ಮಗುವಿನ ಶವ ಇಟ್ಟು ಪ್ರತಿಭಟನೆ ..! ಕಾರಣಗೊತ್ತಾ..?
ವಿಜಯಪುರ: ಎರಡು ವರ್ಷದ ಕಂದನೋರ್ವ ಚರಂಡಿಗೆ ಬಿದ್ದು ಅಸುನೀಗಿರುವ ಘಟನೆ ಸಾರ್ವಜನಿಕ ರನ್ನು ಬೆಚ್ಚಿ ಬೀಳಿಸಿದೆ.
ವಿಜಯಪುರ ನಗರದ ಜೆಎಂ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಯಾಸೀನ್ ಸದ್ದಾಂ ಮುಲ್ಲಾ (2) ಮೃತ ಕಂದ.
ತೆರೆದ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕಳೆದ ಹಲವು ತಿಂಗಳುಗಳಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಈವರೆಗೆ ಕ್ರಮ ಕೈಗೊಂಡಿರಲಿಲ್ಲ.
ಹೀಗಾಗಿ ಈ ಅವಘಡಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಮೃತಪಟ್ಟಿರುವ ಕುಟುಂಬಸ್ಥರು ಆರೋಪಿಸಿದರಲ್ಲದೇ ಮಗುವಿನ ಶವ ಇಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆಯ ವಿರುದ್ಧ ಸ್ಥಳೀಯರು, ಕುಟುಂಬಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಢಾಯಿಸಿದರಾದರೂ ಹೋದ ಜೀವ ಮರಳಿ ಬಂದೀತೆ?