ಪರಿಹಾರ ಹಣವನ್ನು ವ್ಯರ್ಥ ಮಾಡದೇ ಭವಿಷ್ಯಕ್ಕಾಗಿ ಸದುಪಯೋಗ ಪಡಿಸಿಕೊಳ್ಳಿ : ಎಮ್ ಬಿ ಪಿ
ವಿಜಯಪುರ, ಆ. 14: ಅಭಿವೃದ್ಧಿ ಯೋಜನೆಗಳ ಸಂತ್ರಸ್ತರು ಸರಕಾರ ನೀಡುವ ಪರಿಹಾರ ಹಣವನ್ನು ವ್ಯರ್ಥ ಮಾಡದೇ ಭವಿಷ್ಯಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ.
ಇಂದು ಬುಧವಾರ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಕೆಬಿಜೆಎನ್ಎಲ್ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕಟ್ಟಡ/ ಭೂಮಿಯನ್ನು ಕಳೆದುಕೊಂಡಂಥ ಚಿಕ್ಕಗಲಗಲಿ ಮತ್ತು ಶಿರಬೂರ ರೈತರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಯೋಜನೆಗಳಿಗಾಗಿ ಆಸ್ತಿಪಾಸ್ತಿ ಕಳೆದುಕೊಳ್ಳುವ ಜನರು ತಮ್ಮ ಪೂರ್ವಜರಿಂದ ಬಂದಿರುವ ಮನೆ, ಜಮೀನು, ಗ್ರಾಮಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಈ ಗ್ರಾಮಗಳ ಜನ ರಾಜ್ಯದ ಅಭಿವೃದ್ಧಿಗಾಗಿ ಮಾಡಿರುವ ಮಹಾನ್ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸುವೆ. ಸಂತ್ರಸ್ತರ ಸ್ಪಂದಿಸುವುದು ಸರಕಾರಗಳ ಕರ್ತವ್ಯವಾಗಿದೆ. ಈಗ ಪರಿಹಾರ ಪಡೆದಿರುವ ರೈತರು ಹಣವನ್ನು ವ್ಯರ್ಥ ಮಾಡಬಾರದು. ನೀಡಲಾಗಿರುವ ನಿವೇಶನಗಳನ್ನು ಮಾರಾಟ ಮಾಡಬಾರದು. ಮುಂದಿನ ಪೀಳಿಗೆಗಾಗಿ ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಈಗ ಭೂಮಿಗೆ ಉತ್ತಮ ಬೆಲೆಯಿದೆ ಎಂದು ಅವರು ಹೇಳಿದರು.
ಪುನರ್ವಸತಿ ಕೇಂದ್ರಗಳಲ್ಲಿ ಜಮೀನುಗಳ ವಿಚಾರದಲ್ಲಿ ಗದ್ದಲ ಮಾಡಿದವರ ವಿರುದ್ಶ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಕೇಂದ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿದ್ದರೆ ಮಾಡಿಸಿ ಕೊಡುತ್ತೇನೆ. ಆದರೆ, ಹಿರಿಯರ ಆಸ್ತಿ, ಭೂಮಿಯನ್ನು ಮಾರಾಟ ಮಾಡದೆ ಉಳಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.
*ಮೂರು ತಿಂಗಳಲ್ಲಿ ಉಳಿದವರಿಗೆ ಪರಿಹಾರ*
ಈಗ ಚಿಕ್ಕಗಲಗಲಿಯ 242 ಫಲಾನುಭವಿಗಳಿಗೆ ರೂ. 18.10 ಕೋ. ಮತ್ತು ಶಿರಬೂರ ಗ್ರಾಮದ 173 ಫಲಾನುಭವಿಗಳಿಗೆ 11.79 ಕೋ. ಸೇರಿದಂತೆ ಒಟ್ಟು 415 ಫಲಾನುಭವಿಗಳಿಗೆ ರೂ. 29.90 ಕೋ. ಪರಿಹಾರ ವಿತರಿಸಲಾಗುತ್ತಿದೆ. ಇನ್ನುಳಿದ ಫಲಾನುಭವಿಗಳಿಗೆ ಮೂರು ತಿಂಗಳಲ್ಲಿ ಪರಿಹಾರದ ಧನ ವಿತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
*ಸಕ್ಕರೆ ಕಾರ್ಖಾನೆ ಸಂಕಷ್ಟದಿಂದ ಪಾರು ಮಾಡಲು ಶತಪ್ರಯತ್ನ*
ಈ ಭಾಗದ ಅಸ್ಮಿತೆಯಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಸರಕಾರಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಯುಕೆಪಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಮಹಾ ವ್ಯವಸ್ಥಾಪಕ ಗಿತ್ತೆ ಮಾಧವ ವಿಠ್ಠಲರಾವ ಮಾತನಾಡಿ, ಸಂತ್ರಸ್ತರು ತಮ್ಮ ಸಮಸ್ಯೆಗಳ ಕುರಿತು ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸುತ್ತೇನೆ. ಯಾವುದೇ ಹಿಂಜರಿಕೆ ಇಲ್ಲದೇ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಇದೇ ವೇಳೆ ಸಚಿವರು ಚಿಕ್ಕಗಲಗಲಿ ಮತ್ತು ಶಿರಬೂರ ಗ್ರಾಮಗಳ ತಲಾ 11 ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಚಿಕ್ಕಗಲಗಲಿ ಶ್ರದ್ಧಾನಂದ ಆಶ್ರಮದ ಜನಾರ್ಧನ ಸ್ವಾಮೀಜಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸೂಪರಿಂಟೆಂಡೆಂಟ್ ಎಂಜಿನಿಯರ್ ಹಣಮಂತ ದಾಸರ, ಪ್ರಧಾನ ಲೆಕ್ಕಾಧಿಕಾರಿ ಶಾಂತಾ ಕಡಿ, ಹೆಚ್ಚುವರಿ ವಿಶೇಷ ಭೂಸ್ವಾಧಿನಾಧಿಕಾರಿ ಎಂ. ಬಿ. ನಾಗಠಾಣ, ವಿಶೇಷ ಜಿಲ್ಲಾಧಿಕಾರಿ ರಮೇಶ ಕೊಲ್ಹಾರ, ಗ್ರಾ. ಪಂ. ಅಧ್ಯಕ್ಷೆ ಅನೀಲ ಧರೆಪ್ಪ ಕನಮಡಿ, ತಹಸೀಲ್ದಾರ ಸಂತೋಷ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.
1. ಸಚಿವ ಎಂಬಿಪಿ ಚೆಕ್ ವಿತರಣೆ ಉದ್ಘಾಟನೆ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ನಡೆದ ಕೆಬಿಜೆಎನ್ಎಲ್ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕಟ್ಟಡ/ ಭೂಮಿಯನ್ನು ಕಳೆದುಕೊಂಡಂಥ ಚಿಕ್ಕಗಲಗಲಿ ಮತ್ತು ಶಿರಬೂರ ರೈತರಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಿಕ್ಕಗಲಗಲಿ ಶ್ರದ್ಧಾನಂದ ಆಶ್ರಮದ ಜನಾರ್ಧನ ಸ್ವಾಮೀಜಿ, ಯುಕೆಪಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಮಹಾ ವ್ಯವಸ್ಥಾಪಕ ಗಿತ್ತೆ ಮಾಧವ ವಿಠ್ಠಲರಾವ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸೂಪರಿಂಟೆಂಡೆಂಟ್ ಎಂಜಿನಿಯರ್ ಹಣಮಂತ ದಾಸರ, ಪ್ರಧಾನ ಲೆಕ್ಕಾಧಿಕಾರಿ ಶಾಂತಾ ಕಡಿ, ಹೆಚ್ಚುವರಿ ವಿಶೇಷ ಭೂಸ್ವಾಧಿನಾಧಿಕಾರಿ ಎಂ. ಬಿ. ನಾಗಠಾಣ, ವಿಶೇಷ ಜಿಲ್ಲಾಧಿಕಾರಿ ರಮೇಶ ಕೊಲ್ಹಾರ, ಗ್ರಾ. ಪಂ. ಅಧ್ಯಕ್ಷೆ ಅನೀಲ ಧರೆಪ್ಪ ಕನಮಡಿ, ತಹಸೀಲ್ದಾರ ಸಂತೋಷ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.
2, 3 ಮತ್ತು 4 ಸಚಿವ ಎಂಬಿಪಿ ಚೆಕ್ ವಿತರಣೆ ಉದ್ಘಾಟನೆ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ನಡೆದ ಕೆಬಿಜೆಎನ್ಎಲ್ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕಟ್ಟಡ/ ಭೂಮಿಯನ್ನು ಕಳೆದುಕೊಂಡಂಥ ಚಿಕ್ಕಗಲಗಲಿ ಮತ್ತು ಶಿರಬೂರ ರೈತರಿಗೆ ಸಚಿವ ಎಂ. ಬಿ. ಪಾಟೀಲ ಪರಿಹಾರ ಧನ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಚಿಕ್ಕಗಲಗಲಿ ಶ್ರದ್ಧಾನಂದ ಆಶ್ರಮದ ಜನಾರ್ಧನ ಸ್ವಾಮೀಜಿ, ಯುಕೆಪಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಮಹಾ ವ್ಯವಸ್ಥಾಪಕ ಗಿತ್ತೆ ಮಾಧವ ವಿಠ್ಠಲರಾವ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸೂಪರಿಂಟೆಂಡೆಂಟ್ ಎಂಜಿನಿಯರ್ ಹಣಮಂತ ದಾಸರ, ಪ್ರಧಾನ ಲೆಕ್ಕಾಧಿಕಾರಿ ಶಾಂತಾ ಕಡಿ, ಹೆಚ್ಚುವರಿ ವಿಶೇಷ ಭೂಸ್ವಾಧಿನಾಧಿಕಾರಿ ಎಂ. ಬಿ. ನಾಗಠಾಣ, ವಿಶೇಷ ಜಿಲ್ಲಾಧಿಕಾರಿ ರಮೇಶ ಕೊಲ್ಹಾರ, ಗ್ರಾ. ಪಂ. ಅಧ್ಯಕ್ಷೆ ಅನೀಲ ಧರೆಪ್ಪ ಕನಮಡಿ, ತಹಸೀಲ್ದಾರ ಸಂತೋಷ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.