ಸ್ವಾಮಿತ್ವ ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಶಾಸಕ ಎಂಆರ್ ಮಂಜುನಾಥ್
ಹನೂರು: ಗ್ರಾಮೀಣ ಭಾಗದಲ್ಲಿ ಜಾಗದ ಅಳತೆ ನಡೆಸಿ ಪಿಆರ್ ಕಾರ್ಡ್ ನೀಡುತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿ ಆವರಣ ಆಯೋಜಿಸಿದ್ದ ಸ್ವಾಮಿತ್ವ ಯೋಜನೆಯ ಗ್ರಾಮ ಸಭೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆಯನ್ನು ಮಾಡಿದರು. ನಂತರ ಮಾತನಾಡಿದ ಅವರು
ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಈ ಸ್ವತ್ತುಗಳ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮೀಣ ಭಾಗದ ವಸತಿ ಪ್ರದೇಶಗಳಿಗೆ ಡ್ರೋನ್ ಅಥವಾ ಯುಎವಿ ತಂತ್ರಜ್ಞಾನದ ಮೂಲಕ ಸರ್ವೇ ನಡೆಸಿ ಡ್ರೋನ್ ಮುಖಾಂತರ ನಿಮ್ಮ ಜಾಗದ ಅಳತೆಯನ್ನು ನಡೆಸಿ ಪಿಆರ್ ಕಾರ್ಡ್ ನೀಡಲಾಗುತ್ತದೆ.
ಈ ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಲಿದೆ. ಮತ್ತು ಇ ಸ್ವತ್ತು ಆಸ್ತಿಗೆ ಸಂಬಂಧಿಸಿದಂತೆ ದೋಷ ಮುಕ್ತ ದಾಖಲೆ ಸೃಷ್ಟಿಸುವುದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಸಾಲ ಇನ್ನಿತರ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ತಾಲೂಕಿನ ಉಡುತೊರೆ ಜಲಾಶಯದ ವ್ಯಾಪ್ತಿಗೆ ಬರುವ ಕಾಲುವೆಗಳ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಅಜ್ಜೀಪುರ ಬಸಪ್ಪನ ದೊಡ್ಡಿ ಗ್ರಾಮಗಳಲ್ಲಿ ಚಾಲನೆ ನೀಡಿದ ಶಾಸಕರು ಜಲಾಶಯ ಕಾಲುವೆಗಳ ಹೂಳು ತೆಗೆದು ಡಿಸ್ಟ್ರಿಬ್ಯೂಟರ್ ಗಳು ರಿಪೇರಿ ಇದ್ದಲ್ಲಿ ಅದನ್ನು ದುರಸ್ತಿ ಪಡಿಸಿ ರೈತರಿಗೆ ಜಲಾಶಯದ ನೀರು ಉಪಯೋಗ ಆಗಬೇಕು. ಇದರಿಂದ ಮುಂದಿನ ದಿನಗಳಲ್ಲಿ ಅಂತರ್ಜಲ ಹೆಚ್ಚಾಳ ಆಗುವುದರಿಂದ ರೈತರು ಸಾರ್ವಜನಿಕರಿಗೆ
ಅನುಕೂಲ ಆಗುತ್ತದೆ.
ಅಜ್ಜೀಪುರ ಸೂಳೇರಿಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಡುತೊರೆ ಜಲಾಶಯ ಸಂಬಂಧ ಚಾನಲ್ ರಸ್ತೆ ಒತ್ತುವರಿ ಆಗಿರುವ ಜಾಗಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆ ಸುಪದ್ದಿನಲ್ಲಿ ಆ ಜಾಗದಲ್ಲಿ ಸಸಿ ನೆಟ್ಟು ನೀರು ಹಾಕಿದರು. ಮುಂದಿನ ದಿನಗಳಲ್ಲಿ ಒತ್ತುವರಿ ಜಾಗ ತೆರವು ಮಾಡಿ ಅಗಲವಾದ ಚಾನಲ್ ರಸ್ತೆ ಮಾಡುವ ಕೆಲಸಕ್ಕೆ ಭೂಮಿಪೂಜೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಹಸಿಲ್ದಾರ್ ಗುರುಪ್ರಸಾದ್ ತಾ.ಪಂ. ಉಮೇಶ್ ಎಡಿಎಲ್ಆರ್ ವಿಧ್ಯಾರಾಣಿ ನಟರಾಜು ಸರ್ವೆ ಸೂಪರ್ವೈಸರ್ ಭಾನುರೇಖಾ ಪಿಡಿಓಗಳಾದ ನಂದೀಶ್ ಮಾದೇಶ ಅಧ್ಯಕ್ಷರಾದ ರುದ್ರನಾಯಕ ಮುತ್ತುರಾಜು ಉಪಾಧ್ಯಕ್ಷರ ಪ್ರಭುಸ್ವಾಮಿ ಸದಸ್ಯರಾದ ಚಂದ್ರ ಮುರಳಿ ರಾಜೇಂದ್ರ ಸೈಯದ್ ಜಬ್ಬಾರ್ ಕೃಷ್ಣಮೂರ್ತಿ ಶಿವಮೂರ್ತಿ ರಾಜೇಂದ್ರ ಮಹದೇವ ರುಕ್ಮಿಣಿ ಗೀತಾ ಪಂಚಾಯ್ತಿ ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ


















