ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಶಾಸಕ ಎಂಆರ್ ಮಂಜುನಾಥ್
ಹನೂರು:ತಾಲೂಕಿನ ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಎಂ.ಆರ್ ಮಂಜುನಾಥ್ ಅವರು ಉದ್ಘಾಟನೆ ಮಾಡಿದರು ಬಳಿಕ ಮಾತನಾಡಿ ಹನೂರು ಭೌಗೋಳಿಕವಾಗಿ ವಿಸ್ತೀರ್ಣ ವಿದ್ದು ಇಲ್ಲಿನ ಸ್ಥಳೀಯ ಜನರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದ ಸಂದರ್ಭದಲ್ಲಿ ಈ ಹಿಂದೆ ಚಿಕಿತ್ಸೆಗಾಗಿ ಪರದಾಡುತ್ತಿರುವ ಘಟನೆಗಳು ಆಗಾಗಿ ಜರುಗುತ್ತಿತ್ತು ಇದನ್ನು ಮನಗೊಂಡು ರಾಮಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರಬಾಗಿ ಮೇಲ್ದರ್ಜೆಗೆ ಏರಿದೆ ಹೀಗಾಗಿ ಇಲ್ಲಿ ಸುಮಾರು 30ಬೆಡ್ಡಿನ ಹಾಸಿಗೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದ್ದು ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ದೊರಕುಂತವಾಗಿದೆ ಎಂದು ತಿಳಿಸಿದರು.
ಕಿಡ್ಡಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಡಯಾಲಿಸಿಸ್ ಘಟಕ ಇಲ್ಲದ ಹಿನ್ನೆಲೆ ಕೊಳ್ಳೇಗಾಲ ಮೈಸೂರು ಎಂದು ರೋಗಿಗಳು ಅಲೆದಾಡುವ ಪರಿಸ್ಥಿತಿ ಎದುರಾಗಿತ್ತು ಇದೀಗ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ನೂತನ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟನೆ ಮಾಡಿ ಆರೋಗ್ಯ ಸೇವೆಗೆ ಚಾಲನೆ ನೀಡಲಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಸಕಾಲಕ್ಕೆ ಸಮರ್ಪಕವಾಗಿ ವೈದ್ಯಕೀಯ ಸೌಲಭ್ಯ ಸಿಗಲಿದ್ದು ದುಂದು ವೆಚ್ಚಕ್ಕೂ ಕಡಿವಣ ಹಾಕಲು ಸಹಕಾರಿಯಾಗಿದೆ ರೋಗಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಂ ಆರ್ ಮಂಜುನಾಥ್ ರವರು ರಾಮಾಪುರ ಆಸ್ಪತ್ರೆಯಲ್ಲಿ ನೂತನವಾಗಿ ಒಂದು ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್,ಜಿಲ್ಲಾ ಆರೋಗ್ಯಾಧಿಕಾರಿ ಚಿದಂಬರಂ,ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್, ತಾಲ್ಲೂಕು ವೈದ್ಯಾಧಿಕಾರಿ ಪ್ರಕಾಶ್,ರಾಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿ,ಹಾಗೂ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ