ಕನ್ನಡ ನಾಮಫಲಕ ಕಡ್ಡಾಯ ಕನ್ನಡ ಬಳಸಿ ಇಲ್ಲವೆ ಕರ್ನಾಟಕ ಬಿಟ್ಟು ತೊಲಗಿ
ಇಂಡಿ : ನಗರದಲ್ಲಿ ಇಂಗ್ಲೀಷ್ ಇತರೆ ಭಾಷೆಯ ಅಂಗಡಿ ಮುಂಗಟ್ಟುಗಳು ಬೋರ್ಡ್‌ಗಳು ರಾರಾಜಿಸಿತಿದ್ದು ಅದನ್ನು ಕೊಡಲೇ ಕಡಿವಾಣ ಹಾಕಬೇಕು. ಸರ್ಕಾರದ ನಿಯಮವನ್ನು 60% ಕನ್ನಡ 40% ಬೇರೆ ಭಾಷೆ ಬಳಸಬೇಕೆಂದು ಸರ್ಕಾರ ಆದೇಶವಿದ್ದು, ಅದನ್ನು ಅಂಗಡಿ ವ್ಯಾಪರಸ್ಥರು ,ನಿಯಮಗಳನ್ನು ಗಾಳಿ ತೂರಿ ಮನಸ್ಸಿಗೆ ಬಂದಂತೆ ಬೋರ್ಡ್‌ಗಳನ್ನು ಹಾಕಿರುವುದನ್ನು ಖಂಡಿಸುತ್ತೆವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸೇರಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಮನವಿ ಸಲ್ಲಿಸಿ ಹೇಳಿದರು.
ಬುಧವಾರ ಪಟ್ಟಣದ ಪುರಸಭೆ ಆಗಿಮಿಸಿದ ಕರವೇ ನಾರಯಣಗೌಡ ಬಣದ ಕಾರ್ಯಕರ್ತರು ಆಗಮಿಸಿ ಮನವಿ ಸಲ್ಲಿಸಿದರು.
ಕಳೆದ ವರ್ಷ ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇತಿಹಾಸವನ್ನೇ ಸೃಷ್ಟಿಸಿತು. ಕನ್ನಡ ನಮಗೇಕೆ ಬೇಕು ಎಂಬ ದರ್ಪದಿಂದ ಬಲಿತು ಕೊಬ್ಬಿದ್ದ ಪರಭಾಷಿಕರ ಉದ್ಯಮಿಗಳಿಗೆ ಪಾಠ ಕಲಿಸುವ ಕೆಲಸವನ್ನು ಯಶ್ವಸಿಯಾಗಿ ಮಾಡಿದೆವು. ಅಂದು ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೇತರ ನಾಮಫಲಕಗಳ ಧೆರೆಗುವುಳಿದವು. ನಮ್ಮ ಚಳವಳಿಗೆ ರಾಜ್ಯದ ಜನತೆ ತುಂಬು ಮನಸಿನಿಂದ ಬೆಂಬಲಿಸಿತ್ತು. ಕನ್ನಡ ನಾಮಫಲಕ ಬೇಕು ಎಂದು ದಶಕಗಳಿಂದ ಹಂಬಲಿಸುತ್ತಿದ್ದ ಮನಸುಗಳಿಗೆ ಸಮಾಧಾನ ತಂದ ಬಹುದೊಡ್ಡ ಹೋರಾಟವಿದು. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದಿಕೊಂಡಿತು. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿರುವುದರಿಂದ ಅದು ಕಾನೂನಾಗಿ ಕಡ ಜಾರಿಯಾಗಿದೆ. ಇದು ಕಾನೂನಾಗಿ ರೂಪುಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಕಾರ್ಯಕರ್ತರ ತ್ಯಾಗ, ಛಲ ಬಿಡದ ಹೋರಾಟ ಕಾರಣ. ಡಿಸೆಂಬರ್ 27ರ ಐತಿಹಾಸಿಕ ಹೋರಾಟದ ನಂತರ ಹತ್ತಾರು ಪ್ರಕರಣಗಳನ್ನು ಹೂಡಿ ಜೈಲಿಗೆ ಕಳುಹಿಸಿಲಾಯಿತು. ಆದರೆ ಜೈಲು, ಕೋರ್ಟ್ ಕೇಸು ಇತ್ಯಾದಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಎಂದೂ ಅಂಜುವುದಿಲ್ಲ. ಇಷ್ಟೆಲ್ಲ ಹೋರಾಟ ನಂತರ ಈ ಕಾನೂನು ಪರಿಪೂರ್ಣವಾಗಿ ಜಾರಿಯಾಗುವಂತೆ ನೋಡಿಕೊಳ್ಳವ ಜವಾಬ್ದಾರಿಯೂ ನಮ್ಮ ಮೇಲಿದೆ. ರಾಜ್ಯದ ಕೊನೆಯ ನಾಮಫಲಕ ಕನ್ನಡೀಕರಣಗೊಳ್ಳವವರೆಗೆ ಕನ್ನಡದಲ್ಲಿ ನಾಮಫಲಕ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಕೈಬಿಡುವ ಪ್ರಶ್ನೆಯೇ ಇಲ್ಲ.
ಭಾಷಾವಾರು ಪ್ರಾಂತ್ಯಗಳು ವಿಂಗಡಣೆ ಆಗಿದ್ದೇ ಆಯಾ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ. ಈ ನೆಲದ ಕಾಯದೇಯನ್ನು ಕಾನೂನು ಕಡ್ಡಾಯವಾಗಿ ಪಾಲಿಸಬೇಕು.
ನಗರದಲ್ಲಿ ಅನ್ಯಭಾಷೆಯ ಅಂಗಡಿ ಮುಂಗಟ್ಟುಗಳಿಗೆ ಬೋರ್ಡ್‌ಗಳು ರಾರಾಜಿಸಿತ್ತಿದು ಕೊಡಲೇ ಸಂಭಂದಪಟ್ಟ ಅಧಿಕಾರಿಗಳು ಅನ್ಯಭಾಷೆಯ ಬೋರ್ಡ್‌ಗಳನ್ನು ತೆರವು ಮಾಡಬೇಕು. ಇಲ್ಲದ್ದಿರೆ ಉಗ್ರ ಹೋರಾಟ ಮಾಡಲಾಗುವುದು. ಎನ್ 15 ಒಳಗಾಗಿ ಅನ್ಯಭಾಷೆ ನಾಮಫಲಕ ತೆರವು ಮಾಡಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೇ ನಗರದಲ್ಲಿ ಬೃಹತ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷ ಬಾಳು ಮುಳಜಿ, ಮಹಿಬೂಬ ಬೇನೂರ, ರಾಜು ಕುಲಕರ್ಣಿ, ಪ್ರವೀಣ ಪೊದ್ದಾರ, ಪ್ರವೀಣ ಬಜಂತ್ರಿ, ಸಚಿನ ನಾವಿ, ಶ್ರೀಕಾಂತ್ ಬಡಿಗೇರ, ಮಹೇಶ್ ಹೂಗಾರ, ಧರ್ಮರಾಜ ಸಾಲೋಟಗಿ, ಸಂತೋಷ ಬಡಿಗೇರ, ರವಿ ಹೂಗಾರ, ಪ್ರಶಾಂತ ಸಿಂಗೆ, ಅಭಿಶೇಕ ವಾಲಿಕಾರ, ಕೇಶವ ಕಾಟಕಾರ,ಅಶೋಕ ಛಲವಾದಿ,ರಾಜು ರಾಠೋಡ, ಶಿವಾನಂದ ಮಡಿವಾಳ, ಪ್ರಶಾಂತ ಲಾಳಸಂಗಿ ಉಪಸ್ಥಿತರಿದ್ದರು.