ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ರಕ್ಷಾ ಬಂಧನ ಆಚರಣೆ
ಹನೂರು : ಶ್ರೀ ಕೃಷ್ಣ ಪರಮಾತ್ಮನು ಭೂಲೋಕದ ಒಡೆಯನಾಗಿದ್ದು ಇವರು ಒಬ್ಬ ವ್ಯಕ್ತಿಯಲ್ಲ ಜಗತ್ತಿನ ಶಕ್ತಿಯಾಗಿದ್ದಾರೆ ಇವರ ಜನ್ಮಾಷ್ಠಮಿಯನ್ನು ಈಶ್ವರೀಯ ವಿದ್ಯಾಲಯ ಆಚರಿಸುತ್ತ ಬಂದಿದೆ ಎಂದು ಮೈಸೂರಿನ ವೀಣಾ
ಅಕ್ಕನವರು ತಿಳಿಸಿದರು .
ಹನೂರು ಪಟ್ಟಣದಲ್ಲಿನ ಚಿಕ್ಕಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾ ಭವನದಲ್ಲಿ ಆಯೋಜಿಸಿದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀ ಕೃಷ್ಣನವರ ಶಕ್ತಿಗೆ ಹಲವಾರು ಕಾರಣಗಳಿವೆ ಶಿವ ಕಲಿಯುಗದ ಅಂತ್ಯದಲ್ಲಿ ನಾವು ನೆನೆಪಿಸುಕೊಳ್ಳುವುದು ಅವಶ್ಯವಾಗಿದೆ .ಶಿವನ ದ್ಯಾನದಿಂದ ಐದು ಸಾವಿರ ವರ್ಷಗಳ ಹಿಂದಿನ ನೆಮ್ಮದಿಯನ್ನು ಮತ್ತೆ ಪಡೆಯಲು ನಮಗೆ ಸಹಕಾರಿಯಾಗುತ್ತದೆ ಎಂದರು ಅಷ್ಠಮಿ ಎಂದರೆ ಪರಮಾತ್ಮನಿಂದ ಅಷ್ಟ ಶಕ್ತಿಯನ್ನು ಮಾಡಲಾಗಿದೆ ನಮ್ಮ ಸಂಸ್ಥೆಯು 1936 ರಲ್ಲಿ ಪ್ರಾರಂಭವಾದ ಈಶ್ವರೀಯ ವಿಶ್ವ ವಿದ್ಯಾಲಯ ಇಂದು ಉನ್ನತ ಮಟ್ಟದಲ್ಲಿದೆ , ಇದೇ ಸಮಯದಲ್ಲಿ ಬಿಂದು ಅಕ್ಕನವರು ರಾಶಿಯೋಗದ ಮಹತ್ವವನ್ನು ಎಲ್ಲಾರಿಗೂ ತಿಳಿಸಿಕೊಟ್ಟರು.
ಮಾಜಿ ಶಾಸಕಿಯವರಾದ ಪರಿಮಳ ನಾಗಪ್ಪನವರು ಮಾತನಾಡಿ ಪ್ರತಿನಿತ್ಯವೂ ಯೋಗವನ್ನು ಮಾಡುವುದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಬಹುದು ,ಈಗಾಗಲೇ ನಮ್ಮ ದೇಶದಲ್ಲಿ ಹಲವು ದ್ಯಾನ ಕೇಂದ್ರಗಳಲ್ಲಿ ಯೋಗ ಪಾಠವನ್ನು ಮಾಡುತ್ತೇವೆ ಹುಟ್ಟಿದ ಮಕ್ಕಳೆಲ್ಲರಿಗೂ ಜಿಗುಪ್ಸೆ, ಗಾಬರಿಯಿಂದ ಕೂಡಿರುತ್ತಾರೆ ಅವರಿಗೆ ಯೋಗವೆ ಮದ್ದು . ನಮ್ಮ ದೇಶದ ಉನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮರವರು ಸಹ ಈಶ್ವರಿ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು ಅವರ ಸಂಸ್ಕಾರವು ಎಲ್ಲಾರಿಗೂ ಮಾದರಿಯಾಗಿದೆ, ಪ್ರತಿಯೊಬ್ಬರು ನಿಮ್ಮಲ್ಲಿರುವ ದುರ್ಬುದ್ದೀಯನ್ನು ಬಿಡಬೇಕು ಉತ್ತಮ ಆರೋಗ್ಯವಂತರಾಗಬೇಕೆಂದು ತಿಳಿಸದರು .
ಚಾಮರಾಜನಗರ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬಿ.ಕೆ ಪ್ರಭಾಮಣಿ ಬೇಹಂಜಿರವರು ಆಶೀರ್ವಚನವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಬಿ.ಕೆ ಸಂತೋಷಣ್ಣ, ಬಿ.ಕೆ ಲತಕ್ಕ, ಬಿಕೆ ದೊರೆಸ್ವಾಮಿ ಈಶ್ವರೀಯ ,ಲಿಂಗರಾಜೇಗೌಡರು ,ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ,ಸಿ ,ವೆಂಕಟೇಶ್ , ಕೃಷ್ಣೆಗೌಡ್ರು ಸದ್ಭಾವ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶಶಿಕುಮಾರ್ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ