ಇಂಡಿ ನಗರದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ
ಇಂಡಿ : ನಗರದ ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾಗಿದ್ದು ರಾಜ್ಯ ಸರಕಾರ ರೂಪಿಸಿರುವ ಕಲ್ಯಾಣ ಕಾರ್ಯಕ್ರಮ ಬಳಸಿಕೊಂಡು ಪೌರ ಕಾರ್ಮಿಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಿದ್ದಾರೂಢ ಮಠದ ಓಂಕಾರ ಆಶ್ರಮದ ಡಾ. ಸ್ವರೂಪಾನಂದ ಶ್ರೀಗಳು ಹೇಳಿದರು.
ಪಟ್ಟಣದ ಡಾ. ಬಾಬು ಜಗಜೀವನರಾಮ ಸಬಾಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿ ಒಂದು ರಸ್ತೆ, ಮೊಹಲ್ಲಾ, ವಾರ್ಡ, ಹಾಗೂ ನಗರ ಸುಂದರವಾಗಿರಬೇಕಾದರೆ ಪೌರ ಕಾರ್ಮಿಕರೇ ಕಾರಣ. ಸರಕಾರದಿಂದ ಸಿಗುವ ಸವಲತ್ತುಗಳಿಗಾಗಿ ಪ್ರಾಮಾಣ ಕ ಪ್ರಯತ್ನ ಮಾಡುವದಾಗಿ ತಿಳಿಸಿದರು.
ದೇವೆಂದ್ರ ಕುಂಬಾರ ಮಾತನಾಡಿ ಪೌರ ಕಾರ್ಮಿಕರು ನಿಜವಾದ ಸೇನಾನಿಗಳು. ಪೌರ ಕಾರ್ಮಿಕರ ಆರೋಗ್ಯ ಮತ್ತು ಅವರ ರಕ್ಷಣೆಗೆ ಪುರಸಭೆ ಗಮನ ಹರಿಸಲಾಗುವದು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮಾತನಾಡಿ ಸ್ವಚ್ಛತೆ ಕಾಪಾಡುವದು ಕೇವಲ ಪೌರ ಕಾರ್ಮಿಕರ ಜವಾಬ್ದಾರಿಯಲ್ಲ. ನಮ್ಮೆಲ್ಲರ ಜವಾಬ್ದಾರಿ. ನೈರ್ಮಲ್ಯ ಮತ್ತು ಶುಚಿತ್ವದ ಕುರಿತು ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಪೌರ ಕಾರ್ಮಿಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ, ಸದಸ್ಯರಾದ ಉಮೇಶ ದೇಗಿನಾಳ, ಸುಧೀರ ಕರಕಟ್ಟಿ, ಸೈಪನ ಪವಾರ, ಭೀಮಾಶಂಕರ ಮೂರಮನ್, ಸಿಬ್ಬಂದಿ ಪ್ರವೀಣ ಸೋನಾರ, ಸದಾಶಿವ ನಿಂಬಾಳಕರ, ನಜೀರ ಮುಲ್ಲಾ,ಸೋಮು ನಾಯಕ, ತಾಲೂಕಾ ಅಧ್ಯಕ್ಷ ಲಕ್ಷಿö್ಮÃ ಕಾಲೇಭಾಗ, ಚಂದು ಕಾಲೇಭಾಗ,ಮುರಾಳ ಮತ್ತಿತರಿದ್ದರು.
ಇದೇ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು..
ಇಂಡಿ ಪಟ್ಟಣದ ಡಾ. ಬಾಬು ಜಗಜೀವನರಾಮ ಸಬಾಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಸ್ವರೂಪಾನಂದ ಶ್ರೀಗಳುಮಾತನಾಡಿದರು.