• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

    ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

    ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

    ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

    ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

    ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

    ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

    ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

    ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

    ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಭಾಗ್ಯಶ್ರೀಗೆ ಪ್ರತಿಭಾ ಪುರಸ್ಕಾರ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಭಾಗ್ಯಶ್ರೀಗೆ ಪ್ರತಿಭಾ ಪುರಸ್ಕಾರ

    ಶಾಸಕರಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರ

    ಶಾಸಕರಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರ

    ನ್ಯಾನೋ ಯುರಿಯಾ ಪರಿಣಾಮಕಾರಿ -ಪವಾರ

    ನ್ಯಾನೋ ಯುರಿಯಾ ಪರಿಣಾಮಕಾರಿ -ಪವಾರ

    ಜುಲೈ 27 ರಂದು ಬಿ.ಎಲ್.ಡಿ.ಇ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಮತ್ತು ಹೈಟೆಕ್ ಆಯುರ್ವೇದ ಆಸ್ಪತ್ರೆ ಹಾಗೂ ಶೈಕ್ಷಣಿಕ ಭವನದ ಉದ್ಘಾಟನೆ ಸಮಾರಂಭ

    ಜುಲೈ 27 ರಂದು ಬಿ.ಎಲ್.ಡಿ.ಇ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಮತ್ತು ಹೈಟೆಕ್ ಆಯುರ್ವೇದ ಆಸ್ಪತ್ರೆ ಹಾಗೂ ಶೈಕ್ಷಣಿಕ ಭವನದ ಉದ್ಘಾಟನೆ ಸಮಾರಂಭ

    ಪುರಸಭೆ ಜಾಗದಲ್ಲಿನ ಅಕ್ರಮ ಕಂಪೌಂಡ ತೆರವುಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಿ: ಇರದಿದ್ದರೆ ನಿವಾಸಿಗಳಿಂದ ಧರಣಿ ಎಚ್ಚರಿಕೆ..!

    ಪುರಸಭೆ ಜಾಗದಲ್ಲಿನ ಅಕ್ರಮ ಕಂಪೌಂಡ ತೆರವುಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಿ: ಇರದಿದ್ದರೆ ನಿವಾಸಿಗಳಿಂದ ಧರಣಿ ಎಚ್ಚರಿಕೆ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಷ್ಟ್ರ

      ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ..!

      Voice of Janata

      August 17, 2024
      0
      ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ..!
      0
      SHARES
      372
      VIEWS
      Share on FacebookShare on TwitterShare on whatsappShare on telegramShare on Mail

      ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ..!

      ವಿಜಯಪುರ, ಆ. 16: ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯನಿರತ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆಯನ್ನು ಖಂಡಿಸಿ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಇಂದು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

      ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಜಾಥಾ ನಡೆಸಿದ ನೂರಾರ ವೈದ್ಯರು, ಗಾಂಧಿಚೌಕ್, ಬಸವೇಶ್ವರ ಚೌಕ್ ಮೂಲಕ ಸಂಚರಿಸಿ ಡಾ. ಬಿ. ಆರ್. ಅಂಬೇಡ್ಕರ್ ಚೌಕಿನಲ್ಲಿ ಮಾನವ ಸರಪಳಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಟಿ. ಭೂಬಾಲನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ರ್ಯಾಲಿ ಸಂಯೋಜಕ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ಬೆಂಟೂರ, ಕೊಲ್ಕತ್ತದಲ್ಲಿ ನಡೆದ ಯುವವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಸರಕಾರಗಳು ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಭವಿಷ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ, ಮಹಿಳೆಯರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.

      ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ಮೆಡಿಕಲ್ ಕಾಲೇಜ್ ನ ಡೀನ್ ಡಾ ತೇಜಶ್ವಿನಿ ವಲ್ಲಭ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದೆ. ಇಂಥ ವಾತಾವರಣದಲ್ಲಿ ಮಹಿಳಾ ವೈದ್ಯರಿಗೆ ರಾತ್ರಿ ವೇಳೆ ಕೆಲಸ ಮಾಡಲು ಆದೇಶ ಮಾಡುವುದು ನನ್ನಂತ ಹಿರಿಯ ವೈದ್ಯೆಗೆ ಸವಾಲಾಗಿದೆ. ಇಂಥ ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ಬಗ್ಗೆಯೇ ಹೆಚ್ಚಿಗೆ ಗಮನ ಹರಿಸಿದರೆ ರೋಗಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಕಡಿಮೆಯಾಗುವ ಆತಂಕವಿದೆ. ಆದ್ದರಿಂದ ಸರಕಾರಗಳು ಮಹಿಳಾ ವೈದ್ಯರಿಗೆ ಸುಸೂತ್ರವಾಗಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

      ಭಾರತಿಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ರವಿ ಬಿರಾದಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷ ಕಳೆದರೂ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಕನಸಿನ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು, ಭ್ರೂಣಹತ್ಯೆಯಿಂದ ಪ್ರಾರಂಭವಾಗಿ ಎಲ್ಲ ವಯೋಮಾನದ ಮಹಿಳೆಯರ ಮೇಲೂ ಆಗಾಗ ನಡೆಯುತ್ತಿರುತ್ತವೆ. 12ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸಿದ್ದಾರೆ. ಆದರೆ, ನಮ್ಮ ಸರಕಾರಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿ ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಠಿಣ ಕಾನೂನುಗಳನ್ನು ಜಾರಿಗೆ ತಂದು ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕು. ಅಲ್ಲದೇ, ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಕಚೇರಿ ನೀಡಿರುವ ಕರೆಯಂತೆ ಕೊಲ್ಕತ್ತ ಘಟನೆ ಖಂಡಿಸಿ ದೇಶಾದ್ಯಂತ ವೈದ್ಯರು ನಾಳೆ ಆಗಷ್ಟ 17 ರಂದು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಆಗಷ್ಟ 18 ರವಿವಾರ ಬೆಳಿಗ್ಗೆ 6 ಗಂಟೆಯವರೆಗೆ ವಿಜಯಪುರ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಹೊರರೋಗಿ ಸೇವೆಗಳು ಬಂದ್ ಇರುತ್ತವೆ. ತುರ್ತ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

      ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ಜಿಲಾನಿ ಅವಟಿ ಮಾತನಾಡಿ, ಕೊಲ್ಕತ್ತ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೇ, ಈ ಪ್ರಕರಣದ ಕುರಿತು ಕೂಲಂಕಷ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂಥ ಘಟನೆ ತಪ್ಪಿಸಲು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

      ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ದಯಾನಂದ ಬಿರಾದಾರ, ಡಾ. ಸುರೇಶ ಕಾಗಲಕರ ನಾನಾ ವೈದ್ಯಕೀಯ ವಿದ್ಯಾರ್ಥಿಗಳು ಮಾತನಾಡಿದರು.

      ಈ ಪ್ರತಿಭಟನಾ ಮೆರವಣಿಗೆಯಲ್ಲಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು, ಫಿಜಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ವೈದ್ಯರು ಪಾಲ್ಗೊಂಡಿದ್ದರು. ಅಲ್ಲದೇ, ಕೊಲ್ಕೊತಾ ಘಟನೆ ಖಂಡಿಸಿ ಮತ್ತು ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮೆರವಣಿಗೆಯುದ್ದಕ್ಕೂ ಘೋಷಣೆ ಹಾಕಿದರು.

      ಈ ಪ್ರತಿಭಟನೆಯಲ್ಲಿ ವಿಜಯಪುರ ನಗರದ ನಾನಾ ವೈದ್ಯರಾದ ಡಾ. ನಳಿನಿ ಭಾಗಲಕೋಟಕರ, ಡಾ. ಸುರೇಖಾ ಹಿಪ್ಪರಗಿ, ಡಾ. ರೇಖಾ ಹಿಪ್ಪರಗಿ, ಡಾ. ಜಯಶ್ರೀ ಸಜ್ಜನರ, ಡಾ. ರಾಜಶ್ರೀ ಅಕ್ಕಿ, ಡಾ. ಸುಮೆದಾ ಕಟ್ಟಿ, ಡಾ. ಮಾಧುರಿ ಪಾಟೀಲ, ಡಾ. ಜ್ಯೋತಿ ಕೊರಬು, ಡಾ. ಪ್ರಿಯಾಂಕಾ, ಡಾ. ಗೌರಂಬಾ ಸಜ್ಜನ, ಡಾ ಶೋಭಾ ಗುಡದಿನ್ನಿ, ಡಾ. ರಾಜಶ್ರೀ ಯಲಿವಾಳ, ಡಾ. ಟಿ. ಪಿ. ನಾಯ್ದು, ಡಾ. ವಿದ್ಯಾ ಥೊಬ್ಬಿ ಡಾ. ಪ್ರಿಯದರ್ಶಿನಿ ಪಾಟೀಲ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಉಪಪ್ರಾಚಾರ್ಯ ಡಾ. ಆನಂದ ಪಾಟೀಲ, ಡಾ ಕೃತಿಕಾ ನಾಗುರ, ಡಾ. ಮುತ್ತು ಗುಡದಿನ್ನಿ, ಡಾ. ಆರ್. ಎಂ. ಸಜ್ಜನ, ಡಾ. ಮುದನೂರ, ಡಾ. ಅನಿಕೇತನ ವಲಭ, ಡಾ. ವಿಜಯಕುಮಾರ ವಾರದ, ಡಾ. ಶೆಟ್ಟಿ, ಡಾ ಉದಯ ನುಚ್ಚಿ, ಡಾ. ಸಿ. ಎಂ. ಕುಲಕರ್ಣಿ, ಡಾ. ವಲ್ಲಭ, ಡಾ. ಗೋಸಾವಿ, ಡಾ ರಾಘವೇಂದ್ರ ಇಜೇರಿ, ಡಾ. ಶ್ರೀನಿವಾಸ ರಾಯ್ಕರ, ಡಾ. ಭೀಮನಗೌಡ ಬಿರಾದಾರ, ಡಾ. ಸಂದೀಪ ನಾಯಕ, ಡಾ. ಸಂತೋಷ ನಂದಿ, ಡಾ ಗಿರೀಶ ಕುಲ್ಲೊಳ್ಳಿ, ಡಾ. ಮಂಜುನಾಥ ಕೋಟೆಣ್ಣವರ, ಡಾ. ಮನೋವಿಜಯ ಕಳಸಗೊಂಡ, , ಡಾ ಪರೀಕ್ಷಿತ್ ಕೋಟಿ, ಮುಂತಾದವರು ಉಪಸ್ಥಿತರಿದ್ದರು.

      1 ಮತ್ತು 2 ವೈದ್ಯರ ಪ್ರತಿಭಟನೆ : ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಯುವವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ವಿಜಯಪುರದಲ್ಲಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ, ಭಾರತೀಯ ವೈದ್ಯಕೀಯ ಸಂಘ, ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಸಂಜೀವಕುಮಾರ ಬೆಂಟೂರ, ಡಾ. ರವಿ ಬಿರಾದಾರ, ಡಾ. ಜಿಲಾನಿ ಅವಟಿ ಮುಂತಾದವರು ಉಪಸ್ಥಿತರಿದ್ದರು.

      Tags: #DC vijayapur#Massive protest condemning the rape and murder of the doctor..!#Public News#Voice Of Janata#ವೈದ್ಯೆಯ ಮೇಲಿನ ಅತ್ಯಾಚಾರಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      July 29, 2025
      ಭೂ ಪರಿಹಾರ ನೀಡಲು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ..! ಇಂಡಿಯಲ್ಲಿ ಜು-31 ರಂದು ಮಹತ್ವದ ಸಭೆ

      ಭೂ ಪರಿಹಾರ ನೀಡಲು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ..! ಇಂಡಿಯಲ್ಲಿ ಜು-31 ರಂದು ಮಹತ್ವದ ಸಭೆ

      July 29, 2025
      ಜುಲೈ 30 ರಂದು ಗೋನಾಳ ಪಿ ಎನ್ ಗ್ರಾಮದಲ್ಲಿ ಶ್ರೀ ಪವಾಡ ಬಸವೇಶ್ವರ ಆಶ್ರಯದ ಜಾತ್ರೆ

      ಜುಲೈ 30 ರಂದು ಗೋನಾಳ ಪಿ ಎನ್ ಗ್ರಾಮದಲ್ಲಿ ಶ್ರೀ ಪವಾಡ ಬಸವೇಶ್ವರ ಆಶ್ರಯದ ಜಾತ್ರೆ

      July 29, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.