ಹನೂರು ಪಟ್ಟಣದ ಮನೆಯೊಂದರಲ್ಲಿ ಚಿನ್ನ ಹಾಗೂ 20 ಲಕ್ಷ ನಗದು ಕಳ್ಳತನ
ಹನೂರು:ಪಟ್ಟಣದ ಡಾಲರ್ಸ್ ಕಾಲೋನಿಯ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಖದೀಮರು ಮನೆಗೆ ನುಗ್ಗಿ ಮನೆಯಲ್ಲಿದ್ದ 308 ಗ್ರಾಂ ಚಿನ್ನಾಭರಣ ಹಾಗೂ 20 ಲಕ್ಷ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಜರುಗಿದೆ.
ತಮಿಳುನಾಡಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಕಳ್ಳರು, ಮೇಲಿರುವ ಮನೆಗಳ ಬಾಗಿಲನ್ನು ಲಾಕ್ ಮಾಡಿ, ಮನೆ ಒಳಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದಾರೆ.
ಮನೆಯ ಮಾಲೀಕ ಚಿನ್ನದೊರೆ ಕಳೆದ ಸುಮಾರು 30-40 ವರ್ಷಗಳ ಹಿಂದೆ ತಮಿಳುನಾಡಿನಿಂದ ಬಂದು ಹನೂರಿನಲ್ಲಿ ನೆಲೆಸಿದ್ದರು. ಮಗಳ ಮದುವೆ ಒಂದು ತಿಂಗಳು ಇದ್ದ ಕಾರಣ ಮದುವೆ ತಯಾರಿಯಲ್ಲಿದ್ದ ಚಿನ್ನ ದೊರೆ ಮಗಳ ಮದುವೆಗೆ ಬೇಕಾದ ಚಿನ್ನಾಭರಣ ಹಾಗೂ ನಗದನ್ನು ಮನೆಯಲ್ಲಿ ಇಟ್ಟಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.