ಖಾಸಗಿ ಆಸ್ಪತ್ರೆಗಳ ಮೇಲೆ ಡಿಎಚ್‌ಓ ಧೀಡೀರ್ ದಾಳಿ..! ಹೇಳಿದ್ದೇನು..?
ಅನುಮತಿ ಇಲ್ಲದವರನ್ನು ಬಂದ ಮಾಡುವಂತೆ ಎಚ್ಚರಿಕೆ
ಚಡಚಣ : ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಹಾಗೂ ಕಣ್ಣು ತಪಾಸಣೆ ಮಳಿಗೆಗಳ ಮೇಲೆ ಡಿಎಚ್‌ಓ ದಿಢೀರ ದಾಳಿ ನಡೆಸಿ ಪರಿಶೀಲಿಸಿದ ಘಟನೆ ಮಂಗಳವಾರ ನಡೆಯಿತು.
ನಂತರ ಮಾತನಾಡಿದ ಡಿಎಚ್‌ಓ ಡಾ. ಬಿ.ಜಿ ಹುಬ್ಬಳ್ಳಿ, ಇಂಡಿ, ಚಡಚಣ ಹಾಗೂ ಸಿಂದಗಿ ಭಾಗಗಳ ಖಾಸಗಿ ಆಸ್ಪತ್ರೆಯಲ್ಲಿ ಬ್ರೂಣ ಹತ್ಯೆ ನಡೆಯುತ್ತಿರುವ ವಿಷಯ ಮಾದ್ಯಮದಲ್ಲಿ ಬರುತ್ತಿರುವದರ ನಿಮಿತ್ಯ ತಾಲೂಕಿನ ವಿವಿಧ ಖಾಸಗಿ ಆಸ್ಪತ್ರೆಯನ್ನು ದಿಢೀರ ಬೇಟಿ ನೀಡಿ ಪರಿಶೀಲಿಸುತ್ತಿದ್ದೇವೆ. ಅಂತಹ ಆಸ್ಪತ್ರೆಗಳು ಕಂಡು ಬಂದಿಲ್ಲ. ಆದರೂ ನೇತ್ರ ತಪಾಸಣೆ ಕೇಂದ್ರ ಅಂತ ನಾಮಕರಣ ಮಾಡಿರುವ ಮಳಿಗೆಗಳಲ್ಲಿ ಅಕ್ರಮವಾಗಿ ಕಣ್ಣು ತಪಾಸಣೆ ಮಾಡುವ ಯಂತ್ರಗಳು ಕಂಡುಬಂದಿದ್ದು, ಅಂತವರನ್ನು ಗುರುತಿಸಿ ಅವರಿಗೆ ನಾಮಫಲಕಗಳನ್ನು ತೆಗೆಯಲು ಈಗಾಗಲೇ ಸೂಚಿಸಿಲಾಗಿದೆ. ಮುಂದೆಯೂ ಈ ಕೆಲಸ ಮುಂದುವರೆದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ತಾಲೂಕಿನ ಆರ್‌ಎಂಪಿ ವೈದ್ಯರ ಹಾವಳಿ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಇದೆ. ಅಂತವರ ಮೇಲೆಯೂ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.