ಆಷಾಢ ಮಾಸದ ಮೊದಲ ಮಂಗಳವಾರ ಶ್ರೀ ಬೆಟ್ಟಳ್ಳಿ ಮಾರಮ್ಮನಿಗೆ ಕೊಬ್ಬರಿ ಅಲಂಕಾರದ ವಿಶೇಷ ಪೂಜೆ : ಅರ್ಚಕರಾದ ಜಯಂತ್ ರಾವ್ ಸಿಂದೆ .
ಹನೂರು: ಗ್ರಾಮದ ಆದಿ ದೇವತೆಯಾದಂತಹ ಶ್ರೀ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಆಷಾಡ ಮಾಸದ ಮೊದಲ ಮಂಗಳ ವಾರದ ಪ್ರಯುಕ್ತ ಗ್ರಾಮ ದೇವತೆ 251 ಕೊಬ್ಬರಿ ವಿಶೇಷ ಅಲಂಕಾರ ಪಂಚಾಮೃತ ಅಭಿಷೇಕ ,ಅರಿಸಿನ ಅಭಿಷೇಕ , ಕುಂಕುಮ ಅಭಿಷೇಕ ಸೇರಿದಂತೆ ಹಲವಾರು ಪೂಜಾ ವಿಧಿ ವಿಧಾನದೊಂದಿಗೆ ಬೆಳಗಿನ ಜಾವ 4:30 ರಲ್ಲಿ ಮಹಾಮಂಗಳಾರತಿಯನ್ನು ಅರ್ಚಕರಾದ ಜಯಂತ್ ರಾವ್ ನಡೆಸಿಕೊಟ್ಟರು .
ಹನೂರು ಪಟ್ಟಣದ ಅಧಿದೇವತೆಯಾದ ಶ್ರೀ ಬೆಟ್ಟಳ್ಳಿಮಾರಮ್ಮನ ದೇವಾಲಯದಲ್ಲಿ ಮೊದಲನೇ ಮಂಗಳವಾರದ ಆಷಾಡ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನ ಗಳೊಂದಿಗೆ ಅರ್ಚಕರುಗಳಾದ ರಾಜೋಜಿ ರಾವ್ ಜಯಂತ್ ರಾವ್ ಅರುಣ್ ರಾವ್ ನಡೆಸಿಕೊಟ್ಟರು.
ಅಲಂಕಾರದಲ್ಲಿ ವಿಜೃಂಬಿಸಿದ ಗ್ರಾಮದೇವತೆ:
ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದಲ್ಲಿ ಹೂ ತೆಂಗಿನ ಗರಿ ,ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು , ಮೊದಲನೇ ಮಂಗಳವಾರ ಆಷಾಢ ಪ್ರಯುಕ್ತ ಹೂಗಳಿಂದ ಸಿಂಗರಿಸಿ ದೇವಿಯ ಗರ್ಭಗುಡಿಯಲ್ಲಿ ಕೊಬ್ಬರಿಯನ್ನು ವಿಶೇಷವಾಗಿ ಅಲಂಕಾರ ಮಾಡುವ ಮೂಲಕ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಪೂಜೆಯಲ್ಲಿ ಪಾಲ್ಗೊಂಡ ಭಕ್ತರು:
ಮೊದಲನೇ ಮಂಗಳವಾರ ಆಷಾಢ ಪ್ರಯುಕ್ತ ಪಟ್ಟಣ ಸೇರಿ ದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಅಪಾರ ಸಂಖ್ಯೆಯ ಭಕ್ತಾದಿಗಳು ಬೆಳಗಿ ನಿಂದಲೇ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾ ಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವಿಯ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಸು ವಂತೆ ನಿವೇದನೆ ಮಾಡಿ ಕೊಳ್ಳುವ ಮೂಲಕ ಪುನೀತರಾದರು ಎಂದು ಅರ್ಚಕರಾದ ಜಯಂತ್ ರಾವ್ ಹಾಗೂ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಿಂಗರಾಜುರವರು ತಿಳಿಸಿದರು .




















