ನಾವಿಕನಿಲ್ಲದ ಪುರಸಭೆಗೆ ಹಲವಾರು ಸವಾಲುಗಳು..!
೨ನೇ ಅವಧಿಗೆ ಘೋಷಣೆಯಾಗದ ಮೀಸಲು |
ಸದ್ಯಕ್ಕೆ ನೂತನ ಆಡಳಿತ ಮಂಡಳಿ ರಚನೆ ಅನುಮಾನ..!
ಇಂಡಿ : ನಿರಾಸೆಯಲ್ಲಿ ಪುರಸಭೆ ಸದಸ್ಯರಿದ್ದರೆ, ಆಕ್ರೋಶದಲ್ಲಿ ನಗರ ನಿವಾಸಿಗಳು ಇದ್ದಾರೆ.ಹೌದು ಪುರಸಭೆ ಆಡಳಿತ ಮಂಡಳಿ ರಚನೆ ಇಲ್ಲದ ಕಾರಣಕ್ಕೆ ಪುರಸಭೆ ಸದಸ್ಯರು ವಾರ್ಡಗಳಲ್ಲಿ ಮತ್ತು ಸಾರ್ವಜನಿಕರ ಕೆಲಸಗಳನ್ನು ಮಾಡಲು ಅನಾನುಕೂಲ ಉಂಟಾಗಿದೆ ಎಂಬ ಬೇಸರದಲ್ಲಿದ್ದರೇ ಇನ್ನೊಂದು ಕಡೆ ಭರವಸೆಯಿಟ್ಟು ಸದಸ್ಯರನ್ನ ಆಯ್ಕೆ ಮಾಡಿದ್ದೆವೆ. ಆದರೆ ವಾರ್ಡಗಳಲ್ಲಿ ಸದಸ್ಯರು ಕೆಲಸ ಮಾಡುತ್ತಿಲ್ಲ ಎಂಬ ವಿಚಾರದಲ್ಲಿ ಆಕ್ರೋಶದಲ್ಲಿ ನಗರ ನಿವಾಸಿಗಳು ಇದ್ದಾರೆ. ಎಲ್ಲಿ..? ಯಾವ ಪುರಸಭೆ ಗೊತ್ತಾ..?
ಭೀಮಾತೀರದ ಖ್ಯಾತಿಯ, ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತೀರುವ ಇಂಡಿ ಪುರಸಭೆಯ ಕಥೆ ಅಲ್ಲಾ ಇದು, ವ್ಯಥ್ಯೆ..! ಇಂಡಿ ಪುರಸಭೆ ಆಡಳಿತ ಮಂಡಳಿಯ ಮೊದಲ ಅವಧಿ ಮುಕ್ತಾಯವಾಗಿದ್ದು, ಮುಂದಿನ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಎರಡನೇ ಅವಧಿಗೆ ಮೀಸಲು ನಿಗದಿಯಾಗದ ಕಾರಣ ಸದ್ಯಕ್ಕೆ ನೂತನ ಆಡಳಿತ ಮಂಡಳಿ ರಚನೆಯಾಗುವುದು ಅನುಮಾನ ಎಂಬಂತಾಗಿದೆ.
ಪುರಸಭೆ ಆಡಳಿತ ಮಂಡಳಿಯ ಮೊದಲ ಅವಧಿ ಏ.೨೮ ಕೊನೆಗೊಂಡಿದೆ. ಆ ಮೂಲಕ ಶೈಲಜಾ ಪೂಜಾರಿ, ಬನ್ನೆಮ್ಮ ಯಲ್ಲಪ್ಪ ಹದರಿ ಅಧ್ಯಕ್ಷತೆಯ ಆಡಳಿತ ಮುಕ್ತಾಯ ವಾಗಿದ್ದು, ಮುಂದಿನ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ರಾಜ್ಯ ಸರಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲು ನಿಗದಿಯಾಗದ ಕಾನೂನಿನ ತೊಡಕು ಎದುರಾಗಿದೆ.
ರಾಜ್ಯದ ನಾನಾ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲು ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಸರಕಾರದಿಂದ ಈಗಾಗಲೇ ಅಫಿಡವಿಟ್ ಕೂಡ ಸಲ್ಲಿಸಲಾಗಿದೆ. ಮೀಸಲು ಪ್ರಕಟಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಬೀಳಬೇಕಾಗಿದ್ದು, ಇದಾದ ಬಳಿಕವಷ್ಟೇ ಸರಕಾರ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸ ಬೇಕಿದೆ. ಹೀಗಾಗಿ ಸದ್ಯಕ್ಕೆ ಇಂಡಿ ಪುರಸಭೆ ಆಡಳಿತ ಅಧಿಕಾರಿಗಳ ಕೈಯಲ್ಲಿಯೇ ಮುಂದುವರಿಯಲಿದೆ.
ಸಂಘರ್ಷದಲ್ಲೇ ಅಂತ್ಯಗೊಂಡ ಮೊದಲ ಅವಧಿ:
೨೦೧೯ ರಲ್ಲೇ ಪುರಸಭೆ ಚುನಾವಣೆ ಮುಕ್ತಾಯವಾಗಿ ಬಿಜೆಪಿ ೧೧ ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತಾದರೂ ಆಡಳಿತ ಮಂಡಳಿ ರಚನೆಯಾಗಿದ್ದು ೧ ವರ್ಷ ೬ ತಿಂಗಳು ಕಳೆದ ನಂತರ ತಡವಾಗಿ ನೂತನ ಆಡಳಿತ ಮಂಡಳಿ ಆರಂಭದಿAದಲೂ ಅಧ್ಯಕ್ಷ – ಉಪಾಧ್ಯಕ್ಷರ ನಡುವೆ ಸಾಮರಸ್ಯದ ಕೊರತೆ ಆರೋಪ ಎದುರಿಸಿತ್ತು. ಮುಂದುವರಿದು ಸದಸ್ಯರಲ್ಲಿಯೇ ಬಣಗಳ ನಡುವೆ ತಿಕ್ಕಾಟದಿಂದ ನಗರದ ಅಭಿವೃದ್ಧಿಗೆ ಹಿನ್ನೆಡೆ ಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ನಡುವೆ ಪುರಸಭೆಯಲ್ಲಿ ಸದಸ್ಯರಿಗೆ ಸ್ಪಂದಿಸುವುದಿಲ್ಲವೆAಬ ದೊಡ್ಡ ಆರೋಪ ಕೇಳಿ ಬರುತ್ತಿತ್ತು.
ಪುರಸಭೆಯಲ್ಲಿ ನಡೆದ ಕೊನೆಯ ಕೆಲವು ಸಾಮಾನ್ಯ ಸಭೆಗಳು ಈ ವಿಚಾರಕ್ಕೇ ಸೀಮಿತವಾಗಿತ್ತಲ್ಲದೇ ಸಾಮಾನ್ಯ ಸಭೆಯಲ್ಲಿ ಮುಖ್ಯ ಅಧಿಕಾರಿ ವರ್ಗಾವಣೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಪುರಸಭೆ ಬಾಗಿಲಿಗೆ ಬೀಗ ಹಾಕಿದ್ದು, ನೀರಿನ ಶುದ್ದೀಕರಣ ಪೌಡರ್, ನೀರಿದ ದರ ಹಾಗೂ ಮೇಗಾ ಮಾರ್ಕೆಟ್ ಕುರಿತು ಚೆರ್ಚಿಸಲಾಗಿತ್ತು. ಹೀಗೆ ಪುರಸಭೆಯ ಮೊದಲ ಎರಡೂವರೆ ವರ್ಷಗಳ ಅವಧಿ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಿದ್ದನ್ನು ಬಿಟ್ಟರೆ ಹೇಳಿಕೊಳ್ಳು ವಂತಹ ಯಾವುದೇ ಅಭಿವೃದ್ಧಿ ಕಾರ್ಯ ನಡೆಯಲಿಲ್ಲ ಎನ್ನುವುದು ಸ್ಥಳೀಯ ನಗರ ನಿವಾಸಿಗಳ ಅಸಮಾಧಾನವಾಗಿದೆ.
ಕಾನೂನು ಪ್ರಕ್ರಿಯೆಗಳು ಮುಗಿದು ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಬಳಿಕ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ನಿಗದಿಯಾಗಬೇಕಿದ್ದು, ಬಳಿಕವೇ ನೂತನ ಆಡಳಿತ ಮಂಡಳಿ ರಚನೆಯಾಗಲಿದೆ. ಅಲ್ಲಿಯವರೆಗೆ ಪುರಸಭೆ ಆಡಳಿತ ಜವಾಬ್ದಾರಿ ಆಡಳಿತ ಅಧಿಕಾರಿ ವರ್ಗದ ಮೇಲಿರಲಿದೆ.
ನಾವಿಕನಿಲ್ಲದ ಇಂಡಿ ಪುರಸಭೆಗೆ ಹಲವು ಸವಾಲುಗಳು.
- ಡೆಂಗ್ಯೂ ನಿಯಂತ್ರಣಕ್ಕಾಗಿ ತ್ವರಿತ್ವವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವಿಕೆ.
- ಮೊಹರಮ್ ಹಬ್ಬದ ನಿಮಿತ್ಯ ಅಂತರಾಜ್ಯದ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು.
- ಮೊಹರಮ್ ಹಬ್ಬ ಮುಕ್ತಾಯದ ನಂತರ ಸೂಕ್ತವಾಗಿ ತ್ಯಾಜ್ಯ ನಿರ್ವಹಣೆ ಕುರಿತು.
- ಮೆಗಾ ಮಾರ್ಕೆಟ್ ಶೀಘ್ರ ಪ್ರಾರಂಭ
- ಬಸವೇಶ್ವರ ವರ್ತುಳದ ಸಿ ಸಿ ಕ್ಯಾಮರಾ ಮತ್ತು ಸಿಗ್ನಲ್ ದೀಪ ದುರಸ್ತಿಯಿಂದ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ,
- ದ್ವೀಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.
- ತಾಲ್ಲೂಕು ಸರಕಾರಿ ಆಸ್ಪತ್ರೆ ಆವರಣ ಮತ್ತು ಬೀದಿ ಸಂಪೂರ್ಣ ಕತ್ತಲೆಯಿಂದ ವಿಮುಕ್ತಿಗೊಳಿಸುವುದು.
- ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಣ ಸುವ ಬಿಡಾಡಿ ಜಾನುವಾರುಗಳ ನಿಯಂತ್ರಣ
- ಮುಖ್ಯ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವಕಾಶ ಒದಗಿಸುವುದು.
- ಪಟ್ಟಣದ ಹಳ್ಳದಲ್ಲಿ ಹೂಳು , ಮುಳ್ಳು ಕಂಠಿ ತೆಗೆದು ಹೊಸ ಕಾಯಕಲ್ಪ ನೀಡುವುದು.
- ರೇವಪ್ಪ ಮಡ್ಡಿಗೆ ಮೂಲ ಸೌಕರ್ಯಗಳಿಗೆ ಒದಗಿಸುವುದು.
- ಮಕ್ಕಳಿಗೆ ಆಟಕ್ಕೆ, ವಯೋವೃದ್ದರ ವಿಶ್ರಾಂತಿಗೆ ಮೀಸಲಟ್ಟಿರುವ ಗಾರ್ಡನ್ ತೋಟಗಳನ್ನು ಒದಗಿಸಿ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅವಕಾಶ ನೀಡುವುದು.
- ಸಾರ್ವಜನಿಕ ರುದ್ರಭೂಮಿ ದುರಸ್ತಿ
- ಐತಿಹಾಸಿಕ ಗಾಂಧಿ ಚೌಕ ಮೇಲ್ದರ್ಜೆಗೇರಿಸುವದು.
- ಬಜಾರ ಸರಕಾರಿ ಶಾಲೆಯ ಹತ್ತಿರವಿರುವ ಕಸ ವಿಲೇವಾರಿ
- ಬೀರಪ್ಪ ನಗರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ಇಸ್ಪೆಟ್ ಅಡ್ಡಾ ಹಾಗೂ ಕುಡಕರ ತಾಣಕ್ಕೆ ಮುಕ್ತಿ.
- ಸರಕಾರಿ ಪ್ರೌಢಶಾಲೆಗೆ ತೆರಳುವ ರಸ್ತೆ ದುರಸ್ತಿಗೊಳಿಸುವುದು.
- ವಾರ್ಡ ೬ ರಲ್ಲಿ ಡ್ರಾನೇಜ್- ಚರಂಡಿ ದುರಸ್ತಿ
- ಹಳೆಯ ಸಾತಪುರ ರಸ್ತೆ ದುರಸ್ತಿ ಹಾಗೂ ವಿದ್ಯುತ್ ದೀಪ ಅಳವಡಿಕೆ
- ಮಿನಿ ವಿಧಾನ ಸೌಧದ ಮುಂಭಾಗದಲ್ಲಿರುವ ಮುಖ್ಯ ರಸ್ತೆ ಕತ್ತಲೆಗೆ ಮುಕ್ತಿ ನೀಡುವುದು.
- ನೆನೆಗುದಿಗೆ ಬಿದ್ದಿರುವ ಮಹಾವೀರ ವೃತದ ರಸ್ತೆಗೆ ಚಾಲನೆ
- ಮಹಾವೀರ ವೃತದಿಂದ ಇಂಡಿ ಹಳ್ಳದವರಗೆ ಬೀದಿ ದೀಪ ದುರಸ್ತಿ
ಪುರಸಭೆ ಸದಸ್ಯರ ಬಲಾಬಲ
ಒಟ್ಟು ಸ್ಥಾನಗಳು- ೨೩
ಬಿಜೆಪಿ – ೧೧
ಕಾಂಗ್ರೆಸ್ – ೮
ಜೆಡಿಎಸ್ -೨
ಪಕ್ಷೇತರ -೨
ಪಟ್ಟಣದಲ್ಲಿ ಪುರಸಭೆಯಿಂದ ಆಗಬೇಕಿದ್ದ ಅಭಿವೃದ್ಧಿಗಳ ಕಾಮಗಾರಿಗಳು ಆಗುತ್ತಿಲ್ಲ ಎಂಬ ನೋವಿದೆ. ಅದಲ್ಲದೇ ಮತದಾರರಿಗೆ ವಾರ್ಡಲ್ಲಿ ವಿವಿಧ ರೀತಿಯ ಕೆಲಸ ಮಾಡುವ ಭರವಸೆ ನೀಡಿದ್ದೇವೆ.ಆದರೆ ಇಂದು ಯಾವುದೇ ಕೆಲಸ ಕಾಮಗಾರಿಗಳು ನಡೆಯದೆ ಇರುವುದರಿಂದ ಅತ್ಯಂತ ನೋವು ಬೇಜಾರು ಇದೆ. ಈಗ ಕೇವಲ ಪುರಸಭೆ ಹೋದೆ, ಬಂದೆ ಅನ್ನುವ ಹಾಗೆ ಇದೆ.ಆದರೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಮನದಾಳದ ಮಾತು.
ಭೀಮನಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ.
ಅನುದಾನದ ಕೊರತೆಯಿರುವುದರಿಂದ ಕೆಲಸಗಳು ನಿಧಾನಗತಿಯಲ್ಲಿ ನಡೆದಿವೆ. ಪುರಸಭೆ ಸದಸ್ಯರ ವಿಶ್ವಾಸ ತೆಗೆದುಕೊಂಡು ಪ್ರತಿ ವಾರ್ಡಲ್ಲಿ ಅವಶ್ಯಕವಿರುವ ಕೆಲಸಗಳು ಒಂದೊಂದಾಗಿ ಮಾಡುತ್ತಿದ್ದೇವೆ. ಸಿಗ್ನಲ್ ದೀಪದ ಕುರಿತು ಪೋಲೀಸ್ ಇಲಾಖೆ ಹಾಗೂ ತಾಲ್ಲೂಕು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ದೀಪದ ಸಮಸ್ಯೆ ಕುರಿತು ಚೆರ್ಚೆ ಮಾಡಿದ್ದು, ಅತೀ ಶೀಘ್ರದಲ್ಲೇ ಮಾಡಲಾಗುವುದು.
ಮಹಾಂತೇಶ ಹಂಗರಗಿ, ಪುರಸಭೆ ಮುಖ್ಯಾಧಕಾರಿ
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ನೇಮಕಕ್ಕೆ ಸಂಬAಧಿಸಿದAತೆ ವ್ಯಾಜ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಮೀಸಲು ಸರತಿ ಯಾವ ರೀತಿ ಇರಬೇಕೆಂಬುದಕ್ಕೆ ಅವಶ್ಯಕ ಮಾಹಿತಿ ನೀಡಲಾಗಿದೆ. ಇನ್ನೂ ಸರಕಾರದ ನಿರ್ದೇಶನ ಬಂದ ಕೂಡಲೇ ಸರಕಾರದ ಮಾರ್ಗಸೂಚಿಯಂತೆ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.
ಅಬೀದ್ ಗದ್ಯಾಳ, ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಪುರಸಭೆ ಆಡಳಿತ ಅಧಿಕಾರಿ
ಬಸವೇಶ್ವರ ವೃತ್ ದಲ್ಲಿ ಸ್ಥಗಿತಗೊಂಡ ಸಿಗ್ನ ದೀಪ ಚಿತ್ರ.

ವಿಜಯಪುರ ಮುಖ್ಯ ರಸ್ತೆ ಸೇವಾಲಾಲ ವೃತದಲ್ಲಿ ಬಿಡಾಡಿ ದನಗಳ ಹಿಂಡು,

ಮಹಾವೀರ ವೃತದಲ್ಲಿ ನಿಂತಿರುವ ಕಾಮಗಾರಿ ಹಾಗೂ ಊರಿಯದ ಬೀದಿ ದೀಪಗಳು

ಭಾಗವಾನ ಗಲ್ಲಿಯಲ್ಲಿ ಆಮೇಗತಿಯಲ್ಲಿ ನಡೆದ ಕಾಮಗಾರಿ.

ರೇವಪ್ಪ ಮಡ್ಡಿಯಲ್ಲಿ ಗಟಾರು ತುಂಬಿಕೊAಡು ಕೊಳೆತು ನಾರುತ್ತೀರುವ ಕೆಟ್ಟ ದುರವ್ಯವಸ್ಥೆ.

ನೂರಂದೇಶ್ವರ ಐಟಿಐ ಶಾಲೆಯ ಮುಂಭಾಗದ ರಸ್ತೆಯಲ್ಲಿ ಸುಮಾರು ೪ ಅಡಿಕ್ಕಿಂತಲೂ ಆಳವಿರುವ ಚರಂಡಿ ವ್ಯವಸ್ಥೆ.
