ಹಿರೇಬೇವನೂರ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ..!
ಇಂಡಿ: ತಾಲೂಕಿನ ಹಿರೇಬೇವನೂರದ ಶ್ರೀ ಶಿವಕುಮಾರ ಸಕ್ಕರೆ ಕಾರ್ಖಾನೆಯವರು ಟ್ರಾö್ಯಕ್ಟರ್‌ದಿಂದ ಕಬ್ಬು ಸಾಗಿಸಿದ ಮತ್ತು ಕಬ್ಬು ಕಟಾವು ಮಾಡುವವರ ಬಿಲ್ಲು ನೀಡಿದ್ದು ವಿರೋಧಿಸಿ ರೈತರು ಇಂದು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ಗ್ರೇಡ-೨ ತಹಶಿಲ್ದಾರ ಧನಪಾಲ ಶೇಟ್ಟಿ ದೇವುರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಕಾರರನ್ನು ಉದ್ದೇಸಿಸಿ ಮಾತನಾಡಿದ ಗಿರಿಮಲ್ಲಗೌಡ ಬಿರಾದಾರ, ೨೦೧೮–೧೯ ರಲ್ಲಿ ಟ್ರಾö್ಯಕ್ಟರ ಮಾಲಿಕರು ಮತ್ತು ಕಬ್ಬು ಕಟಾವುದಾರರು ಕೆಲಸ ಮಾಡಿದ್ದು, ಬಿಲ್ಲಿನ ಕುರಿತು ಈ ಹಿಂದೆ ತಹಸೀಲ್ದಾರರಿಗೆ ಮತ್ತು ಜಿಲ್ಲಾಧಿಕಾರಿ ವಿಜಯಪುರ ಇವರಿಗೆ ಹಲವಾರು ಬಾರಿ ವಿನಂತಿಸಿದ್ದೇವು. ಆಗ ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾರಿದ ಬಳಿದ ಹಣ ನೀಡುವ ಕುರಿತು ತಿಳಿಸುವದಾಗಿ ತಿಳಿಸಿದ್ದರು.
ಈಗ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ ದಿಂದ ರೂ ೩೦೦ ಚೆಕ್ಕು ನೀಡಿದ್ದಾರೆ ಎಂದು ಆರೋಪಿಸಿದರು. ಒಟ್ಟು ೨೬೧ ರೈತರಿಗೆ ೨ ಕೋಟಿ ೪೦ ಲಕ್ಷ ಹಣ ಬರಬೇಕಾಗಿದ್ದು ಪ್ರತಿ ರೈತರಿಗೆ ಒಂದು ಲಕ್ಷಕ್ಕೆ ೧೦೦ ರೂ ಯಂತೆ ಹಣ ಎನ್‌ಸಿಎಲ್‌ಟಿ ಕೋರ್ಟು ಮೂಲಕ ನೀಡಿದ್ದಾರೆ ಎಂದರು.
ಒಂದು ವೇಳೆ ನಮಗೆ ಬರತಕ್ಕ ಹಣ ನೀಡದಿದ್ದರೆ ಬರುವ ದಿನಗಳಲ್ಲಿ ಶಿವಕುಮಾರ ಸಕ್ಕರೆ ಕಾರ್ಖಾನೆ ಎದುರು ಧರಣ ಸತ್ಯಾಗ್ರಹ ಪ್ರತಿಭಟನೆ ಮಾಡಲಾಗುವದು ಎಂದರು.
ಪ್ರತಿಭಟನೆಯಲ್ಲಿ ವತ್ತು ಸಾಹುಕಾರ ಹವಳಗಿ, ವಿಠ್ಠಲ ಅರ್ಜುಣಗಿ, ಶಿವಶರಣ ನಾಟೀಕಾರ, ಕಾಶೀನಾಥ ಚೌಗಲೆ, ಭೀಮರಯ ಪೂಜಾರಿ, ಸುರೇಶ ಸಾತಲಗಾಂವ, ಸಂಗಮಬಸು ಜಂಗಮಶೆಟ್ಟಿ, ಜಗದೇವ ಪಾಟೀಲ, ಬುಡ್ಡಸಾಬ ಕಾರಜೋಳ, ವಿರೋಪಾಕ್ಷಯ ಮಠಪತಿ, ಶಾಂತಪ್ಪ ಹಿರೇಕುರಬರ, ಅಣ್ಣಪ್ಪ ವಾಡಿ, ಸಿದ್ದು ತಡಲಗಿ ಮತ್ತಿತರಿದ್ದರು.