ಶ್ರದ್ದಾ , ಭಕ್ತಿಯಿಂದ ಈದ ಮಿಲಾದ ಆಚರಣೆ
ಇಂಡಿ: ಪ್ರವಾದಿ ಮಹಮ್ಮದರ ಜನ್ಮ ದಿನದ ನಿಮಿತ್ಯ ತಾಲೂಕಿನ ತೆನೆಹಳ್ಳಿ ಗ್ರಾಮದಲ್ಲಿ ಮುಸ್ಮಿಂ ಬಾಂಧವರು ಶ್ರದ್ದಾ ಭಕ್ತಿಯಿಂದ ಈದ ಮಿಲಾದ ಆಚರಿಸಿದರು. ನಮಾಜ ಮಾಡಿದ ನಂತರ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡ ಮುಸ್ಮಿಮರು ತದ ನಂತರ ಮೆರವಣೆಗೆಯಲ್ಲಿ ಪಾಲ್ಗೊಂಡರು.
ಮೌಲಾನಾ ಮಂಜುರ ಅಲಾಮ ಖಾನ ಮಾತನಾಡಿ ಜಗತ್ತಿಗೆ ಸಮಾನತೆಯ ಸಂದೇಶವನ್ನು ಮಹಮ್ಮದ ಪೈಗಂಭರರು ಸಾರಿದ್ದಾರೆ. ಅವರ ಶಾಂತಿ, ಸಹಬಾಳ್ವೆ,ಸಂದೇಶವು ಧರ್ಮಗಳ ನಡುವೆ ಸಂವಾದ ಮತ್ತು ಸಹಕಾರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.
ಷೆಹನಶಹಾ ಜಹಾಗೀರದಾರ, ಮಹಿಬೂಬ ಖಾದ್ರಿ,ಅಜಕ ಜಹಾಗೀರದಾರ, ಅಮಜದ ಕ್ಯೂರೆಶಿ, ಶೆಹಬಾಜ ಜಮಖಂಡಿ,ಶಾಕೀಬ ಜಹಾಗೀರದಾರ, ಸಲೀಮ ಸೌದಾಗರ,ಅಬ್ದುಲ್ ರಜಾಕ ಜಹಾಗೀರದಾರ, ಶೋಯಿಬ್ ಜಹಾಗೀರದಾರ, ಅಬ್ದುಲ್ ಗಫಾರ ಪಟೇಲ, ಝಮೀರ ಜುನೇದಿ ಫಸಲ್ ಪಟೇಲ ಮತ್ತಿತರಿದ್ದರು.