ಬಂಜಾರ ಜನಾಂಗ, ಬಂಗಾರದ ಜನಾಂಗ
ಬಂಜಾರ ಜನಾಂಗ ಎರಡು ಪಿಡುಗಿನಿಂದ ದೂರವಿರಬೇಕು..! ಅದು ಯಾವುದು ಗೊತ್ತಾ..?
ಇಂಡಿ : ಎರಡು ಕೆಟ್ಟ ಪಿಡುಗು ಬೀಡುವ ಮೂಲಕ ಬಂಜಾರ ಜನಾಂಗ, ಬಂಗಾರದ ಜನಾಂಗವಾಗಬೇಕು ಎಂದು ನಡೆದಾಡುವ ದೇವ ಸಿದ್ದೇಶ್ವರ ಸ್ವಾಮೀಜಿ ಹೇಳುತ್ತಿದ್ದರೆಂದು ಸೋಮನಿಂಗ ಮಹಾರಾಜರು (ಕೆಸರಟ್ಟಿ) ಮಾತನಾಡುತ್ತಿದ್ದರು.
ತಾಲ್ಲೂಕಿನ ಆಳೂರ ಎಲ್ ಟಿ 1 ರಲ್ಲಿ ಆಯೋಜಿಸಿದ್ದ ಜಗದಂಭಾದೇವಿ ಹಾಗೂ ಶ್ರೀ ಸಂತ ಸೇವಾಲಾಲ 18 _ನೇ ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯವಹಸಿ ಹೇಳಿದರು.
ಮಾಂಸ ತಿನ್ನುವ ಹಾಗೂ ಶೇರಾಯಿ ಕುಡಿಯುವ ಎರಡು ಕೆಟ್ಟ ಪಿಡುಗುನ್ನು ಬೀಡಬೇಕು. ಆ ಬಂಗಾರದಂತಹ ಜೀವನ ಕಟ್ಟಲು, ಉತ್ತಮ ಸಂಸ್ಕಾರ ಸಂಸ್ಕೃತಿ ಉಳಿಸಲು, ಬೆಳೆಸಲು ಸಾಧ್ಯ. ಆದರೆ ತಾಂಡಾದಲ್ಲಿ ರಾಜಕಾರಣ ಹೆಚ್ಚಾಗಿದ್ದರಿಂದ ಮೌಲ್ಯಗಳು ಕುಸಿಯುತ್ತಿದ್ದು ಬೇಜಾರದ ಸಂಗತಿಯಾಗಿದೆ. ರಾಜಕಾರಣ ಮಾಡಿ ತಪ್ಪಲ್ಲ..! ಆದರೆ ಚುನಾವಣೆ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇನ್ನಿತರ ಪಕ್ಷಗಳು ಬೆಂಬಲಿಸಿ ಮತದಾನ ಮಾಡಿದ ಮರು ಕ್ಷಣವೇ..! ಕೇವಲ ಬಂಜಾರ ಪಕ್ಷ ಮಾತ್ರ ತಾಂಡಾದಲ್ಲಿ ಕಾಣಬೇಕು ಎಂದು ಹೇಳಿದರು.
ಈ ಸದ್ಯ ಆಳೂರ ತಾಂಡಾದಲ್ಲಿ ಬದಲಾವಣೆ ಕಾಣುತ್ತಿದ್ದೆವೆ. ಸಾಯಂಕಾಲ ತಾಂಡಾಗಳಿಗೆ ಬೇಟಿ ನೀದಬೇಡಿ ಸಂದರ್ಭ ಒಂದು ಕಾಲದಲ್ಲಿ ಇತ್ತು. ಶೇರಾಯಿ ಕುಡಿದು, ಜಗಳ ಹೊಡೆದಾಟ ಬಡಿದಾಟ ಮಾಡುತ್ತಿದ್ದರೆಂದು. ಆದರೆ ಈ ತಾಂಡಾದಲ್ಲಿ ಆಧ್ಯಾತ್ಮಿಕ ಚಿಂತನೆ, ಪ್ರವಚನ, ಭಯ, ಭಕ್ತಿ ಕಾಣುತ್ತಿರುವುದು ಹೆಮ್ಮೆಯ ಸಂಗತಿ. ಬಂಜಾರ ಸಮುದಾಯದ ಸಂಸ್ಕಾರ, ಸಂಸ್ಕೃತಿಗೆ ದ್ವಾಪರ ಯುಗ, ತ್ರೇತಾಯುಗ ಹಾಗೂ ಕಲಿಯುಗದ ಇತಿಹಾಸವಿದೆ. ಬಂಜಾರ ಸಮುದಾಯದ ಶ್ರಯೋಭಿವೃದ್ದಿ ಪ್ರತಿಯೊಬ್ಬರೂ ಶ್ರಮವಹಿಸಬೇಕು. ಅತೀ ಹೆಚ್ಚಿನದಾಗಿ ಶೈಕ್ಷಣಿಕ್ಕೆ ಮಹತ್ವ ಕೊಟ್ಟು ಹಾಗೂ ಸಂತ ಸೇವಾಲಾಲರ ಆದರ್ಶವನ್ನು ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವರೂಪನಾಂದ ಸ್ವಾಮಿಜಿ, ಸಿದ್ಧಲಿಂಗ ಮಹಾಸ್ವಾಮಿಜಿ, ವಿಜಯ ಮಹಾಂತೇಶ ಮಠ, ಶಂಕರಾನಂದ ಮಹಾಸ್ವಾಮಿಜಿ, ಆಳೂರ ಯಶವಂತ ಮಹಾರಾಜರು, ಗ್ರಾ.ಪ ಅಧ್ಯಕ್ಷೆ ಸಮೀತ್ರಾ ನಾಯಿಕ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಲ್ ಪಿ ರಾಠೋಡ, ಭೀಮಸಿಂಗ ರಾಠೋಡ, ಹಣಮಂತ ಚಾಬುಕಸವಾರ, ಯಲ್ಲಪ ಹೀರೆಕುರಬುರ, ನಾಮದೇವ ಮಾವಿನಹಳ್ಳಿ, ಸಂಜೀವ ಚವ್ಹಾಣ ಚಂದು ದನಸಿಂಗ ರಾಠೋಡ, ತಾರಾಸಿಂಗ ಕಾಸಿನಾಥ ಪವ್ಹಾರ, ಭೀಮು ರಾಠೋಡ, ತಾರಾಸಿಂಗ ರಾಠೋಡ, ಲೋಕು ರಾಠೋಡ ಇನ್ನೂ ಅನೇಕ ಮುಖಂಡರು ಉಪಸ್ಥಿತಿ ಇದ್ದರು
ತಾಲ್ಲೂಕಿನ ಆಳೂರ ಎಲ್ ಟಿ 1 ರಲ್ಲಿ ಆಯೋಜಿಸಿದ್ದ ಜಗದಂಭಾದೇವಿ ಹಾಗೂ ಶ್ರೀ ಸಂತ ಸೇವಾಲಾಲ 18 ನೆ ಜಾತ್ರಾ ಮಹೋತ್ಸವದಲ್ಲಿ ಸೋಮನಿಂಗ ಮಹಾರಾಜರು (ಕೆಸರಟ್ಟಿ) ದಿವ್ಯ ಸಾನಿಧ್ಯವಹಸಿ ಹೇಳಿದರು.