ಸೆ-1 ರಿಂದ ಮರುಳಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ..!
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ಮರುಳಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ಸೆ. ೧ ರಿಂದ ೩ ರವರೆಗೆ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಪ್ರೀತಂ ದೇವರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸೆ. ೧ ರಂದು ರವಿವಾರ ಬೆಳಿಗ್ಗೆ ೦೮-೦೦ ಘಂಟೆಗೆ ಸಪ್ತಾಹ ಪ್ರಾರಂಭಗೊAಡು .ಅದೆ ದಿನ ರಾತ್ರಿ ಗೂಳಿ ಬಸವೇಶ್ವರ ಭಜನಾ ಮಂಡಳಿ ಹಾಗೂ ಮರುಳಸಿದ್ದೇಶ್ವರ ಭಜನಾ ಮಂಡಳಿ ಜೋಡಗುಡಿ ಇವರಿಂದ ಭಜನೆ ನಡೆದುಸೆ. ೨ರ ಸೋಮವಾರ ಬೆಳಗ್ಗೆ ೮ ಘಂಟೆಗೆ ಸಮಾರೋಪಗೊಳ್ಳುವುದು.
ಅದೇ ದಿನ ಬೆಳ್ಳಗೆ ೧೦-ಘಂ, ಗ್ರಾಮ ಪಂಚಾಯಿತಿ ಹಾಗೂ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಹಾಗೂ ತಡವಲಗಾ ಸಮುದಾಯ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ “ರಕ್ತಧಾನ” ಶಿಬಿರ ಹಮ್ಮಿಕೊಳ್ಳಲಾಗಿದೆ. ತದನಂತರ ಸಾಯಂಕಾಲ ೪- ಘಂ, ಮರುಳಸಿದ್ದೇಶ್ವರ ಪಲ್ಲಕ್ಕಿಯು ಮೂಲ ದೇವಾಲಯದಿಂದ ವಾದ್ಯ-ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೋಡಗುಡಿ ತಲುಪುವುದು.
ಸಾಯಂಕಾಲ ೦೭-೦೦ ಘಂಟೆಗೆ ಲಚ್ಯಾಣ ಶ್ರೀ ಸಿದ್ದಲಿಂಗ ಮಾಹಾರಾಜರ ಪುರಾಣ ಮಹಾ ಮಂಗಲಗೊಳ್ಳುವುದು. ರಾತ್ರಿ ೦೮-೦೦ ಗಂಟೆಗೆ ಮರುಳಸಿದ್ದೇಶ್ವರ ಪಲ್ಲಕ್ಕಿಯು ಜೋಡಗುಡಿಯಿಂದ ಬಲಭೀಮ ದೇವಸ್ಥಾನದಲ್ಲಿ ವಾಸ್ತವ್ಯ ಇರುವುದು. ರಾತ್ರಿ ೦೮-೦೦ ಘಂಟೆಗೆ ರಂಗು ರಂಗಿನ ಚಿತ್ರ ವಿಚಿತ್ರ ಮದ್ದು ಸುಡಲಾಗುವುದು. ರಾತ್ರಿ ೦೯-೦೦ ಘಂಟೆಗೆ ವಿದ್ಯಾಶ್ರೀ ಮಸಿಬಿನಾಳ, ತಾ.ಬಸವನಬಾಗೇವಾಡಿ ಹಾಗೂ ಮೌಲಾಸಾಬ ಮಕಾಂದರ ಸಾ.ಮಸಬಿನಾಳ ಸಂಗಡಿಗರಿAದ ಹರದೇಶಿ ನಾಗೇಶಿ ಗೀ-ಗೀ ಪದಗಳು ಜರಗುವವು.
ಸೆ. ೩ ಮಂಗಳವಾರ ಬೆಳಗ್ಗೆ ೦೬-೦೦ ಘಂಟೆಗೆ ಮರುಳಸಿದ್ದೇಶ್ವರ ಪಲ್ಲಕ್ಕಿಯನ್ನು ಬಲಭೀಮ ದೇವಸ್ಥಾನದಿಂದ ಮೂಲ ದೇವಾಲಯಕ್ಕೆ ಪುನರಾಗಮನಗೊಳ್ಳುವುದು. ನಂತರ ಶ್ರೀ ಚೌಡೇಶ್ವರಿ ದೇವಾಸ್ಥಾನದ ಆವರಣದಲ್ಲಿ ಭಾರ ಎತ್ತುವ ಶಕ್ತಿ ಪ್ರದರ್ಶನ ನಡೆವುದು.ಸಾಯಂಕಾಲ ೦೪-೦೦ ಘÀಂಟೆಗೆ ಪ್ರಸಿದ್ಧ ಪೈಲವಾನರಿಂದ ಜಂಗೀ ಕುಸ್ತಿಗಳು ಜರುಗುವುದು.
ಸಾಯಂಕಾಲ ೬-೦೦ ಗಂಟೆಗೆ ಮಹಾ ಪ್ರಸಾದ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಶ್ರೀ ಸತ್ಯ ಸಾಯಿ ಪ್ರಾರ್ಥನಾ ಮಂದಿರದ ಆವರಣದಲ್ಲಿ ಜರುಗುವುದು. ರಾತ್ರಿ ೧೦-೦೦ ಘಂಟೆಗೆ ಶ್ರೀ ಚಂಪಾದೇವಿ ನವ ತರುಣ ಸಂಘ ಶೇಷಗಿರಿ ಇವರಿಂದ “ಮುಡಿಯೇರದ ಮಲ್ಲಿಗೆ ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಸೆ. ೪ ರ ಬುಧವಾರರಂದು ಮರುಳಸಿದ್ದೇಶ್ವರ ಪಲ್ಲಕ್ಕಿಯ “ಪಟಾಕ್ಷಿ” ಯನ್ನು ರಾತ್ರಿ ೯-೩೦ ಘಂಟೆಗೆ, ಭಜನೆ, ಪುರವಂತರ ಸೇವೆ, ವಾದ್ಯ -ವೈಭವದೊಂದಿಗೆ ಪಟಾಕ್ಷಿ ಇಳಿಸುವುದು.ಹೀಗೆ ನಾಲ್ಕು ದಿನಗಳ ಪರಿಯಂತರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂಡಿಯಿಂದ ಹಾಗೂ ವಿಜಪೂರದಿಂದ ತಡವಲಗಾಕ್ಕೆ ಬರಲು ಬಸ್ಸಿನ ವ್ಯೆವಸ್ಥೆ ಇರುತ್ತವೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ತಿಳಿಸಿದ್ದಾರೆ.