ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಆಗ್ರಹಿಸಿ ಇಂಡಿಯಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ..! ಆ ಪೋಲಿಸ್ ಅಧಿಕಾರಿ ಯಾರು ಗೊತ್ತಾ..?
ಇಂಡಿ: ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿ, ಕೆಲ ಕಾಲ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಬಿ.ಡಿ. ಪಾಟೀಲ ಮಾತನಾಡಿ, ಪೊಲೀಸ್ ಅಧಿಕಾರಿ ಎಂ. ಚಂದ್ರಶೇಖರ ಅವರ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳಿದ್ದು, ಅವುಗಳ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶ್ರೀಶೈಲಗೌಡ ಬಿರಾದಾರ, ಸಿದ್ದು ಡಂಗಾ, ಕಲ್ಲನಗೌಡ ಬಿರಾದಾರ, ಮಹಿಬೂಬ ಬೇವನೂರ, ಸುನಂದಾ ವಾಲೀಕಾರ, ಬಸವರಾಜ ಕವಡಿ, ದುಂಡು ಬಿರಾದಾರ, ಇರ್ಪಾನ್ ಅಗರಖೇಡ, ನಿಯಾಝ ಅಗರಖೇಡ, ಪಸಲು ಮುಲ್ಲಾ, ಚಿದಾನಂದ ವಾಲೀಕಾರ, ಸಂಜೀವ ವಾಲಿಕಾರ, ಸಂತೋಷ ಲಚ್ಯಾಣ, ಕುಮಾರ ಸುರಗಿಹಳ್ಳಿ, ಭೂತಾಳಿ ಕೆಳಗಿನಮನಿ, ಕೋಬಣ್ಣ ಪೂಜಾರಿ ಇದ್ದರು.
ಇಂಡಿ: ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಎಡಿಜಿಪಿ ಎಂ. ಚಂದ್ರಶೇಖರ ವರ್ತನೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಉಪ ತಹಶೀಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.