ಡಿ ಎಸ್ ಎಸ್ ಸಂಘಟನೆಯಿಂದ ಒಳ ಮೀಸಲಾತಿಗಾಗಿ ಚಾಮರಾಜ ನಗರದಲ್ಲಿ ಬೃಹತ್ ಪ್ರತಿಭಟನೆ .
ಹನೂರು : ನಮ್ಮ ಸಂಘವು ಕಳೆದ 30 ವರ್ಷಗಳಿಂದ ಪರಿಶಿಷ್ಟಜಾತಿಯ ಒಳಮೀಸಲಾತಿಗೆ ಆಗ್ರಹಿಸಿ ಚಳುವಳಿ ಹೋರಾಟ ನಡೆಸಿಕೊಂಡು ಬಂದಿರುವುದು ಸರಿಯಷ್ಟೆ, ಅದರಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವರವರ ನೇತೃತ್ವದಲ್ಲಿ ಸದಾಶಿವ ಆಯೋಗವನ್ನು 2005ರಲ್ಲಿ ರಚನೆ ಮಾಡಿ. ಸದರಿ ಸದಾಶಿವ ಆಯೋಗವು ತನ್ನ ಸಂಪೂರ್ಣ ವರದಿಯನ್ನು 2012ರಲ್ಲಿ ಜಾರಿಮಾಡಿ, ಅಂದಿನ ಮುಖ್ಯ – ಮಂತ್ರಿಯಾಗಿದ್ದಂತಹ ಸದಾನಂದಗೌಡರವರಿಗೆ ವರದಿಯನ್ನು ಸಲ್ಲಿಸಲಾಯಿತು ಎಂದು ನಂಜುಂಡ ಮೌರ್ಯ ತಿಳಿಸಿದರು.
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು
ಸರ್ಕಾರಗಳು ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಹಾಗೆ ಮುಂದುವರೆಸಿಕೊಂಡು ಬಂದಿರುತ್ತಾರೆ. ಆದರೆ ಬಸವರಾಜುಬೊಮ್ಮಾಯಿರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿಯನ್ನು ಮತ್ತು ನಾಗಮೋಹನ್‌ದಾಸ್ ವರದಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜಿ.ಸಿ.ಮಾಧುಸ್ವಾಮಿರವರ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಿದ್ದು, ಸಂಪುಟ ಸಮಿತಿ ತನ್ನ ವರದಿಯನ್ನು ಮೂರು ತಿಂಗಳ ಒಳಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೀಗಿರುವ 15ರ ಬದಲಾಗಿ ಪರಿಶಿಷ್ಟ ಜಾತಿಗೆ 17 ಮತ್ತು ಪರಿಶಿಷ್ಟ ಪಂಗಡಕ್ಕೆ 3ರ ಬದಲಾಗಿ 7ಕ್ಕೆ ಮೀಸಲಾತಿಯನ್ನು ಒಟ್ಟು 24% ಹೆಚ್ಚಿಸಿ ಸಂಪುಟದಲ್ಲಿ ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಜಾರಿ ಮಾಡಲು ಕೂಡಲೇ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿರುತ್ತಾರೆ.
ಆದರೆ ಸಂಬಂಧಪಟ್ಟಂತಹ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದರಿಂದ ಅಂದರೆ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ತಾವು ಜಾರಿ ಮಾಡಿದ ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ಪಾರಿ ಮಾಡಿದ್ದರೆ ವಿರುದ್ಧವಾಗಿ ಅಂದು ಈ ಹಿಂದೆ ನ್ಯಾಯಮೂರ್ತಿಗಳಾಗಿದ್ದಂತಹ ಸಂತೋಷ್ ಹೆಗ್ಗಡೆಯವರ ನೇತೃತ್ವದ ನ್ಯಾಯಪೀಠ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಕೊಡುವ ಯಾವುದೇ ಅಧಿಕಾರ ಇಲ್ಲವೆಂದು ಆದೇಶ ಮಾಡಿರುತ್ತಾರೆ. ಇದರ ಬಗ್ಗೆ ನ್ಯಾಯಾಲಯ ಎಲ್ಲಾ ಜನಾಂಗದ ಪರಿಶಿಷ್ಟ ಜಾತಿಗಳ ಹೋರಾಟದ ಫಲವಾಗಿ ಮತ್ತೊಂದು ಜನ ನ್ಯಾಯಾಧೀಶರ ಪೀಠವನ್ನು ರಚನೆ ಮಾಡಿ ಆ ನ್ಯಾಯಪೀಠ ಇದು ಸಂವಿಧಾನ ಪೀಠಿಕೆ ಬರುವುದರಿಂದ ಇದನ್ನು 7ಜನ ಸದಸ್ಯರು ಇರುವ ಮುಖ್ಯ ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಮಾನ ತೆಗೆದುಕೊಳ್ಳಬೇಕೆಂದು ಮುಂದಿನ ಪೀಠಕ್ಕೆ ಕಳುಹಿಸಿರುತ್ತಾರೆ ನಂತರ ಮಾನ್ಯ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ರವರ ನೇತೃತ್ವದಲ್ಲಿ 7ಜನ ನ್ಯಾಯಾಧೀಶರ ಸಂವಿಧಾನ ಪೀಠ ರಚನೆ ಮಾಡಿ ಈ ಎಲ್ಲ ತೀರ್ಪುಗಳು ರಾಜ್ಯ ಸರ್ಕಾರಗಳ ಪ್ರಸ್ತಾವನೆಗಳ ಸುದೀರ್ಘವಾಗಿ ಚರ್ಚೆ ಮಾಡಿ ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಪಡೆದು ಕೇಂದ್ರ ಸರ್ಕಾರದ ಪ್ರಮಾಣ ಪತ್ರದೊಂದಿಗೆ ನ್ಯಾಯಪೀಠಕ ಪರಿಶಿಷ್ಟ ಜಾತಿಗಳಿಗೆ ನೀಡಬಹುದಾದ ಒಳಮೀಸಲಾತಿಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಮಾಣ. ಪತ್ರ ಸಲ್ಲಿಸಿದ ನಂತರ ನ್ಯಾಯಾಲಯ ಆಗಸ್ಟ್ 1ನೇ 2024 ತನ್ನ ಆದೇಶದಲ್ಲಿ ಮಹತ್ವದ ತೀರ್ಪನ್ನು ನೀಡಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿರುತ್ತಾರೆ. ದುದರಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳಿಗೆ ಮೇಲ್ಕಂಡ ಸುಪ್ರೀಂಕೋರ್ಟ್ ಈ ಆದೇಶದಂತೆ ಒಳಮೀಸಲಾತಿಯನ್ನು ಜಾರಿ ಮಾಡಲು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಪಾಲರಿಗೆ ನಾವುಗಳು ಮನವಿ ಪತ್ರವನ್ನು ದಿನಾಂಕ 16.10.2024ನೇ ಬುಧವಾರದಂದು ಚಾಮರಾಜನಗರದ ಜಿಲ್ಲಾಡಳಿತ ಕಚೇರಿ ಮುಂಭಾಗ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ನಮ್ಮ ಮನವಿ ಪತ್ರವನ್ನು ಸಲ್ಲಿಸಲು ಜಿಲ್ಲೆಯ ತಾಲ್ಲೂಕಿನಿಂದ ಎಲ್ಲಾ ನಮ್ಮ ಸಮಾಜದ ಮುಖಂಡರು, ಯಜಮಾನರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು, ಜಗಜೀವನ್‌ರಾಮ ಸಂಘಗಳ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಎಲ್ಲರೂ
ಭಾಗವಹಿಸಿ ಈ ಬೃಹತ್ ಜಾಥಾವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.
ವರದಿ : ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ