ಗ್ರಾಮೀಣ ಜನರ ಆರೋಗ್ಯ, ಗ್ರಾ.ಪಂ ಜವಾಬ್ದಾರಿ : ಆಸ್ಮ ರಜಾಕ್ ಚಿಕ್ಕಗಸಿ
ಇಂಡಿ : ಹಳ್ಳಿಗರ ಆರೋಗ್ಯ ಜವಾಬ್ದಾರಿ ಗ್ರಾಮ ಪಂಚಾಯತಗೆ ಇದೆ ಎಂದು ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಗ್ರಾ.ಪಂ ಅಧ್ಯಕ್ಷೆ ಆಸ್ಮಾ ರಜಾಕ ಚಿಕ್ಕಗಸಿ ಹೇಳಿದರು
ತಾಲ್ಲೂಕಿನ ತಾಂಬಾ ಗ್ರಾ.ಪಂ ಕಾರ್ಯಾಲಯದಲ್ಲಿ ಆರೋಗ್ಯ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಜನರ ಆರೋಗ್ಯ ಅತೀವ ಮುಖ್ಯ. ಅದಕ್ಕೆ ಸ್ಥಳೀಯ ಸಂಘ ಸಂಸ್ಥೆ ಹಾಗೂ ಧಾರ್ಮಿಕ ಮುಖಂಡರು ಸಲಹೆ ಸಹಕಾರ ಮುಖ್ಯ ಎಂದು ಹೇಳಿದರು.
ಇನ್ನೂ ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ವೈ. ಎಂ ಪೂಜಾರ ಮಾತನಾಡಿ ಅವರು, ಆರೋಗ್ಯ ಮತ್ತು ಅಭಿವೃದ್ಧಿ ಪಂಚಾಯತ್ ಬೆಂಬಲದೊಂದಿಗೆ ಕ್ರಿಯಾಯೋಜನೆ ಸಿದ್ದಪಡಿಸಲು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಸಿದ್ದಪಡಿಸಿದ ಕ್ರಿಯಾ ಯೋಜನೆದಂತೆ ಆರೋಗ್ಯ ಮತ್ತು ನೀರು ನೈರ್ಮಲ್ಯ, ಕ್ಷಯ ಮುಕ್ತ ಗ್ರಾಮ, ಬಿಪಿ ಶುಗರ್ ಸ್ಕ್ರೀನಿಂಗ್ ಕ್ಯಾಂಪ್, ಅಪೌಷ್ಟಿಕತೆ ಮತ್ತು ರಕ್ತ ಹೀನತೆ ಮುಕ್ತ, ಬಾಲ್ಯ ವಿವಾಹ ಸೇರಿದಂತೆ ಅನೇಕ ವಿಚಾರಗಳು ಕುರಿತು ತರಬೇತಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಮಗೊಂಡ, ಟಿ ಏ ಪಿಂಜಾರ, ಎಸ್ ಆರ್ ಬಿರಾದಾರ, ಪ್ರವೀಣ, ಪ್ರಶಾಂತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಮುಖಂಡರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಿ ಎಚ್ ಪಿಂಜಾರ, ಸುವರ್ಣ ರಾಂಪುರೆ ಪ್ರಾರ್ಥಿಸಿದರು. ಕಾಶಿಬಾಯಿ ಸೋಮಲಿಂಗ ಸ್ವಾಗತಿಸಿದರು. ಸರೋಜಿನಿ ಕಂಬಾರ ನಿರೂಪಿಸಿದರು. ಎಸ್ ಆರ್ ಬಿರಾದಾರ ವಂದಿಸಿದರು.