ಶರಿಯತ್ ವಿರೋಧಿ ಚಟುವಟಿಕೆ ನಿಯಂತ್ರಿಸಿ
ಇಂಡಿ : ಮುಸ್ಲಿಂ ಸಮಾಜದಲ್ಲಿ ವಿವಾಹ ಸಮಾರಂಭದಲ್ಲಿ ಶರಿಯತ್ ವಿರೋಧಿ ಚಟುವಟಿಕೆಗಳು ನಿಯಂತ್ರಿಸಲು ಮುಸ್ಲಿಂ ಸಮಾಜದ ಯುವಕರು ಅಂಜುಮನ್ ಇಸ್ಲಾಂ ಕಮೀಟಿ ಇಂಡಿ ಇವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮುಸ್ಲಿಂ ಸಮಾಜದ ವಿವಾಹ ಸಮಾರಂಭದಲ್ಲಿ ರಾತ್ರಿ ವೇಳೆಯಲ್ಲಿ ಧ್ವನಿವರ್ಧಕ (ಆಎ) ಬೆಳಕೆ ಮಾಡಿ. ಜೂಜಾಟ ಆಡುತ್ತಾ ಸಾರಾಯಿ ಕುಡಿದು ನೃತ್ಯ (ಕುಣಿತ) ಸೇರಿದಂತೆ ಅನೇಕ ಶರಿಯತ ವಿರೋಧಿ ಚಟುವಟಿಕೆಗಳನ್ನು ಹೆಚ್ಚಾಗಿದ್ದು ಕಂಡಬಂದಿರುತ್ತದೆ. ಇಂತಹ ಚಟುವಟಿಕೆಗಳು ನಿಯಂತ್ರಿಸಲು ತಾವುಗಳು ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಮೌಲಾನಾ ರಿಯಾಜ, ಫಜಲುಲ ಮುಲ್ಲಾ, ಸಾಲಾಹುದ್ದಿನ ನಾಗೂರ, ಅಬುಬಕರ ರೂಗಿ, ಎಂ.ಎಚ್ ಅರಬ, ಬಾಬಾ ಇಖ್ತಿಯಾರ, ವಸೀಮ ಮನೂರ ಸಾದಿಕ ಬಾಗವಾನ, ಇಬ್ರಾಹಿಂ ಮಕಾಂದಾರ , ಮುಸ್ತಾಕ ಖಾಜಿ, ವಸೀಮ ವಾಲಿಕಾರ, ನದೀಮ ವಾಲಿಕಾರ, ಕೈಫ್ ಇಂಡಿಕರ, ಜೈದ್ ಗೌರ, ಜಾಬೀರ ಲಕ್ಷ್ಕೇರಿ, ಸಲಿಂ ಮುಲ್ಲಾ ಮತ್ತಿತರಿದ್ದರು
ಅಂಜುಮನ್ ಅಧ್ಯಕ್ಷ ಅಫಜಲ್ ಹವಾಲದಾರ ಮತ್ತು ಉಪಾಧ್ಯಕ್ಷ ಹುಸೇನಿ ಬೇಪಾರಿ ಇವರಿಗೆ ಮನವಿ ಸಲ್ಲಿಸಿದರು.
ಇಂಡಿಯ ಮುಸ್ಲಿಂ ಸಮಾಜದ ಯುವಕರು ಅಂಜುಮನ್ ಇಸ್ಲಾಂ ಕಮೀಟಿ ಇಂಡಿ ಇವರಿಗೆ ಮನವಿ ಸಲ್ಲಿಸಿದರು.