ಇಲ್ಲಿನ ಜನರ ಸೇವೆ ಸಲ್ಲಿಸಲು ಮುಂದೆ ಬಂದಿರುವುದು ವೈದ್ಯಕೀಯ ವೃತ್ತಿಗೆ ಶ್ರೇಯಸ್ಸು ಇದು ವೈದ್ಯಕೀಯ ಪಾವಿತ್ರತ್ಯೆಯಾಗಿದೆ.
ಮುದ್ದೇಬಿಹಾಳ ಕರೇಕಲ್ಲ ಪಾಟೀಲ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮತ್ತು ಡಯಾಗ್ನೂಸ್ಟಿಕ್ ಸ್ಕಾನ್ ಸೆಂಟರ್ ಲೋಕಾರ್ಪಣೆ.
ಮುದ್ದೇಬಿಹಾಳ: ವೈದ್ಯರಾಗಿ ದೊಡ್ಡ ಮಹಾನಗರದಲ್ಲಿ ಆಸ್ಪತ್ರೆ ಮಾಡಿಕೊಳ್ಳಲು ಹಾತೂರೆಯುವ ಅಥವಾ ವಿದೇಶದಲ್ಲಿ ವೈದ್ಯ ವೃತ್ತಿ ಮಾಡುವ ಜನರ ಮಧ್ಯೆ ಡಾ.ಬಸನಗೌಡ ಕರೇಕಲ್ಲ (ಪಾಟೀಲ್) ಅವರು ಗ್ರಾಮೀಣ ಮಟ್ಟದ ಜನರ ಕಷ್ಟ ಅರಿತು ನಮ್ಮ ಜನರಿಗೆ ಅನುಕೂಲವಾಗಬೇಕು ಇಲ್ಲಿನ ಜನರ ಸೇವೆ ಸಲ್ಲಿಸಲು ಮುಂದೆ ಬಂದಿರುವುದು ವೈದ್ಯಕೀಯ ವೃತ್ತಿಗೆ ಶ್ರೇಯಸ್ಸು ಇದು ವೈದ್ಯಕೀಯ ಪಾವಿತ್ರತ್ಯೆಯಾಗಿದೆ ಎಂದು ಶಾಸಕ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು ಅವರು ಗುರುವಾರ ಪಟ್ಟಣದ ವಿಜಯಪುರ ರಸ್ತೆಯ ಕರೇಕಲ್ಲ ಪಾಟೀಲ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮತ್ತು ಡಯಾಗ್ನೂಸ್ಟಿಕ್ ಸ್ಕಾನ್ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರಹಿಪ್ಪರಗಿಯ ಮಾಜಿ ಶಾಸಕ ಸೋಮನಗೌಡ ಪಾಟೀಲ್ ( ಸಾಸನೂರ) ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಡಾ.ಪ್ರಭುಗೌಡ ಲಿಂಗದಳ್ಳಿ, ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ,ವಿಜಯಪುರ ಬಿದರಿ ಆಸ್ಪತ್ರೆಯ ಆರ್ ಸಿ ಬಿದರಿ ಮಾತನಾಡಿದರು.
ಆಸ್ಪತ್ರೆ ಉದ್ಘಾಟಿಸಿದ ಅಂಕಲಿ ನಿರೂಪಾದೀಶ್ವರಮಠದ ಶ್ರೀ ವೀರಭದ್ರ ಮಹಾಸ್ವಾಮಿಗಳು ಶುಭಹಾರೈಸಿದರು, ಕುಂಟೋಜಿ ಭಾವೈಕ್ಯ ಹಿರೇಮಠದ ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಡಾ. ಬಸನಗೌಡ ಕರೇಕಲ್ಲ ಬಡವರ ಆಶಾಕಿರಣವಾಗಲಿದ್ದಾರೆ ಎಂದರು.
ಮುದ್ದೇಬಿಹಾಳ ಕರೇಕಲ್ಲ ಆಸ್ಪತ್ರೆ ವೈದ್ಯ ಡಾ.ಬಸನಗೌಡ ಕರೇಕಲ್ಲ( ಪಾಟೀಲ್) ಮಾತನಾಡಿ ವೈದ್ಯಕೀಯ ಸೌಲಭ್ಯ ಸದುಪಯೋಗ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಡಾ.ಅನುಪಮ ಕರೇಕಲ್ಲ (ಪಾಟೀಲ್) ಡಾ.ಶೈಲಜಾ ಬಿದರಿ,ಬಾಲಾಜಿ ಶುಗರ್ ಚೇರಮನ್ ಹಣಮಂತಗೌಡ ಪಾಟೀಲ್,ಗುರು ತಾರನಾಳ, ಎಂ ಬಿ ನಾವದಗಿ, ಎಸ್ ಎಸ್ ಹುಲ್ಲೂರ, ವೈ ಹೆಚ್ ವಿಜಯಕರ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಶರಣು ಸಜ್ಜನ, ಡಾ.ಅನಿಲ್ ಶೇಗುಣಸಿ ಡಾ.ಸತೀಶ ತಿವಾರಿ, ಬಾಲಾಜಿ ಶುಗರ್ ನಿರ್ದೇಶಕರಾದ ಹೆಚ್ ಎಲ್ ಪಾಟೀಲ್ , ಡಾ.ಅಜಿತ್ ಕನಕರೆಡ್ಡಿ, ಅಧಿಕ ಪಾಟೀಲ್, ಶ್ರೀನಿವಾಸ ಆರಕೇರಿ, ಪ್ರಜ್ವಲ ಪಾಟೀಲ್,ರಾಹುಲ್ ಪಾಟೀಲ್,
ಶಶಿಕಲಾ ಕರೇಕಲ್ಲ, ಗಿರಿಧರ ಜಿ ಸಿ, ಜ್ಯೋತಿ ಗಿರಿಧರ, ಲಕ್ಷ್ಮಿ ಪಾಟೀಲ್, ಸೋಮನಗೌಡ ಕರೇಕಲ್ಲ, ಯಂಕಮ್ಮ ಕರೇಕಲ್ಲ, ಮಾರುತಿ ಗುರುವ, ಸುನಿಲ್ ಇಲ್ಲೂರ,ವಿಕ್ರಮ ಓಸ್ವಾಲ್, ಸೇರಿದಂತೆ ಪಟ್ಟಣದ ಗಣ್ಯರು ಸಾರ್ವಜನಿಕರು ಭಾಗವಹಿಸಿದ್ದರು ಸ್ವಾಗತ ಡಾ. ಸಂಗನಗೌಡ ಕರೇಕಲ್ಲ, ಪ್ರಾರ್ಥನೆ ಸಂಗಮೇಶ ಶಿವಣಗಿ ಬಳಗ, ಕಾರ್ಯಕ್ರಮ ನಿರೂಪಣೆ ಸಿದ್ದನಗೌಡ ಬಿಜ್ಜೂರ, ವಂದನಾರ್ಪಣೆ ರಾಹುಲ್ ಪಾಟೀಲ್ ಮಾಡಿದರು.