ಕ್ಯಾನ್ಸರ್ ರೋಗಕ್ಕೆ ಕಡಿಮೆ ಖರ್ಚಿನ ಪಂಚಗವ್ಯ ಚಿಕಿತ್ಸೆ ರಾಮಬಾಣ
ವಿಜಯಪುರ : ಆದರ್ಶ ನಗರದಲ್ಲಿರುವ ಓಜಶ್ರೀ ಆಯುರ್ವೇದ ಚಿಕಿತ್ಸಾಲಯದಲ್ಲಿ ಪಂಚಗವ್ಯ ಆಧಾರಿತ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಜೋಡೆತ್ತಿನ ಕೃಷಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ ಅಭೀಃ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಶಿಬಿರವು ಕಂಚೂರಿನ ಶ್ರೀ ಸವಿತಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜರಗಿತು. ಪಂಚಗವ್ಯ ಆಧಾರಿತ ಚಿಕಿತ್ಸೆಯಲ್ಲಿ ಪರಿಣಿತಿ ಹಾಗೂ 25 ವರ್ಷಕಿಂತ ಹೆಚ್ಚು ಅನುಭವ ಹೊಂದಿದ ಬೆಂಗಳೂರಿನ ತಜ್ಞ ವೈಧ್ಯರು ಹಾಗೂ ಆನ್ಸರ್ ಫಾರ ಕ್ಯಾನ್ಸರ್ ಪುಸ್ತಕದ ಲೇಖಕರಾದ ಡಾ॥ ಡಿ. ಪಿ. ರಮೇಶ ಇವರು ಮಾತನಾಡಿ ಕ್ಯಾನ್ಸರ್ ರೋಗಕ್ಕೆ ಸರಳ ಹಾಗೂ ಕಡಿಮೆ ಖರ್ಚಿನ ಉಪಾಯ ಪಂಚಗವ್ಯ ಚಿಕಿತ್ಸೆಯಲ್ಲಿದೆ. ಹಲವು ಪ್ರಯತ್ನದಿಂದಲೂ ವಾಸಿಯಾಗದ ಕ್ಯಾನ್ಸರ್ ರೋಗವನ್ನು ಪಂಚಗವ್ಯ ಚಿಕಿತ್ಸೆಯಿಂದ ವಾಸಿಮಾಡಲಾಗಿದೆ. ಇದರ ಅರಿವು ಅನೇಕರಿಗೆ ಇಲ್ಲದ ಕಾರಣ ಕ್ಯಾನ್ಸರ್ ರೋಗಿಗಳು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ವಿಜಯಪುರದಲ್ಲಿ ಪ್ರತಿ ತಿಂಗಳು ಉಚಿತ ಪಂಚಗವ್ಯ ಚಿಕಿತ್ಸಾ ಶಿಬಿರ ಆಯೋಜಿಸುವ ಯೋಜನೆಯಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸವಿತಾನಂದನಾಥ ಸ್ವಾಮೀಜಿಯವರು ಮಾತನಾಡಿ, ನಮ್ಮ ದೇಸಿ ಹಸುವಿನ ಉತ್ಪನ್ನಗಳಿಗೆ ಹಲವು ರೋಗಗಳನ್ನು ವಾಸಿಮಾಡುವ ಶಕ್ತಿಯಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಜನರು ಮುಂದಾಗಬೇಕಾಗಿದೆ ಎಂದರು.
ಜೋಡೆತ್ತಿನ ಕೃಷಿಕರ ಸಂಘಟಕರಾದ ಬಸವರಾಜ ಬಿರಾದಾರ ಅವರು ಮಾತನಾಡಿ ನಂದಿ ಕೃಷಿ ನಾಶವಾದಂತೆ ಗುಣಮಟ್ಟದ ಆಹಾರದ ಕೊರತೆಯಾಗಿ ಜನರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ನಂದಿ ಕೃಷಿ ಪುನಶ್ಚೇತನ ಕಾರ್ಯವಾಗಬೇಕಾಗಿದೆ ಎಂದರು. ಓಜಶ್ರಿ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಮನೋಜ ಯಲಮೇಲಿ ಅವರು ಮಾತನಾಡಿ ಪಂಚಗವ್ಯ ಚಿಕಿತ್ಸೆಯು ಕ್ಯಾನ್ಸರ್ ಹಾಗೂ ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀ ವಿಠಲ ತೇಲಿ, ಉದಯ ಯಾಳವಾರ, ಬಸವರಾಜ ಕೋನರಡ್ಡಿ, ಅರವಿಂದ ಕವಲಗಿ, ಅಭಿಶೇಕ ಬಿರಾದಾರ, ಎಸ್ ಎಮ್ ಹುಗ್ಗಿ ಹಾಗೂ ಇತರರು ಭಾಗವಹಿಸಿದ್ದರು.