ಇಂಡಿಯ ಖ್ಯಾತ ಪತ್ರಕರ್ತ ಹಿರೇಪಠ ಇನ್ನಿಲ..!
ಇಂಡಿ : ನಗರದ ಹೆಸರಾಂತ ಹಿರಿಯ ಪತ್ರಕರ್ತ ಶಿವಯ್ಯ ಹಿರೇಪಠ (60) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು 4 ದಶಕಗಳಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇಂಡಿ ತಾಲ್ಲೂಕಿನ ವರದಿಗಾರರಾಗಿ ನೇರ ಮತ್ತು ದಿಟ್ಟ ಬರವಣಿಗೆ ಹಾಗೂ ನುಡಿಯ ಮೂಲಕ ಹೆಸರಾಗಿದ್ದ ಅವರು ನಿನ್ನೆ ವಿಜಯಪುರದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಅಂತೀಮ ದರ್ಶನವನ್ನು ಸ್ವ ಗ್ರಾಮ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅವರಿಗೆ ಇಬ್ಬರು ಪುತ್ರಿಯರು ಮತ್ತು ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.