ಜಿಪಿಟಿ ತಾಲೂಕ ಸಂಘದ ವಾರ್ಷಿಕ ಸಭೆ
ಇಂಡಿ: ಆಧುನಿಕ ಯುಗದಲ್ಲಿ ಎಲ್ಲಾ ಮಕ್ಕಳು ಪ್ರತಿಭಾವಂತರಿದ್ದಾರೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಶಿಕ್ಷಕರಾದ ನಾವೆಲ್ಲರೂ ಕೈಜೋಡಿಸಬೇಕು ಎಂದು ಜಿಪಿಟಿ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷ ಶಂಕರ
ಕೋಳೆಕರ ಹೇಳಿದರು.
ಅವರು ಪಟ್ಟಣದ ಸರಕಾರಿ ನೌಕರರ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾರ್ಷಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ನೆರವಾಗುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಜಿಪಿಟಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಕಾರಿ ವಾರ್ಷಿಕ ವರದಿ ವಾಚಿಸುತ್ತಾ, ಸಂಘದ ಮುಂದಿನ ಕಾರ್ಯ ಚಟುವಟಿಕೆಗಳ ಸಮಗ್ರ ಚಿತ್ರಣ ನೀಡಿದರು.
ತಾಲೂಕ ಖಜಾಂಚಿ ಶಶಿಕುಮಾರ ವಡ್ಡರ ವಾರ್ಷಿಕ ಲೆಕ್ಕ ಪತ್ರ ಮಂಡಿಸುತ್ತಾ, ಸಂಘದ ಬೆಳವಣಿಗೆಯ ಕುರಿತು ತಿಳಿಸಿದರು.
ತಾಲೂಕ ಪ್ರಧಾನ ಕಾರ್ಯದರ್ಶಿ ಎಚ್ ಆರ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಸಂಘದ ಬೆಳವಣಿಗೆಯ ಕುರಿತು ಕಾರ್ಯಸೂಚಿಯನ್ನು ಹಾಕಲಾಯಿತು. ಸಭೆಯಲ್ಲಿ ಎಸ್ ಬಿ ಅಂಗಡಿ, ಸಂತೋಷ ಬಂಡೆ, ಉಮೇಶ ಭಜಂತ್ರಿ, ಪ್ರಭು ಕವಟಗಿ, ಎಸ್ ಆರ್ ಡಾಬೆ, ಪ್ರಭು ನಾದ, ಸಿದ್ದು ಹೊಸಪೇಟಿ, ಶಿವಕುಮಾರ ನಾಟೀಕಾರ, ಹನಮಂತ ಇಂಗಳಗಿ,ರೇಣುಕಾ ರೇಬಿನಾಳ,ಸಂಗಮೇಶ ಬಿ ಸಿ, ಪ್ರಶಾಂತ ಹದರಿ, ಶೇಖರ ಬೀರನಳ್ಳಿ, ಎನ್ ಸಿ ಪುಠಾಣಿ, ನಾಗೇಂದ್ರ ಚಿಂಚೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.