ, ಬ್ಯಾಂಕಿನ ಅಧ್ಯಕ್ಷರಾದ ಶಿವಾನಂದ ಎಸ್. ಪಾಟೀಲ ಅವರ ನೇತೃತ್ವದಲ್ಲಿ ಬ್ಯಾಂಕು ಪ್ರಗತಿಪಥದಲ್ಲಿ ಸಾಗಿದ್ದು ಗ್ರಾಹಕಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕು ಗ್ರಾಹಕರಿಗೆ ವಿವಿಧ ಕೃಷಿಯೇತರ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ಉದ್ದೇಶಿಸಿದ್ದು ಪ್ರಯೋಜನ ಪಡೆಯುವಂತೆ ಕೋರಿದರು. ಉಪಪ್ರಧಾನ ವ್ಯವಸ್ಥಾಪಕ ಎಮ್.ಎಚ್. ಹತ್ತೂರಕರ ಮಾತನಾಡಿ, ಬ್ಯಾಂಕು ಡಿಜಿಟಲ್ ಸೇವೆಗಳನ್ನು ಆರಂಭಗೊಳಿಸಿದೆ ಎಂದು ತಿಳಿಸಿ ಗ್ರಾಹಕರು ತಮ್ಮ ಹೆಚ್ಚಿನ ಉಳಿತಾಯವನ್ನು ಬ್ಯಾಂಕಿನಲ್ಲಿ ಠೇವಣ ಇಡುವಂತೆ ವಿನಂತಿಸಿದರು.
ವೇದಿಕೆಯಲ್ಲಿ ವಿ.ಹೆಚ್. ಬಿರಾದಾರ, ಅಶೋಕಗೌಡ ಬಿರಾದಾರ, ಶರಣು ಮೇಡೇದಾರ, ಆರ್.ಎಂ. ಬಣಗಾರ ವೇದಿಕೆಯಲ್ಲಿದ್ದರು.
ತಾಲೂಕಾ ನೋಡೆಲ್ ಅಧಿಕಾರಿ ಎಮ್.ಎಸ್. ದೇಸಾಯಿ ಸ್ವಾಗತಿಸಿದರು. ಇಂಡಿ ಶಾಖಾ ವ್ಯವಸ್ಥಾಪಕ ಐ.ಎಸ್. ತೆಲ್ಲೂರ ವಂದಿಸಿದರು.
ಇಂಡಿ: ಬುಧವಾರ ಪಟ್ಟಣದ ವಿಜಯಪೂರ ರಸ್ತೆಯಲ್ಲಿನ ವಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಇಂಡಿ ಶಾಖೆಯಿಂದ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯಲ್ಲಿ ಎಮ್.ಜಿ. ಪಾಟೀಲ ಮಾತನಾಡಿದರು.