ಇಂಡಿ ಸರ್ಕಾರಿ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿ ಒದಗಿಸಲು ಆಗ್ರಹಿಸಿ ಮನವಿ
ಇಂಡಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುವ ಹೇಮಂತ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ವಿಜಯಪುರ ಆಸ್ಪತ್ರೆಯಲ್ಲಿ ಖಾಯಂ ಹುದ್ದೆ ಇರುವುದರಿಂದ ಇಂಡಿ ಸರ್ಕಾರಿ ಆಸ್ಪತ್ರೆಗೆ ನಿಗದಿತ ಸಮಯಕ್ಕೆ ಹಾಗೂ ನಿತ್ಯ ಬರುತ್ತಿಲ್ಲ ಹೀಗಾಗಿ ಆಸ್ಪತ್ರೆಯಲ್ಲಿ ಆಡಳಿತಕ್ಕೆ ತೊಂದರೆಯಾಗಿದೆ. ಕೂಡಲೆ ಹೇಮಂತ ಅವರನ್ನು ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ನಿಯೋಜನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಅಲ್ಲಾಭಕ್ಷ ಗೋರೆ ನೇತ್ರತ್ವದಲ್ಲಿ ಪದಾಧಿಕಾರಿಗಳು ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರು ಮಾಹಿತಿ ಕೇಳಿದರೆ ಸರಿಯಾಗಿ ಸ್ಪಂಧಿಸುತ್ತಿಲ್ಲ.ಹೀಗಾಗಿ ಇಂಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಜಯಕುಮಾರ ರಾಠೋಡ,ಮಾಳಪ್ಪ ಪೂಜಾರಿ,ಪೈಗಂಬರ ಹಚ್ಚಾಳ, ಶುಕುರ ಮಡ್ಡಿಮಣೂರ,ಮುನ್ನಾ ನಾರಾಯಣಪೂರ,ಸಿದ್ದು ಚವ್ಹಾಣ,ನಾತು ರಾಠೋಡ,ಶರಣಪ್ಪ ನಾವಿ,ಚಂದ್ರಶೇಖರ ಹೊಸಮನಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
ಇಂಡಿ ಸರ್ಕಾರಿ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿ ಒದಗಿಸಲು ಆಗ್ರಹಿಸಿ ಕರವೇ ಮುಖಂಡರು ಎಸಿ ಅವರಿಗೆ ಮನವಿ ಸಲ್ಲಿಸಿದರು.