ಸಾಂಕ್ರಾಮಿಕ ರೋಗದ ಕುರಿತು ಅರಿವು ಸ್ವಚ್ಛತಾ ಕಾರ್ಯಕ್ರಮ
ಹನೂರು:ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಯೋಜನೆ ಯಡಿಯಲ್ಲಿ ಓ ಡಿ ಪಿ ಸಂಸ್ಥೆ ವತಿಯಿಂದ ಸಾಂಕ್ರಾಮಿಕ ರೋಗದ ಕುರಿತು ಅರಿವು ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಓ ಡಿ ಪಿ ಸಂಸ್ಥೆಯ ವಲಯ ಸಂಯೋಜಕ ಲಿಲ್ಲ ಮೇರಿ ಅವರು ಮಾತನಾಡಿ ಓಡಿಪಿ ಸಂಸ್ಥೆಯು ಹಳ್ಳಿಗಳಲ್ಲಿ ಬಡ ಮಹಿಳೆಯರ ಹಾಗೂ ರೈತರ ಅಭಿವೃದ್ಧಿ ನೈರ್ಮಲ್ಯ ಆರೋಗ್ಯ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಅವರ ಸರ್ವತೋಮುಖ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದೆ.
ಮಾದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಕೆ ಹಳ್ಳ, ಕೌದಳ್ಳಿ, ಮಾಟಳ್ಳಿ, ತೋಮಾರ್ ಪಾಳ್ಯ, ಕಂಡಯ್ಯನಪಾಳ್ಯ ಹಾಗೂ ಹನೂರು ಇನ್ನು ಮುಂತಾದ ಕಡೆಗಳಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಪ್ರಸ್ತುತ ಎಲ್ಲೆಡೆ ಡೆಂಗು ಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಮುದಾಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಸ್ಥೆಯ ಸ್ವಸಹಾಯ ಸದಸ್ಯರೊಂದಿಗೆ ಸೇರಿ ಡೆಂಗು ಜ್ವರದ ಮತ್ತು ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಓಡಿಪಿ ಸಂಸ್ಥೆಯ ಸದಸ್ಯರೊಂದಿಗೆ ಚರಂಡಿಗಳ ಸ್ವಚ್ಛತೆ ಅಂಗನವಾಡಿ ದೇವಸ್ಥಾನ ಚರ್ಚಾವರ್ಣ ಕುಡಿಯುವ ನೀರಿನ ತೊಂಬೆಗಳು ರಸ್ತೆಗಳ ಬದಿಯಲ್ಲಿ ಸ್ವಚ್ಛತೆ ಮಾಡುವುದು ಸೇರಿದಂತೆ ಹಲವರು ಸ್ಥಳಗಳಲ್ಲಿ ಸ್ವಚ್ಛತೆ ಮಾಡಿ ಅವುಗಳ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾದೇಶ್ವರ ಬೆಟ್ಟದ ಪಿಡಿಓ ಕಿರಣ್, ಓ ಡಿ ಪಿ ಸಂಸ್ಥೆಯ ಸಂಯೋಜಕರಾದ ಜಾನ್, ಅಶೋಕ್, ರಮೇಶ್ ಮತ್ತು ಕಾರ್ಯಕರ್ತರಾದ ಶ್ರೀಮತಿ ಅಂತೋನಿಯಮಾಳ್, ಮುಕ್ಸಾಮೇರಿ,ಪಾಕಿಯ ಮೇರಿ, ಮತ್ತು ಮಹೇಶ್, ಪ್ರವೀಣ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ