ಸಾಲಬಾಧೆ ತಾಳದೆ ಯುವ ರೈತನೋರ್ವ ಆತ್ಮಹತ್ಯೆ..!
ಇಂಡಿ: ಸಾಲಬಾಧೆ ತಾಳದೆ ಯುವ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ. ಮೃತ ರೈತನನ್ನು ತಾಲ್ಲೂಕಿನ ನಾದ (ಬಿ.ಕೆ) ಗ್ರಾಮದ ರೇವಣಸಿದ್ದ ಸಂಗಪ್ಪ ಚಿವಟೆ (೩೫) ಎಂದು ಗುರುತಿಸಲಾಗಿದೆ.
ಮೃತ ರೈತ ನಾದ ಗ್ರಾಮದ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು ೫ಲಕ್ಷ ರೂಪಾಯಿ, ಸೇರಿದಂತೆ ಬೆಳೆಗಳಿಗೆ ಗೊಬ್ಬರ, ಔಷಧಿ ಸಿಂಪರಣೆ ಮಾಡಲ ಕೈಗಡವಾಗಿ ೪ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ರೈತನಿಗೆ ಸುಮಾರು ೪ ಎಕರೆ ಜಮೀನು ಇದ್ದು, ಸರಿಯಾದ ಸಮಯಲ್ಲಿ ಮಳೆ ಬಾರದೆ ಇರುವುದರಿಂದ ಬೆಳೆ ಹಾನಿಯಾಗಿದೆ. ಸಾಲ ತೀರಿಸುವುದು ಹೇಗೆ ಎಂದು ಮನನೊಂದು, ಜೀವನದಲ್ಲಿ ಜೀಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತ ಪತ್ನಿ, ಐವರು ಹೆಣ್ಣು ಮಕ್ಕಳು, ಒಂದು ಗಂಡು ಮಗುವನ್ನು ಅಗಲಿದ್ದಾನೆ.
ಸ್ಥಳಕ್ಕೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ. ಪಾಟೀಲ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ಸರ್ಕಾರ ೨೫ ಲಕ್ಷ ರೂ, ಗಳ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ: ಮೃತ ರೇವಣಸಿದ್ದ ಸಂಗಪ್ಪ ಚಿವಟೆ ಭಾವಚಿತ್ರ.