ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡುತ್ತಿರುವುದು ಶ್ಲಾಘನೀಯವಾದುದ್ದು : ಉದ್ಯಮಿ ರಂಗಸ್ವಾಮಿ.
ಹನೂರು :ಶಾಲಾ ಮಕ್ಕಳು ತಮ್ಮ ಬಾಲ್ಯದಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದರೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಹುದ್ದೆಗೆರಲು ಸಹಕಾರಿಯಾಗುತ್ತದೆ ಎಂದು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದ ವತಿಯಿಂದ ಹಾಗೂ ದಾನಿಗಳ ಸಹಯೋಗದೋಂದಿಗೆ ಭದ್ರಯ್ಯನಹಳ್ಳಿಯಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ,ಪೆನ್ಸಿಲ್ ಗಳ ವಿತರಣೆ ಕಾರ್ಯ ಮಾಡಿ ಮತನಾಡಿದ ಉದ್ಯಮಿ ರಂಗಸ್ವಾಮಿ ಪ್ರತಿಯೊಬ್ಬ ಮನುಷ್ಯನು ತಾನು ಬೆಳೆದೆಂತೆಲ್ಲ ಇನ್ನೊಬ್ಬರಿಗೆ ಮಾದರಿಯಾಗಬೇಕು, ಗುಡ್ಡಗಾಡು ಪ್ರದೇಶದಲ್ಲಿನ ಗ್ರಾಮಗಳ ಮಕ್ಕಳಿಗೆ ಸಹಾಯ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳಿಸಿಕೊಳ್ಳಬೇಕು ,ಹೆಚ್ಚಿನ ವಿದ್ಯಾಬ್ಯಾಸ ಮಾಡಿದ ಯುವಕರು ಇದೇ ರೀತಿಯಲ್ಲಿ ತಮ್ಮ ತಮ್ಮ ಊರುಗಳಲ್ಲಿನ ಶಾಲಾ ಮಕ್ಕಳಿಗೆ ಪಾಠ ಪ್ರವಚನಕ್ಕೆ ಸಂಭಂದಿಸಿದ ಲೇಖನ ಸಾಮಾಗ್ರಿಗಳನ್ನು ನೀಡಬೇಕು ಅದನ್ನು ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದವರು ಮಾಡುತ್ತಿದ್ದು ಅವರ ಜೊತೆಯಲ್ಲಿ ನಾವು ಸೇರಿಕೊಂಡು ಮುಂದಿನ ದಿನಗಳಲ್ಲಿ ಸಹಾಯ ಕಾರ್ಯ ಮಾಡೋಣವೆಂದು ಅಭಯ ನೀಡಿದರು.
ನೋಟ್ ಬುಕ್ ವಿತರಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ರಾಮಾಪುರ ಪೋಲಿಸ್ ಠಾಣೆಯ ಪಿಎಸ್ ಐ ಗಳಾದ ಈಶ್ವರ್ ಮಾತನಾಡಿ ನಮ್ಮ ದೇಶಕ್ಕೆ ಶಾಂತಿಯುತವಾಗಿ ಸ್ವಾತಂತ್ರ್ಯ ತೆಗೆದುಕೊಳ್ಳಬೇಕಾದರೆ ಅದಕ್ಕೆ ಕಾರಣ ಮಹಾತ್ಮ ಗಾಂಧೀಜಿಯವರು ಕಾರಣ ಅಂತಹವರ ಜಯಂತಿಯನ್ನು ಅಚರಣೆಯನ್ನು ನಾವು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆ ಸರಿ ಈ ದಿನ ಕರ್ನಾಟಕ ಪತ್ರಕರ್ತರ ಸಂಘದ ಪತ್ರಕರ್ತರುಗಳು ಮಾಡುತ್ತಿರುವ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ನೀಡುತ್ತಿರುವ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಕ ಪ ಸಂಘ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಸದಾ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ದಾನಿಗಳ ಸಹಾಯದಿಂದ ಇನ್ನು ಹೆಚ್ಚಿನ ಶಾಲಾ ಮಕ್ಕಳಿಗೆ ಸಹಾಯ ಮಾಡಲಾಗುವುದು ಎಂದರು .
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಬೆಂಗಳೂರಿನ ಪಟ್ಟಣಗೆರೆ ರಾಜರಾಜೇಶ್ವರಿ ನಗರದ ಶಿವಕುಮಾರ್ ಪಿ ಎಮ್ ,ರೈತ ಸಂಘದ ಮುಖಂಡರುಗಳಾದ ಅಮ್ಜಾದ್ ಖಾನ್ ,ಚಂಗಡಿ ಕರಿಯಪ್ಪ , ವಿನೋದ್ ,ನಟರಾಜು ,ರವಿಚಂದ್ರ ,ಶ್ರೀರಂಗಶೆಟ್ರು , ಸದ್ಭಾವ ಸೇವ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ,ಶಿವಕುಮಾರ್ ,ಕೌದಳ್ಳಿ ಗೊವಿಂದು ,ಕು, ಹೊಸೂರು ಗ್ರಾಪ ಅಧ್ಯಕ್ಷರಾದ ರಾಜಮ್ಮ ,ಗ್ರಾ ಪ ಸದಸ್ಯರಾದ ಶಿವು ,ಶಾಲಾ ಮುಖ್ಯ ಶಿಕ್ಷಕರಾದ ಮುತ್ತುರಾಜ್ ,ಕ ಪ ಸಂಘದ ಕಾರ್ಯದರ್ಶಿ ಬಸವರಾಜು, ಖಜಾಂಚಿ ಚೇತನ್ ಕುಮಾರ್ ,ಸದಸ್ಯರುಗಳಾದ ಅಜೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು .
ವರದಿ : ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ