ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ ೩೯ ಜನರಿಗೆ ಸುಜ್ಞಾನ ಶಿಷ್ಯ ವೇತನ ಮಂಜುರಾತಿ ಪತ್ರ ವಿತರಣೆ
ಎಲ್ಲ ಕ್ಷೇತ್ರಗಳಲ್ಲಿ ಧರ್ಮಸ್ಥಳದ ಕೊಡುಗೆ ಅಪಾರ – ಎಸಿ ಅಬೀದ್ ಗದ್ಯಾಳ
ಇಂಡಿ : ಶಿಕ್ಷಣ, ವ್ಯಸನ ಮುಕ್ತ ಸಮಾಜ, ಸಾಂಸ್ಕೃತಿಕ, ಧಾರ್ಮಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಸಮಾಜಕ್ಕೆ ಬೇಕಾದ ಕಾರ್ಯಗಳನ್ನು ಮಾಡುತ್ತಿದ್ದು ಎಲ್ಲಾ ಯೋಜನೆಗಳಿಗೆ ಹೋಲಿಸಿದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು , ಶಿಕ್ಷಣಕ್ಕೆ ಒತ್ತು ಕೊಡುತ್ತದೆ , ಯೋಜನೆಯಿಂದ ಫಲ ಪಡೆದ ತಾವೆಲ್ಲರೂ ಮುಂದೆ ಸಮಾಜಕ್ಕೆ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಬೇಕು ಮತ್ತು ಉನ್ನತ ಅಧಿಕಾರಿ ಆಗಬೇಕೆಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಆಶಿಸಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಗುರುಭವನ ಸಬಾಭವನದಲ್ಲಿ ಇಂಡಿ ತಾಲೂಕಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾತಿಯಾಗಿರುವ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಸದಸ್ಯರಾಗಿರುವ ಮತ್ತು ವೃತ್ತಿಪರ ಓದುತ್ತಿರುವ ಐ.ಟಿ.ಐ, ನರ್ಸರಿ,ಡಿಪ್ಲೋಮಾ ಸೇರಿದಂತೆ ಇನ್ನಿತರ ವೃತ್ತಿ ಪರ ಕೋರ್ಸು ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಟಿ.ಎಸ್.ಅಲಗೂರ ಮಾತನಾಡಿ ಈ ವೃತ್ತಿಪರ ಕೋರ್ಸ್ ಮಾಡುತ್ತಿರುವ ತಾವೆಲ್ಲರೂ ಉತ್ತಮರಾಗಬೇಕು ತಂದೆ ತಾಯಿಗಳು ಮಕ್ಕಳ ಬಗ್ಗೆ ನಿಗಾ ವಹಿಸಬೇಕು ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು ಅದನ್ನು ಕಾಪಾಡಿಕೊಂಡು ಈ ಒಂದು ಸಂಸ್ಥೆಗೆ ಚಿರಋಣ ಯಾಗಿರಬೇಕು ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕರು ಸಂತೋಷ ಕುಮಾರ್ ರೈ ಮಾತನಾಡಿ ಯೋಜನೆಯು ಕಾರ್ಯಕ್ರಮಗಳ ಅಡಿಯಲ್ಲಿ , ದೇವಸ್ಥಾನ ಜೀರ್ಣೋದಯಕ್ಕೆ ಶಾಲೆಗಳ ಬೆಂಜ್ ವಿತರಣೆ , ಮಾಶಾಸನ, ಆರೋಗ್ಯ ವಿಮೆ, ಸುಜ್ಞಾನ ನಿಧಿ , ಇದರಿಂದ ಲಕ್ಷಾಂತರ ಕುಟುಂಬಗಳು ಲಾಭ ಪಡೆದುಕೊಂಡಿದೆ ಎಂದು ಮಾತನಾಡಿದರು.
ತಾಲೂಕಿನ ಯೋಜನಾಧಿಕಾರಿಗಳು ನಟರಾಜ ಐ,ಒ, ಮೇಲ್ವಿಚಾರಕಿ ಸರಸ್ವತಿ ಮಾತನಾಡಿದರು. ಹಣಕಾಸು ಪ್ರಬಂದಕರು, ತಾಲೂಕು ನೂಡಲ್ ಅಧಿಕಾರಿ ,ಸೇವಪ್ರತಿನಿಧಿಗಳು ,೩೯ ಜನ ಸುಜ್ಞಾನ ನಿಧಿ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ಇಂಡಿ ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಗುರುಭವನ ಸಬಾಭವನದಲ್ಲಿ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಎಸಿ ಗದ್ಯಾಳ ಮಾತನಾಡಿದರು.




















