ರಾಯಚೂರು: ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿರುವ ಹಿನ್ನಲೆ ಅವರನ್ನು ಸೇವೆಯಿಂದ ವಜಾ ಮಾಡಿ ದೇಶ ದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ದಲಿತ ಸೇನೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ರಾಯಚೂರು ಜಿಲ್ಲಾ ನ್ಯಾಯಾಧೀಶ ಎಂಬ ಸಂವಿಧಾನತ್ಮಕ ಹುದ್ದೆಯಿಂದ ಈ ಮಲ್ಲಿಕಾರ್ಜುನಗೌಡ ಎಂಬ ಸಂವಿಧಾನ ವಿರೋಧಿ ವ್ಯಕ್ತಿಯನ್ನು ಈ ಕೂಡಲೇ ವಜಾಗೊಳಿಸಬೇಕು ಆ ಘನತೆವೆತ್ತ ಸ್ಥಾನದಲ್ಲಿ ಇರಲು ಮತ್ತು ಮುಂದುವರಿಯಲು ಅವರಿಗೆ ಯೋಗ್ಯತೆಯೂ ಇಲ್ಲ, ನೈತಿಕತೆಯೂ ಇಲ್ಲ. ಸಂವಿಧಾನ ಕರ್ತ ಡಾ. ಬಾಬಾ ಸಾಹೇಬರಿಗೆ ಅವಮಾನ ಮಾಡುವುದು ಸಂವಿಧಾನಕ್ಕೆ ಮತ್ತು ಸಂವಿಧಾನದಡಿ ಕಾರ್ಯನಿರ್ವಹಿಸುವ ಸರ್ಕಾರಕ್ಕೆ ಮಾಡುವ ಅವಮಾನ ಎಂದು ದೂರಿದರು. ಕರ್ನಾಟಕ ಉಚ್ಚನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅವರ ಮೇಲೆ ಅಟ್ರಾಸಿಟಿ ಆಕ್ಟ್ ಸಮಾದಲ್ಲಿ ದ್ವೇಷಭಾವನೆ ಹರಡುವಿಕೆ ಮತ್ತು ದೇಶದ್ರೋಹದ ಕೇಸನ್ನು ದಾಖಲಿಸಿ ತಕ್ಷಣವೇ ಜೈಲಿಗಟ್ಟಬೇಕು. ಜಿಲ್ಲಾ ನ್ಯಾಯಾಧೀಶರಾದ ಮೇಲೆ ಗಳಿಸಿರುವ ಆಸ್ತಿ ವಿವರವನ್ನು ಪಡೆದು ತನಿಖೆ ನಡೆಸಿ ಆಕಮ ಸಂಪಾದನೆಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.ಇಂಥ ದೇಶದ್ರೋಹ ಎಸಗಿದ ಈ ವ್ಯಕ್ತಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ.ಜಿ ಅಂಜಿನಯ್ಯ,ವಿ.ಬಾಬುರಾವ್,ಮಾರುತಿ ಚಿಕ್ಕಸುಗೂರು,ಎಂ.ಸತೀಶ್,ಸೇರಿದಂತೆ ಇತರರು ಉಪಸ್ಥಿತರಿದ್ದರು.